ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಇಂತಹ ಆಹಾರವನ್ನು ಸೇವನೆ ಮಾಡಿ. ಅವುಗಳ ಪಟ್ಟಿ ಇಲ್ಲಿದೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಇದನ್ನು ಸೇವನೆ ಮಾಡಿದರೆ ಎಲ್ಲಿಲ್ಲದ ನಿದ್ರೆ ನಿಮ್ಮನ್ನು ಆವರಿಸುತ್ತದೆ. ಇಂದಿನ ಜಗತ್ತಿನಲ್ಲಿ ಕಾಡುವ ಬಹುತೇಕ ಸಮಸ್ಯೆ ಅಂದರೆ ಅದು ನಿದ್ರಾಹೀನತೆ ಸಮಸ್ಯೆ. ಸುಖವಾದ ನಿದ್ರೆಯನ್ನು ಯಾರು ಬಯಸುವುದಿಲ್ಲ ಹೇಳಿ. ಕೆಲಸವನ್ನು ಮಾಡಿ ದಣಿದು ಬಂದ ಪ್ರತಿ ವ್ಯಕ್ತಿಗೆ ನಿದ್ರೆಗೆ ಯಾವಾಗ ಜಾರುತ್ತೇನೆ. ಅಂತ ಕಾಯುತ್ತಾರೆ. ಆದರೆ ಅವರಿಗೆ ಏನು ಮಾಡಿದರೂ ನಿದ್ದೆ ಬರುವುದಿಲ್ಲ? ನಿಮಗೆ ಗೊತ್ತೇ ವಯಸ್ಸಾದ ಮೇಲೆ ನಿದ್ರೆ ಬಾರದೇ ಇರುವುದು ಸರ್ವೇ ಸಾಮಾನ್ಯವಾಗಿದೆ ಆದರೆ ವಯಸ್ಸಿಲ್ಲ ದ ವಯಸ್ಸಿನಲ್ಲಿ ನಿದ್ರಾಹೀನತೆ ಸಮಸ್ಯೆ ಅನುಭವಿಸಿದರೆ ನಮಗೆ ಮತ್ತಷ್ಟು ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ. ದೇಹಕ್ಕೆ ಉತ್ತಮ ವ್ಯಾಯಾಮ ಮತ್ತು ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಅವಶ್ಯಕವಾಗಿರುತ್ತದೆ. ಈ ಲೇಖನದಲ್ಲಿ ನಿದ್ರಾಹೀನತೆ ಸಮಸ್ಯೆಯಿಂದ ದೂರವಾಗಲು ಕೆಲವು ಟಿಪ್ಸ್ ನೀಡಲಾಗಿದೆ. ಸಾಧ್ಯವಾದರೆ ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇವುಗಳನ್ನು ನೀವು ಪಾಲನೆ ಮಾಡುತ್ತಾ ಬಂದರೆ ನಿಮಗೆ ಸಖತ್ ನಿದ್ದೆ ಬರುತ್ತದೆ.

 

ಮೊದಲನೆಯದು ಬಾದಾಮಿ. ಹೌದು ಪೌಷ್ಟಿಕಾಂಶಗಳ ಆಗರ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ರಾತ್ರಿ ಮಲಗುವಾಗ ಬಾದಾಮಿ ತಿಂದು ಮಲಗಬೇಡಿ. ಇನ್ನೂ ಎರಡನೆಯದು ಅನ್ನ. ಇದರಲ್ಲಿರುವ ಗ್ಲೋಕೋಜನ್ ಅಂಶವು ನಿಮಗೆ ನಿದ್ರೆಯನ್ನು ತರಿಸುತ್ತದೆ. ಅದರಲ್ಲಿ ಬಾಸುಮತಿ ಅಕ್ಕಿ ಬಹಳ ಉತ್ತಮ ಅಂತ ಕೆಲವು ಸಂಶೋಧನೆಯು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೀರಿಗೆ ಕಾಳುಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇರಲಿದ್ದು, ನಿದ್ರಾಹೀನತೆ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸುತ್ತದೆ. ಇನ್ನೂ ಕುಂಬಳಕಾಯಿ ಬೀಜಗಳು ಇದರಲ್ಲಿ ಅಧಿಕವಾದ ಜಿಂಕ್ ಐರನ್ ಪ್ರೊಟೀನ್ ಅಂಶಗಳನ್ನು ಒಳಗೊಂಡಿದೆ. ಈ ಬೀಜಗಳನ್ನು ತಿಂದು ಮಲಗುವುದರಿಂದ ಮನಸ್ಸಿಗೆ ಶಾಂತಿ ನಿರಾಳತೆ ಉಂಟಾಗುತ್ತದೆ. ಬಾಳೆಹಣ್ಣು, ಇದರಲ್ಲಿರುವ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಹಾಗೂ ಸಕ್ಕರೆಯ ಅಂಶಗಳು ನಮಗೆ ನಿದ್ರೆಗೆ ಜಾರುವಂತೆ ಮಾಡುತ್ತದೆ ಆದ್ದರಿಂದ ರಾತ್ರಿ ಮಲಗುವ ಮುನ್ನ ಒಂದು ಬಾಳೆಹಣ್ಣು ಸೇವನೆ ಮಾಡಿ ಇದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ. ಇನ್ನೂ ಡೈರಿ ಉತ್ಪನ್ನಗಳು. ಹೌದು ಪ್ರತಿನಿತ್ಯವೂ ನಾವು ಒಂದಲ್ಲ ಒಂದು ರೀತಿಯಲ್ಲಿ ಹಾಲಿನ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತೇವೆ, ಹಾಲು ಮೊಸರು ಬೆಣ್ಣೆ ತುಪ್ಪ ಕಾಫಿ ಚಹಾ ಟೀ ಯಲ್ಲಿ ಬಳಸುತ್ತೇವೆ.

 

ಇವುಗಳನ್ನು ಸ್ವಲ್ಪ ರಾತ್ರಿ ಊಟದ ಜೊತೆಗೆ ನೀವು ಸೇವನೆ ಮಾಡಿದರೆ ಖಂಡಿತವಾಗಿ ನಿಮಗೆ ಗಾಢವಾದ ನಿದ್ರೆ ಬರುತ್ತದೆ. ಇನ್ನೂ ಕೆಲವರು ನಿದ್ರೆ ಬಾರದೇ ರಾತ್ರೀವೀಡಿ ಸಾಕಷ್ಟು ಒದ್ದಾಡುತ್ತಾ ರೆ, ಅಂತಹವರು ನಿದ್ರೆ ಮಾತ್ರೆಗಳು ಅಥವಾ ಸ್ಲೀಪಿಂಗ್ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಅಡ್ಡ ಪರಿಣಾಮಗಳೂ ಸಾಕಷ್ಟು ಬೀರುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಲಬದ್ಧತೆ, ತಲೆಸುತ್ತು, ವಾಕರಿಕೆ, ಮೈ ಬೆವರುವುದು, ಬಾಯಿ ಒಣಗುವುದು, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ನಿಮಗೆ ತಂದುಕೊಡಬಹುದು. ಆದ್ದರಿಂದ ಸ್ಲೀಪಿಂಗ್ ಟ್ಯಾಬ್ಲೆಟ್ ಗಳನ್ನು ಸೇವನೆ ಮಾಡುವುದನ್ನು ಮರೆತುಬಿಡಿ.
ನಿದ್ರಾಹೀನತೆ ಸಮಸ್ಯೆಯಿಂದ ಕಂಗೆಟ್ಟಿರುವವರು ರಾತ್ರಿ ಮಲಗುವ ಸಂದರ್ಭದಲ್ಲಿ ಮಲಗುವ ಮುಂಚೆ ಒಂದು ಲೋಟ ಉಗುರುಬೆಚ್ಚಗಿನ ಹಾಲನ್ನು ಕುಡಿದು ಮಲಗುವುದರಿಂದ ನಿದ್ರೆಗೆ ಸಂಬಂಧಪಟ್ಟ ಹಾರ್ಮೋನುಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ. ಇದರಿಂದ ನಿಮಗೆ ಉತ್ತಮವಾದ ನಿದ್ರೆ ಬರುತ್ತದೆ. ಹಾಗೂ ಪ್ರತಿನಿತ್ಯ ಒಂದೇ ವೇಳೆಗೆ ಮಲಗುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಸಮಯದಲ್ಲಿ ಏರುಪೇರು ಆದರೂ ಕೂಡ ಅನಾರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಸರಿಯಾದ ವೇಳೆಗೆ ಮಲಗುವುದು ಸೂಕ್ತ.
ಶುಭದಿನ.

Leave a Reply

Your email address will not be published. Required fields are marked *