ಚಿರಕಾಲ ಯೌವ್ವನದಂತೆ ಕಾಣಲು ದಾಳಿಂಬೆ ರೆಸಿಪಿ ಗಳನ್ನು ಮಾಡಿ ನಿಮ್ಮ ಮುಖಕ್ಕೆ ಹಚ್ಚಿ. ಆಮೇಲೆ ನೀವೇ ನೋಡಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ನಿಮ್ಮ ಸೌಂದರ್ಯ ಚಿರಕಾಲ ಉಳಿಯಬೇಕೆಂದರೆ ಈ ಸುಲಭವಾದ ಟಿಪ್ಸ್ ಗಳನ್ನು ಅನುಸರಿಸಿ. ಮುಖದ ಸೌಂದರ್ಯವನ್ನು ಉಳಿಸಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತೇವೆ. ಬ್ಯೂಟಿ ಪಾರ್ಲರ್ ಗೆ ಹಣದ ಖರ್ಚು ಮಾಡುವ ಅವಶ್ಯಕತೆ ಇಲ್ಲ ಗೆಳೆಯರೇ, ಮನೆಯಲ್ಲಿ ಸಿಗುವ ಕೆಂಪು ಕೆಂಪು ದಾಳಿಂಬೆ ಇಂದ ನೀವು ಯೌವನದಂತೆ ಕಾಣಲು ಸೂಪರ್ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ದಾಳಿಂಬೆ ಒಂದು ಅದ್ಭುತ ಹಣ್ಣು. ಇದರಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ ಎಂಬಾ ವಿಚಾರ ನಿಮಗೆ ತಿಳಿದೇ ಇದೆ ಮಿತ್ರರೇ. ಮುತ್ತುಗಳಂತಹ ಬೀಜಗಳನ್ನು ಹೊಂದಿರುವಂತಹ ದಾಳಿಂಬೆಯು ಸೃಷ್ಟಿಯ ಅದ್ಭುತವೆಂದೇ ಹೇಳಬಹುದು. ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧೀಯ ಖಜಾನೆ. ಆದರೆ ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಬಲವಾದ ತಾಕತ್ತು ಹೊಂದಿದೆ ಅಂತ ನಿಮಗೆ ಗೊತ್ತಿಲ್ಲವೆಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

 

ದಾಳಿಂಬೆ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹಳ ಮಹತ್ವವಾದ ಸ್ಥಾನವನ್ನು ಪಡೆದಿದೆ. ದಾಳಿಂಬೆ ಯಲ್ಲಿ ವಯಸ್ಸಾಗುವುದನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ ಇದು ಸೌಂದರ್ಯವನ್ನು ವೃದ್ಧಿಸುವುದು ಜೊತೆಗೆ ಅದನ್ನು ಕೊನೆಯವರೆಗೂ ಹಾಗೆಯೇ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುತ್ತದೆ.ಮೊದಲಿಗೆ ದಾಳಿಂಬೆ ರಸವನ್ನು ತೆಗೆದು ಅದಕ್ಕೆ  ಬಾದಾಮಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ತದ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ ಇದರಿಂದ ನಿಮ್ಮ ಮುಖವೂ ಸುಕ್ಕು ಗಟ್ಟುವಿಕೆ ತಗೆದು ಹಾಕುತ್ತದೆ. ಇನ್ನೂ ಮುಖದಲ್ಲಿ ಮೂಡಿರುವ ಮೊಡವೆಗಳನ್ನು ಹೋಗಲಾಡಿಸಲು ದಾಳಿಂಬೆ ಬೀಜಗಳನ್ನು ತೆಗೆದುಕೊಂಡು ಅದರಲ್ಲಿ ಶುಗರ್ ಕ್ಯಾಂಡಿ ಒಂದು ಚಮಚ ಸೇರಿಸಿ. ಜೊತೆಗೆ ಕಿತ್ತಳೆ ಪುಡಿ ಹಾಗೂ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ. ಇದನ್ನು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಒಂದು ವಾರಗಳ ಕಾಲ ಮಾಡುತ್ತಾ ಬಂದರೆ ಮುಖದಲ್ಲಿ ಮೂಡಿರುವ ಎಲ್ಲ ಕಲೆಗಳು ಮೊಡವೆಗಳು ಕಣ್ಮರೆಯಾಗುತ್ತದೆ.

 

ಇನ್ನೂ ದಾಳಿಂಬೆ ಜ್ಯೂಸ್ ನಲ್ಲಿ ನಿಂಬೆ ರಸವನ್ನು ಹಾಕಿ ಅದನ್ನು ಸಿದ್ದ ಪಡಿಸಿ ಕೊಳ್ಳಿ. ಬಳಿಕ ನೀವು ನಿಮ್ಮ ಕೆಲಸವನ್ನು ಮಾಡಿಕೊಂಡು ಹೊರಗಡೆಯಿಂದ ಮನೆಗೆ ಬಂದ ಮೇಲೆ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮುಖವನ್ನು ಈ ಪೇಸ್ಟ್ ಮೃದು ಮಾಡಲು ಸಹಾಯ ಮಾಡುತ್ತದೆ. ಇನ್ನೂ ದಾಳಿಂಬೆ ಜ್ಯೂಸ್ ನೊಂದಿಗೆ ಜೇನುತುಪ್ಪವನ್ನು ಹಾಕಿ ಮುಖಕ್ಕೆ ಹಚ್ಚಿದರೆ ಒಣಚರ್ಮ ಮಾಯವಾಗುತ್ತದೆ. ಇನ್ನೂ ಜೇನುತುಪ್ಪ ಹಾಗೂ ಬಾದಾಮಿ ಎಣ್ಣೆ ಮತ್ತು ದಾಳಿಂಬೆ ರಸದಲ್ಲಿ ಇವುಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಇದರಿಂದ ಮುಖ ಸುಕ್ಕು ಗಟ್ಟುವಿಕೆಯಿಂದ ಪಾರಾಗುತ್ತದೆ. ಇನ್ನೂ ದಾಳಿಂಬೆಯಲ್ಲಿ ವಿಟಮಿನ್ ಸಿ ಕೂಡ ಇರುತ್ತದೆ. ಇದೇ ಕಾರಣದಿಂದಾಗಿ ಮೈಮೇಲೆ ಇದನ್ನು ಹಚ್ಚಿಕೊಂಡರೆ ಅದು ಚರ್ಮವನ್ನು ಕಾಂತಿಯುತವಾಗಿಸುವುದು ಮತ್ತು ಹೊಳಪು ನೀಡುವುದು. ಚರ್ಮವು ಒಣ ಹಾಗೂ ನಿಸ್ತೇಜವಾಗಿದ್ದರೆ ಆಗ ನೀವು ಈ ದಾಳಿಂಬೆ ಸ್ಕ್ರಬ್ ನ್ನು ಬಳಸಿಕೊಳ್ಳಿ. ನೋಡಿದ್ರಲಾ ದಾಳಿಂಬೆ ಆರೋಗ್ಯಕ್ಕೆ ಮಾತ್ರವಲ್ಲದೇ ಸೌಂದರ್ಯ ಕ್ಕೂ ಎಷ್ಟೊಂದು ಸೂಕ್ತ ಎಂದು. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *