ಐದೇ ನಿಮಿಷದಲ್ಲಿ ಗ್ಯಾಸ್ಟ್ರಿಕ್ ಮಂಗ ಮಾಯ ಆಗುತ್ತದೆ. ಇಲ್ಲಿದೆ ಮನೆಮದ್ದುಗಳು.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ಹಾಗಾದರೆ ಚಿಂತೆ ಮಾಡಬೇಡಿ. ಗ್ಯಾಸ್ಟ್ರಿಕ್ ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದೇನೋ ಭಾರೀ ಎನ್ನುವಂತಹ ತೊಂದರೆ ಅಲ್ಲದಿದ್ದರೂ ಜನರ ಮಧ್ಯೆ ಮುಜುಗರ ಉಂಟು ಮಾಡುತ್ತದೆ. ಇನ್ನೂ ನಿಮಗೆ ಗೊತ್ತೇ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದರೆ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ. ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಪೂರ್ಣವಾಗಿ ಗಟ್ಟಿಯಾಗಿ ಶಬ್ದ ಬರುತ್ತದೆ. ಹಾಗೂ ಇದರಿಂದ ತುಂಬಾನೇ ಮುಜುಗರ ಉಂಟು ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣವಾಗಿ ನಮ್ಮ ಮನೆಯಲ್ಲೇ ಇವೆ. ಆದರೆ ನಮಗೆ ಮಾತ್ರ ಗೊತ್ತಿರುವುದಿಲ್ಲ. ಇಲ್ಲಿದೆ ಅವುಗಳ ಬಗ್ಗೆ ಮಾಹಿತಿ. ಬದಲಾದ ಜೀವನ ಶೈಲಿ ಇಂದ ನಮ್ಮ ಆರೋಗ್ಯವೂ ಕೂಡ ಸಾಕಷ್ಟು ಹದಗೆಟ್ಟಿದೆ. ಇದಕ್ಕೆಲ್ಲ ಮುಖ್ಯ ಕಾರಣ ಅಂದರೆ ಕೆಲಸದ ಒತ್ತಡ. ಹೌದು ಈಗಿನ ಯುವಜನತೆ ಹೆಚ್ಚಾಗಿ ಕೆಲಸ ಮಾಡುವುದರಿಂದ ಸರಿಯಾದ ಸಮಯಕ್ಕೆ ಊಟವನ್ನು ಮಾಡುವುದಿಲ್ಲ. ಹೀಗಾಗಿ ಸಮಯದ ವ್ಯತ್ಯಾಸವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಶುರು ಆಗುತ್ತದೆ ಕೆಲಸದ ಒತ್ತಡ ಮಾತ್ರವಲ್ಲದೆ, ಸರಿಯಾದ ಸಮಯಕ್ಕೆ ನಿದ್ದೆಯನ್ನು ಮಾಡದೇ ಇದ್ದರೂ ಕೂಡ ಎದೆಯಲ್ಲಿ ಉರಿ ಶುರು ಆಗುತ್ತದೆ ಹೊಟ್ಟೆ ಉಬ್ಬುತ್ತದೆ.

 

ಈ ಪ್ರಪಂಚದಲ್ಲಿ ಶೇಕಡಾ 40% ರಷ್ಟು ಜನರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮ್ಮ ಜೀರ್ಣ ಶಕ್ತಿ ಸರಿಯಾಗಿದ್ದರೆ ಸಾಕಷ್ಟು ರೋಗಗಳನ್ನು ತಡೆಯಬಹುದು.
ನಮ್ಮ ದೇಹದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ರೋಗ ಲಕ್ಷಣಗಳನ್ನು ನಿವಾರಣೆ ಮಾಡಿಕೊಳ್ಳುವ ಹಾಗೆ ನಮ್ಮ ಮನೆಯಲ್ಲಿರುವ ಕೆಲವೊಂದು ಆರೋಗ್ಯಕರವಾದ ಉತ್ಪನ್ನಗಳು ನಮ್ಮ ಸಹಾಯಕ್ಕೆ ಬರಲಿವೆ. ಬನ್ನಿ ಈ ಲೇಖನದಲ್ಲಿ ಅವುಗಳ ಬಗ್ಗೆ ಮಾಹಿತಿ ತಿಳಿದು ಕೊಳ್ಳೋಣ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣಗಳು ಅಂದರೆ ಅತಿಯಾದ ಮಧ್ಯಪಾನ ಧೂಮಪಾನ ಮಾಡುವುದು, ಹಾಗೂ ಅಧಿಕ ಒತ್ತಡ ಯೋಚನೆಗಳು ಚಿಂತನೆಗಳು ಮಾಡುವುದು ಇದಕ್ಕೆ ಬಲವಾದ ಕಾರಣಗಳು ಆಗಿವೆ. ಹಾಗೂ ಅತಿಯಾದ ಮಸಾಲೆ ಪದಾರ್ಥಗಳನನ್ನು ಸೇವನೆ ಮಾಡುವುದರಿಂದ ಕೂಡ ಗ್ಯಾಸ್ಟ್ರಿಕ್ ಟ್ರಬಲ್ ಬರುತ್ತದೆ. ಹಾಗೂ ಅತಿಯಾದ ಟೀ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಶುರು ಆಗುತ್ತದೆ.

 

ಹಾಗಾದರೆ ಇದಕ್ಕೆ ನಾವು ಒಂದು ಔಷಧವನ್ನು ತಿಳಿಸಿ ಕೊಡುತ್ತೇವೆ ಅದನ್ನು ಹೇಗೆ ಮಾಡುವುದು ಅಂತ ಹೇಳುವುದಾದರೆ, ಶುಂಠಿ ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು. ಅದು ತಣ್ಣಗಾದ ಮೇಲೆ ಅದನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಟ್ರಬಲ್ ನಿವಾರಣೆ ಆಗುತ್ತದೆ. ಶುಂಠಿ ಬಹಳ ಖಾರವಾಗಿ ಇರುತ್ತದೆ ಆದ್ದರಿಂದ ನೀವು ಅದನ್ನು ಸ್ವಲ್ಪ ಬಿಟ್ಟು ಬಿಟ್ಟು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ಹೊಟ್ಟೆಯ ಭಾಗದ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಗೆ ರಾಮಬಾಣವಾಗಿ ಏಲಕ್ಕಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೊಟ್ಟೆಯ ಭಾಗದಲ್ಲಿ ಉತ್ಪತ್ತಿಯಾಗುವ ಆಮ್ಲಿಯ ಪ್ರಮಾಣವನ್ನು ತಗ್ಗಿಸುವ ಗುಣ ಕಂಡುಬರುತ್ತದೆ. ಆದ್ದರಿಂದ ಊಟವಾದ ಮೇಲೆ ಏಲಕ್ಕಿ ಸೇವನೆ ಮಾಡಿ. ಒಂದು ಲೋಟ ತಂಪಾದ ಹಾಲು, ಹೊಟ್ಟೆಯ ಭಾಗಕ್ಕೆ ಹೆಚ್ಚಿನ ಶಾಂತತೆಯನ್ನು ನೀಡಿ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇವುಗಳನ್ನು ನೀವು ಮಾಡಿ ನೋಡಿ ಖಂಡಿತವಾಗಿ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದೇ ಇಲ್ಲ ಗೆಳೆಯರೇ. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *