ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಈ ಕುತ್ತಿಗೆ ನೋವು ಬೆನ್ನು ನೋವು ಮೈಕೈ ನೋವು ಅಂತ ಬರುತ್ತಲೇ ಇದೆ ಗೆಳೆಯರೇ. ಹೌದು ಈ ನೋವು ಬರುವವರೆಗೂ ನಾವು ಮಾಡಬಾರದ ಎಲ್ಲ ಕೆಲಸಗಳನ್ನೂ ಅಂದರೆ ಭಾರ ಎತ್ತುವ ಕೆಲಸವನ್ನು ಮಾಡುತ್ತೇವೆ ಅಧಿಕವಾಗಿ ವ್ಯಾಯಾಮ ಮಾಡುತ್ತೇವೆ ಹಾಗೂ ಎಂಟು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸವನ್ನು ಮಾಡುತ್ತೇವೆ. ಇನ್ನೂ ಕೆಲ ಆಫೀಸ್ ನವರು ದೊಡ್ಡ ದೊಡ್ಡ ಸಾಫ್ಟ್ವೇರ್ ಇಂಜಿನಿಯರ್ಸ್ ಗಳು ಸತತವಾಗಿ ಕಂಪ್ಯೂಟರ್ ಗಳ ಮುಂದೆಯೇ ಕುಳಿತಿರುತ್ತಾರೆ. ಅವರಿಗೆ ಅವರ ದೇಹದ ಬಗ್ಗೆ ಅರಿವೇ ಇರುವುದಿಲ್ಲ. ಒಟ್ಟಿನಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. ಆದರೆ ಒಂದು ಬಾರಿ ಈ ಕೈ ಕಾಲು ನೋವು ಮೈ ಕೈ ನೋವು ಬಂದು ಸೇರಿಕೊಂಡರೆ ಅದರಿಂದ ಹೊರಗಡೆ ಬರುವುದು ಬಲು ಕಷ್ಟವಾಗುತ್ತದೆ. ಹಾಗೂ ಇಂತಹ ನೋವುಗಳಿಂದ ಚೇತರಿಸಿಕೊಳ್ಳುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಅದಕ್ಕಾಗಿ ನೋವು ಬರುವುದಕ್ಕಿಂತ ಮುಂಚೆಯೇ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೆಲವು ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ.
ಇವುಗಳು ತುಂಬಾನೇ ಪರಿಣಾಮಕಾರಿ ಮನೆಮದ್ದುಗಳು ಆಗಿವೆ ಮಿತ್ರರೇ. ಮೊದಲಿಗೆ ಸೊಂಟ ನೋವು. ವಯಸ್ಸಾದವರಲ್ಲಿ ಈ ಸೊಂಟ ನೋವು ಕಾಣುವುದು ಸರ್ವೇ ಸಾಮಾನ್ಯವಾದರೆ ಇನ್ನೊಂದೆಡೆಗೆ ಮಿತ್ರರೇ ಸಾಮಾನ್ಯವಾಗಿ ಈಗ ಈ ಸೊಂಟನೋವು ಬರೋದಕ್ಕೆ ಕಾರಣ ಕಂಪ್ಯೂಟರ್ ಲ್ಯಾಪ್ ಟಾಪ್ ಗಳ ಬಳಕೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಮಿತ್ರರೇ ಚಿಕ್ಕ ಮಕ್ಕಳು ಕೂಡ ಯಾವಾಗಲೂ ಮೊಬೈಲ್ ಲ್ಯಾಪ್ ಟಾಪ್ ಗಳನ್ನು ಕಂಪ್ಯೂಟರ್ ಗಳನ್ನು ನೋಡುತ್ತಾ ಕೂತುಕೊಂಡಿರುತ್ತವೆ ಈ ಒಂದು ಕಾರಣದಿಂದ ಈ ಸೊಂಟನೋವು ಅನ್ನೋದು ಎಲ್ಲರಿಗೂ ಕಾಮನ್ ಆಗಿಬಿಟ್ಟಿದೆ. ಒಂದು ಬಾರಿ ನೋವು ಕಾಣಿಸಿಕೊಂಡರೆ ತಡೆಯಲು ಬಹಳ ಕಷ್ಟವಾಗುತ್ತದೆ ನಡೆದಾಡಲು ಓಡಾಡಲು ಬಹಳ ಕಷ್ಟವಾಗುತ್ತದೆ. ಏಳಲು ಮತ್ತೆ ಕುಳಿತುಕೊಳ್ಳಲು ಕೂಡ ಕಷ್ಟವಾಗುತ್ತದೆ. ಇನ್ನೂ ಇದರ ನೋವು ಶುರುವಾದರೆ ರಾತ್ರಿ ನಿದ್ದೆ ಕೂಡ ಬರುವುದಿಲ್ಲ. ತುಂಬಾನೇ ನೋವು ಕೊಡುತ್ತಿರುತ್ತದೆ. ಆಚೆ ಇಚೆಗೆ ಮಾಡಿ ಮಲಗಿದರು ಕೂಡ ಬಹಳ ಕಷ್ಟವಾಗುತ್ತದೆ.
ಆದರೆ ಪ್ರತಿಯೊಂದು ಸಮಸ್ಯೆಗೂ ಕೂಡ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ ಅಲ್ವಾ ಮಿತ್ರರೇ. ಹೀಗಾಗಿ ನಾವು ನಿಮಗೆ 100% ಫಲಿತಾಂಶ ನೀಡಿ ಅದ್ಭುತವಾದ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಇದನ್ನು ಯಾವ ರೀತಿಯಾಗಿ ಮಾಡಬೇಕು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಅನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ನೀಡುತ್ತೇವೆ ಬನ್ನಿ. ಇದಕ್ಕೆ ಪರಿಹಾರ ಅಂದರೆ ಬೆಳ್ಳುಳ್ಳಿ. ಹೌದು ಈ ಬೆಳ್ಳುಳ್ಳಿ ಅನ್ನು ನೀವು ಪ್ರತಿನಿತ್ಯವೂ ಬೆಳಿಗ್ಗೆ ಎರಡು ಎಸಳು ತಿನ್ನಿ ಆಮೇಲೆ ನೀರು ಕುಡಿಯಿರಿ. ಖಂಡಿತವಾಗಿ ನಿಮಗೆ ಈ ಬೆಳ್ಳುಳ್ಳಿ ಪೈನ್ ಕ್ಯುಲರ್ ಆಗಿ ಕೆಲಸವನ್ನು ಮಾಡುತ್ತದೆ. ಅಥವಾ ಬೆಳ್ಳುಳ್ಳಿ ಬಹಳ ಖಾರವಾಗಿ ಇರುತ್ತದೆ ಅಲ್ಲವಾ ಅದಕ್ಕೆ ನೀವು ಜೇನುತುಪ್ಪದಲ್ಲಿ ಹಾಕಿ ತಿನ್ನಿ. ಇಲ್ಲವಾದರೆ ಬೆಳ್ಳುಳ್ಳಿ ಬಿಡಿಸಲು ಕಷ್ಟವಾದರೆ ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿ ಅವುಗಳನ್ನು ಗಾಜಿನ ಬಾಟಲೀನಲ್ಲಿ ಹಾಕಿ ಅದರಲ್ಲಿ ಜೇನುತುಪ್ಪ ಹಾಕಿ ಒಂದು ವಾರಗಳ ಕಾಲ ಆಗುವಷ್ಟು ಮಾಡಿ ಇಟ್ಟುಕೊಂಡು ಪ್ರತಿನಿತ್ಯವೂ ಸೇವನೆ ಮಾಡುತ್ತಾ ಬನ್ನಿ. ಹೀಗೆ ಮಾಡುವುದರಿಂದ ನಿಮಗೆ ಸೊಂಟ ನೋವು ಬರುವುದಿಲ್ಲ. ಹೌದು ಅಷ್ಟೊಂದು ಬೆಳ್ಳುಳ್ಳಿ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ನೋವು ನಿವಾರಕ ಔಷಧವಾಗಿ ಸಹಾಯ ಮಾಡುತ್ತದೆ.
ಶುಭದಿನ.