ನಿಯಮಿತವಾಗಿ ವೀಳ್ಯದೆಲೆ ಸೇವನೆ ಮಾಡುತ್ತಾ ಬಂದರೆ ನೂರೆಂಟು ಕಾಯಿಲೆಗಳಿಂದ ಪಾರಾಗಬಹುದು. ಇದೊಂದು ಮ್ಯಾಜಿಕ್ ಎಲೆ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ವೀಳ್ಯದೆಲೆ ನಿಯಮಿತವಾಗಿ ಸೇವನೆ ಮಾಡುವುದರಿಂದ ನೂರೆಂಟು ಕಾಯಿಲೆಗಳಿಂದ ದೂರವಿರಬಹುದು.ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಹೌದು ಮೊದಲಿನ ಕಾಲದಲ್ಲಿ ಹಾಗೂ ಈಗಲೂ ಕೂಡ ಮದುವೆ ಸಮಾರಂಭದಲ್ಲಿ ವೀಳ್ಯದೆಲೆ ತಿನ್ನಲು ಕೊಡುವ ಪದ್ಧತಿ ರೂಢಿಯಲ್ಲಿ ಇದೆ. ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು. ಇದು ಪೂಜೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನಿಯಮಿತವಾಗಿ ವೀಳ್ಯದೆಲೆ ಸೇವನೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ಮೊದಲಿಗೆ ವೀಳ್ಯದೆಲೆ ರಸವನ್ನು ತೆಗೆದು ಅದರಲ್ಲಿ ಜೇನುತುಪ್ಪವನ್ನು ಹಾಕಿ ಚಿಕ್ಕ ಮಕ್ಕಳಿಗೆ ಕೊಡುವುದರಿಂದ, ಕೆಮ್ಮು ಕಫ ಕಡಿಮೆ ಆಗುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸವನ್ನು ಉಪಯೋಗ ಮಾಡಿಕೊಳ್ಳಬಹುದು.ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ. ಊಟವಾದ ಮೇಲೆ ವೀಳ್ಯದೆಲೆ ಹಾಗೂ ಅಡಿಕೆಯನ್ನು ಸೇವನೆ ಮಾಡುವುದರಿಂದ ತಿಂದ ಆಹಾರವೂ ಚೆನ್ನಾಗಿ ಜೀರ್ಣವಾಗುತ್ತದೆ.

 

ವೀಳ್ಯದೆಲೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಮಧುಮೇಹ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ವೀಳ್ಯದೆಲೆ ರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ಸಮಸ್ಯೆ ಕಾಡುವುದಿಲ್ಲ ನರಗಳು ಗಟ್ಟಿ ಆಗುತ್ತವೆ. ನರಗಳಲ್ಲಿ ಉಂಟಾಗುವ ಕಟ್ ಕಟ್ ಶಬ್ದವು ನಿಲ್ಲುತ್ತದೆ. ನರಗಳಲ್ಲಿ ಶಕ್ತಿ ಹೆಚ್ಚುತ್ತದೆ. ವೀಳ್ಯದೆಲೆ ರಸವನ್ನು ತೆಗೆದು ಅದನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿದರೆ ನಿಮಗೆ ಮೂಲವ್ಯಾಧಿ ಸಮಸ್ಯೆ ಖಂಡಿತವಾಗಿ ಬರುವುದಿಲ್ಲ ಇನ್ನೂ ಚಿಕ್ಕ ಮಕ್ಕಳಿಗೆ ಕಫ ಕಟ್ಟಿ ಉಸಿರಾಟದ ತೊಂದರೆ ಆದಾಗ ವೀಳ್ಯದೆಲೆಗೆ ಸ್ವಲ್ಪ ಹರಳೆಣ್ಣೆ ಹಾಕಿ ಅದನ್ನು ಬಿಸಿ ಮಾಡಿ ಮಗುವಿನ ಎದೆ ಮೇಲೆ ನಿಧಾನವಾಗಿ ಇಡುವುದರಿಂದ ಕಫ ಕರಗುತ್ತದೆ ಹಾಗೂ ಉಸಿರಾಟವು ನಿರಾಳ ಆಗುತ್ತವೆ. ಅಷ್ಟೇ ಅಲ್ಲದೇ ವೀಳ್ಯದೆಲೆ ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಹೌದು ಯಾರಿಗೆ ಗುಪ್ತಚರ ಸಮಸ್ಯೆಗಳು ಇರುತ್ತವೆ ಅವರು ನಿಯಮಿತವಾಗಿ ವೀಳ್ಯದೆಲೆ ಸೇವನೆ ಮಾಡುತ್ತಾ ಬನ್ನಿ. ಹಾಗೂ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

 

ಇನ್ನೂ ಪದೇ ಪದೇ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಕೂಡ ದೂರ ಮಾಡುತ್ತದೆ. ಅದಕ್ಕಾಗಿ ನೀವು ವೀಳ್ಯದೆಲೆ ಮತ್ತು ಲವಂಗವನ್ನು ಸೇರಿಸಿ ತಿನ್ನುವುದರಿಂದ ಗಂಟಲು ಕೆರೆತ ಒಣಕೆಮ್ಮೂ ಹೊಟ್ಟೆ ಉಬ್ಬರ ಹೊಟ್ಟೆ ನೋವು ಅಸಿಡಿಟಿ ಎಲ್ಲವೂ ಕಡಿಮೆ ಆಗುತ್ತದೆ. ಗರ್ಭಿಣಿಯರು ವಾಂತಿ ಬಿಕ್ಕಳಿಕೆ ಬರುವ ಸಮಯದಲ್ಲಿ ವೀಳ್ಯದೆಲೆ ಅದಕ್ಕೆ ಏಲಕ್ಕಿ ಮತ್ತು ಅಡಿಕೆ ಚೂರು ಹಾಕಿಕೊಂಡು ಸೇವನೆ ಮಾಡುತ್ತಾ ಬರಬೇಕು. ಇದರಿಂದ ವಾಕರಿಕೆ ಬಿಕ್ಕಳಿಕೆ ನಿಲ್ಲುತ್ತದೆ. ವೀಳ್ಯದ ರಸದಲ್ಲಿ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ ಆಗಿದೆ. ವೀಳ್ಯದೆಲೆ ಯಲ್ಲಿ ಕ್ಯಾಲ್ಷಿಯಂ ಅಂಶ ಇರುವ ಕಾರಣ ಇದನ್ನು ಊಟವಾದ ಮೇಲೆ ಸೇವನೆ ಮಾಡುವುದು ಒಳಿತು. ಶುಭದಿನ.

Leave a Reply

Your email address will not be published. Required fields are marked *