ಮುಳ್ಳು ಕತ್ತರಿ ಗಿಡದ ಉಪಯೋಗಗಳು.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ಹಿಂದಿನ ಕಾಲದಲ್ಲಿ ಈ ಸಸ್ಯದ ಉಪಯೋಗವನ್ನು ಆಯುರ್ವೇದದಲ್ಲಿ ಬಹಳ ಹೆಚ್ಚಾಗಿ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಪರಿಚಯ ಮುಚ್ಚಿ ಹೋಗಿದೆ. ಹಳ್ಳಿಗಳಲ್ಲಿ ಹಾಗೂ ನಾಟಿ ವೈದ್ಯರು ಕೂಡ ಇದರ ಬಳಕೆಯನ್ನು ಮಾಡುತ್ತಿಲ್ಲ. ಸಾಮಾನ್ಯವಾದ ಮಾತಿನಲ್ಲಿ ಹೇಳಬೇಕೆಂದರೆ ಈ ಸಸ್ಯ ಅಳವಿನಂಚಿನಲ್ಲಿ ಹುದುಗಿ ಹೋಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಅಂಥಹ ಸಸ್ಯ ಯಾವುದು? ಈ ಸಸ್ಯವನ್ನು ಉಪಯೋಗಿಸಿ ಕೊಂಡು ಯಾವೆಲ್ಲ ಪ್ರಯೋಜನಗಳನ್ನು ಪಡೆಯುತ್ತಿದ್ದರು ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

 

ಆ ಸಸ್ಯ ಯಾವುದು ಅಂದರೆ ಮುಳ್ಳು ಕತ್ತರಿ ಗಿಡ. ಈ ಸಸ್ಯ ಎಲ್ಲ ಸಸ್ಯಗಳ ಹಾಗೆ ಕಾಡಿನಲ್ಲಿ ಬೆಳೆಯುತ್ತದೆ ಹಾಗೂ ಅಗಲವಾದ ಎಲೆಗಳನ್ನು ಹೊಂದಿದ್ದು ಹೆಚ್ಚಾಗಿ ಮುಳ್ಳುಗಳಿಂದ ಕೂಡಿರುತ್ತದೆ. ಈ ಸಸ್ಯದ ತವರು ಮನೆ ನಮ್ಮ ಭಾರತ ದೇಶ. ನಮ್ಮ ದೇಶವನ್ನು ಬಿಟ್ಟು ಇದನ್ನು ಶ್ರೀಲಂಕ ಇಂಡೋನೇಷಿಯಾ ಮತ್ತಿತರ ದೇಶದಲ್ಲಿ ಈ ಸಸ್ಯವನ್ನು ಕಾಣಬಹುದು. ಮುಳ್ಳು ಕತ್ತರಿ ಎಂಬ ಹೆಸರಿನಿಂದ ಕಂಗೊಳಿಸುವ ಈ ಸಸ್ಯ ಸುಮಾರು 20-30 ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡವು ಬಹಳ ಗಟ್ಟಿಯಾಗಿ ಇರುತ್ತದೆ ಹಾಗೂ ಕಾಂಡದ ಮೇಲೆ ಮುಳ್ಳುಗಳು ಇರುತ್ತವೆ. ಇದರ ಅವಧಿ ಕಾಲ ಫೆಬ್ರುವರಿ ಇಂದ ಮಾರ್ಚ್ ವರೆಗೆ. ಇದರ ಹೂವುಗಳು ಗುಲಾಬಿ ಮತ್ತು ಕೇಸರಿ ಬಣ್ಣದ ಅಸಂಖ್ಯಾತ ಹೂವುಗಳಿಂದ ಕೂಡಿರುತ್ತದೆ. ಹಾಗೂ 3-4 ಸೆಂಟಿ ಮೀಟರ್ ಗಾತ್ರದ ಹಸಿರು ಗಾತ್ರದ ಕಾಯಿಗಳು ಇರುತ್ತವೆ. ನೋಡಲು ಬಹಳ ಸುಂದರವಾಗಿ ಇರುತ್ತದೆ ಈ ಮುಳ್ಳು ಕತ್ತರಿ ಸಸ್ಯ.

 

ಈ ಸಸ್ಯದ ಪ್ರತಿಯೊಂದು ಭಾಗವಾದ ಹೂವು ಹಣ್ಣು ಕಾಯಿ ಎಲೆ ಕಾಂಡ ಬೇರು ಎಲ್ಲವನ್ನು ಔಷಧ ರೂಪದಲ್ಲಿ ಬಳಕೆ ಮಾಡಲಾಗುತ್ತದೆ.  ಸಾಮಾನ್ಯ ಸಮಸ್ಯೆ ಗಳಾದ ನೆಗಡಿ ಕೆಮ್ಮು ಶೀತ ಕಫಕ್ಕೆ ಈ ಸಸ್ಯ ಭಾರೀ ಪರಿಣಾಮಕಾರಿಯಾಗಿದೆ ಹಾಗೂ ದೊಡ್ಡ ಕಾಯಿಲೆಗಳಾದ ಅಸ್ತಮಾ ಹೆಚ್ಚು ಯಾರಿಗೆ ಉಸಿರಾಟದ ಸಮಸ್ಯೆ ಇರುವವರಿಗೆ ಇದು ದಿವ್ಯ ಔಷಧ. ಹಾಗೂ ಕ್ಯಾನ್ಸರ್ ರೋಗಕ್ಕೆ ಈ ಸಸ್ಯದಿಂದ ಔಷಧವನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಸ್ಯದಿಂದ ಕೆಮ್ಮು ನೆಗಡಿ ಶೀತ ಹೋಗಲಾಡಿಸಲು ಈ ಗಿಡದ ಕಷಾಯವನ್ನು ಮಾಡಿ ಕುಡಿಯುತ್ತಿದ್ದರು. ಹೌದು ಹೀಗೆ ಈ ಕಷಾಯವನ್ನು ಮಾಡಿ ಕುಡಿಯುವುದರಿಂದ ಖಂಡಿತವಾಗಿ ನೆಗಡಿ ಕೆಮ್ಮು ಶೀತ ಗಂಟಲು ಬೇನೆ ಎಲ್ಲವೂ ಕ್ರಮೇಣ ಕಡಿಮೆ ಆಗುತ್ತಿತ್ತು ಅಂತ ತಿಳಿದು ಬಂದಿದೆ. ಹಾಗೂ ಹಸಿವನ್ನು ನೀಗಿಸಲು ಈ ಸಸ್ಯದ ಕಷಾಯವನ್ನು ಕೂಡ ಕುಡಿಸಲಾಗುತ್ತಿತ್ತು. ಇನ್ನೂ ಈ ಸಸ್ಯ ಕೇವಲ ಆರೋಗ್ಯಕ್ಕೆ ಹಾಗೂ ರೋಗಗಳನ್ನು ಗುಣಪಡಿಸುವ ಕೆಲಸವನ್ನು ಮಾಡುವುದಲ್ಲದೆ ಇದನ್ನು ತರಕಾರಿ ಆಗಿ ಕೂಡ ಬಳಕೆ ಮಾಡುತ್ತಿದ್ದರು ಹಾಗೂ ಈ ಕಾಯಿಯನ್ನು ಬಳಕೆ ಮಾಡಿಕೊಂಡು ಉಪ್ಪಿನಕಾಯಿ ಕೂಡ ಮಾಡಿ ಉಪಯೋಗೀಸುತ್ತಿದ್ದರು. ನೋಡಿದ್ರಲಾ ಮುಳ್ಳು ಕತ್ತರಿ ಗಿಡದ ಲಾಭಗಳನ್ನು. ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *