ನಮಸ್ತೇ ಪ್ರಿಯ ಓದುಗರೇ, ಕಲ್ಲು ಸಕ್ಕರೆ ಸೇವನೆ ಇಂದ ಏನಾಗುತ್ತದೆ ಗೊತ್ತೇ? ಹಾಗೂ ಕೆಂಪು ಕಲ್ಲು ಸಕ್ಕರೆ ಗಿಂತ ಬಿಳಿ ಕಲ್ಲು ಸಕ್ಕರೆ ಹಾನಿಕರ ಅಥವಾ ಅಲ್ಲವೇ ಅನ್ನುವುದರ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ. ಕಲ್ಲು ಸಕ್ಕರೆ ಮತ್ತು ಬಿಳಿ ಸಕ್ಕರೆ ಒಂದೇ ಇರುತ್ತದೆ ಹಾಗೂ ಇದರಲ್ಲಿ ಏನಿದೆ ಅಂತ ನೀವು ಯೋಚನೆ ಮಾಡುತ್ತಿರಬಹುದು ಕಲ್ಲು ಸಕ್ಕರೆ ಬಹಳ ಉತ್ತಮ ಬಿಳಿ ಸಕ್ಕರೆಗೆ ಹೋಲಿಕೆ ಮಾಡಿದರೆ ಗೆಳೆಯರೇ, ಇದನ್ನು ಮಾಡುವ ವಿಧಾನದ ಬಗ್ಗೆ ಹೇಳುವುದಾದರೆ, ಬೆಲ್ಲ ಮತ್ತು ಸಕ್ಕರೆ ತಯಾರಿಸುವ ಉಳಿದ ಪದಾರ್ಥಗಳ ಜೊತೆಗೆ ಸಾವಯವ ಪದಾರ್ಥಗಳನ್ನು ಮಿಶ್ರಣ ಮಾಡಿ ಕಲ್ಲು ಸಕ್ಕರೆ ತಯಾರಿಸುತ್ತಾರೆ. ವಿಶೇಷವಾಗಿ ಬಿ12 ಮಾಂಸದಲ್ಲಿ ಮಾತ್ರ ಸಿಗುತ್ತದೆ ಆದರೆ ಅಷ್ಟೇ ಪ್ರಮಾಣದ ಬಿ12 ಕಲ್ಲು ಸಕ್ಕರೆ ಯಲ್ಲಿ ಕೂಡ ಇದೆ. ಇದರಲ್ಲಿ ಪ್ರೊಟೀನ್ ಗಳು ಖನಿಜಗಳು ಹೇರಳವಾಗಿ ಇವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ಆಗುವ ಲಾಭಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಮೊದಲನೆಯ ಲಾಭ, ಇತ್ತೀಚಿನ ದಿನಗಳಲ್ಲಿ, ಹಿಮೋಗ್ಲೋಬಿನ್ ಕೊರತೆ ಎಂಬ ಸಮಸ್ಯೆ ಇಂದ ಬಹಳಷ್ಟು ಜನರು ತತ್ತರಿಸಿ ಹೋಗುತ್ತಿದ್ದಾರೆ. ನಿಮಗೆ ಗೊತ್ತೇ? ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೆ ಸುಸ್ತು ಆಯಾಸ ತಲೆನೋವು ತಲೆ ಸುತ್ತು ಎಲ್ಲ ಬಗೆಯ ಸಮಸ್ಯೆಗಳು ಕಾಡಲು ಶುರು ಆಗುತ್ತವೆ. ಆದರೆ ಕಲ್ಲು ಸಕ್ಕರೆ ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತದೆ. ಹಾಗೂ ಇವೆಲ್ಲ ಸಮಸ್ಯೆಗಳಿಂದ ಪಾರಾಗಬಹುದು. ಇನ್ನೂ ಎರಡನೆಯದು, ಕಲ್ಲು ಸಕ್ಕರೆ ತಿನ್ನುವುದರಿಂದ ಒಣಕೆಮ್ಮು ಹಾಗೂ ದೀರ್ಘಕಾಲದ ಕೆಮ್ಮು ಕೂಡ ನಿವಾರಣೆ ಆಗಬಹುದು. ಹೌದು ನಿಮಗೆ ಕೆಮ್ಮು ಬಂದಾಗ ನೀವು ಕಲ್ಲು ಸಕ್ಕರೆ ಅನ್ನು ಬಾಯಲ್ಲಿ ಹಾಕಿ ಚಪ್ಪರಿಸುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಫುಡ್ ಸ್ಟೈಲ್ ಕಾರಣದಿಂದ ಮಲಬದ್ಧತೆ ಅಸಿಡಿಟಿ ಅಜೀರ್ಣತೆ ಸಮಸ್ಯೆಗಳು ಕಂಡು ಬರುತ್ತಿವೆ. ಇವುಗಳು ನಮ್ಮ ಗಮನಕ್ಕೆ ಬಂದರೂ ಕೂಡ ಅವುಗಳನ್ನು ನಾವು ನಿರ್ಲಕ್ಷ್ಯವನ್ನು ಮಾಡಿ ಮತ್ತೆ ಜಂಕ್ ಫುಡ್ ಸೇವನೆ ಮಾಡುತ್ತಾ ಮತ್ತಷ್ಟು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ.
ಅದಕ್ಕಾಗಿ ಉತ್ತಮವಾದ ಉಪಾಯ ಏನು ಮಾಡಬೇಕೆಂದರೆ ಊಟವಾದ ಮೇಲೆ ನೀವು ಕಲ್ಲು ಸಕ್ಕರೆ ಅನ್ನು ಸೇವನೆ ಮಾಡಬೇಕು. ಜೊತೆಗೆ ಸ್ವಲ್ಪ ಜೀರಿಗೆ ಹಾಕಿ ಸೇವನೆ ಮಾಡುವುದರಿಂದ ಅಜೀರ್ಣತೆ ಸಮಸ್ಯೆ ಮಂಗ ಮಾಯ ಆಗುತ್ತದೆ. ಮತ್ತು ಕಣ್ಣಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಕಣ್ಣಿನ ಸುತ್ತ ಪೊರೆ ಆಗುವುದನ್ನು ತಪ್ಪಿಸುತ್ತದೆ. ಹಾಗೂ ದಿನವಿಡೀ ಕಂಪ್ಯೂಟರ್ ಗಳ ಮುಂದೆ ಕೆಲಸ ಮಾಡುತ್ತಾ ಇದ್ದಾರೆ ಪ್ರತಿನಿತ್ಯವೂ ಸ್ವಲ್ಪ ಕಲ್ಲು ಸಕ್ಕರೆ ಸೇವನೆ ಮಾಡುತ್ತಾ ಬನ್ನಿ. ಇನ್ನೂ ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಹಾಲಿನಲ್ಲಿ ಕಲ್ಲು ಸಕ್ಕರೆಯನ್ನು ಹಾಕಿ ಕುಡಿಸಬೇಕು. ಇದರಿಂದ ಮಕ್ಕಳು ಬುದ್ದಿಶಾಲಿ ಗಳು ಆಗುತ್ತಾರೆ. ಇನ್ನೂ ತಿಂದ ಆಹಾರವೂ ಬಾಯಿಯಲ್ಲಿ ಆಗಾಗ ಸಿಕ್ಕಿ ಕೊಳ್ಳುತ್ತದೆ ಇದರಿಂದ ಬಾಯಲ್ಲಿ ಬ್ಯಾಕ್ಟೀರಿಯ ಹಾಗೂ ಬಾಯಿಯಿಂದ ದುರ್ಗಂಧ ಬರುತ್ತದೆ. ಅದಕ್ಕಾಗಿ ನೀವು ಊಟವಾದ ಮೇಲೆ ಬಾಯಲ್ಲಿ ಕಲ್ಲು ಸಕ್ಕರೆ ಹಾಕಿಕೊಂಡು ಚಪ್ಪರಿಸಬೇಕು. ಇನ್ನೂ ಬೇಸಿಗೆಯಲ್ಲಿ ಮೂಗಿನಿಂದ ರಕ್ತ ಬರುತ್ತದೆ. ಆಗ ನೀವು ನೀರಿನಲ್ಲಿ ಕಲ್ಲು ಸಕ್ಕರೆ ಹಾಕಿ ಕುಡಿಸಿದರೆ ರಕ್ತಸ್ರಾವ ನಿವಾರಣೆ ಆಗುತ್ತದೆ. ಶುಭದಿನ.