ಉತ್ತಮ ಪ್ರಮಾಣದ ವೀರ್ಯಾಣುಗಳನ್ನು ಹೊಂದಲು ಏನು ಮಾಡಬೇಕು?? ಹಾಗೂ ಮಿಲನ ಕ್ರಿಯೆಯಲ್ಲಿ ತೊಡಗಲು ಎಷ್ಟು ಸಮಯ ಬೇಕಾಗುತ್ತದೆ. ತಿಳಿದುಕೊಳ್ಳಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ವಯಸ್ಸಾದ ಮೇಲೆ ಮದುವೆ ಯಾವಾಗ ಅನ್ನುತ್ತಾರೆ? ಮದುವೆ ಆದ ಮೇಲೆ ಮಕ್ಕಳು ಯಾವಾಗ ಅಂತ ಕೇಳುತ್ತಾರೆ ನಮ್ಮ ಜನರು ಹೌದಲ್ಲವೇ ಈ ರೀತಿ ನೀವು ಕೇಳಿರಬಹುದು ಅಥವಾ ಇಂತಹ ಅನುಭವ ನಿಮಗೆ ಆಗಿರಬಹುದು ಗೆಳೆಯರೇ. ಹೌದು ಮದುವೆ ಆದ ದಂಪತಿಗಳಿಗೆ ಎಲ್ಲರೂ ಕೇಳುವ ಮೊದಲ ಪ್ರಶ್ನೆಯೇ ಇದು ಇನ್ನೂ ಏನು ವಿಶೇಷ ಇಲ್ಲವೇ! ಎಂದು. ಹೌದು ಗೆಳೆಯರೇ ಇದರ ಅರ್ಥ ಇನ್ನೂ ಮಕ್ಕಳಾಗುವ ಸಿಹಿ ಸುದ್ದಿ ಯಾವಾಗ ಕೊಡ್ತೀಯಾ ಅಂತ ಕೇಳುತ್ತಾರೆ. ಮದುವೆ ಆದ ನವ ಜೋಡಿಗಳಿಗೆ ಇರುವ ಮೊದಲ ಆಸೆ ಅಂದರೆ ಅದು ಸಂತಾನವನ್ನು ಪಡೆಯುವುದು. ಇನ್ನೂ ಕೆಲವರಿಗೆ ಬೇಗನೆ ಮದುವೆ ಕೂಡ ಆಗಿರುವುದಿಲ್ಲ. ಮೂವತ್ತು ವರ್ಷ ದಾಟಿದ ಮೇಲೆ ಅದಕ್ಕಿಂತ ಮುಂಚಿತವಾಗಿ ಮಗುವನ್ನು ಪಡೆಯಬೇಕೆಂಬ ಚಿಂತೆ ಇರುತ್ತದೆ. ಹಾಗೂ ಅದಕ್ಕೆ ಅವರು ಎಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ. ಅಂದರೆ ಅವರು ಪ್ರತಿದಿನವೂ ತಮ್ಮ ಸಂಗಾತಿಯ ಜೊತೆಗೆ ಮೀಲನವನ್ನು ಹೊಂದುವ ಕ್ರಿಯೆಯನ್ನು ನಿತ್ಯವೂ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವರೂ ಉತ್ತಮವಾದ ವೀರ್ಯಾಣುಗಳ ಸಂಖ್ಯೆ ಹೊಂದಲು ಸಾಧ್ಯವಿದೆಯೇ ಅಥವಾ ಇಲ್ಲವಾ ಎಂಬ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲಿಗೆ ಮುಖ್ಯವಾಗಿ ದಂಪತಿಗಳಲ್ಲಿ ಪತಿಯಾದವರಿಗೆ ತಿಳಿಸುವುದೇನೆಂದರೆ ಒಂದು ಬಾರಿ ಮಿಲನ ಕ್ರಿಯೆಯಲ್ಲಿ ತೊಡಗಿದ್ದರೆ ಬಳಿಕ ಐದು ದಿನಗಳ ನಂತರ ಮಿಲನ ಕ್ರಿಯೆಯಲ್ಲಿ ತೊಡಗಿದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಅಧಿಕವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನೀವು ಮೂರರಿಂದ ಐದು ದಿನಗಳಲ್ಲಿ ನೀವು ಮಿಲನ ಹೊಂದಿದರೆ ಗುಪ್ತಚರ ಆಸಕ್ತಿ ಹೆಚ್ಚಿರುತ್ತದೆ. ಇನ್ನೂ ನಿಮಗೆ ಸಾಧ್ಯವಾದರೆ ರಾತ್ರಿ ಮಲಗುವಾಗ ಐದು ಬಾದಾಮಿಯನ್ನು ನೆನೆಸಿ ಇಟ್ಟು ಮರುದಿನ ಬೆಳಿಗ್ಗೆ ತಿನ್ನಿ. ಇದರಿಂದ ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಮಿಲನ ಹೊಂದುವ ಆಸಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ಬಾದಾಮಿ ಕಾಮ ಉತ್ತೇಜಕವಾಗಿ ಕೆಲಸವನ್ನು ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

 

ಇನ್ನೂ ರಾತ್ರಿ ಮಲಗುವಾಗ ನೀವು ಪ್ರತಿನಿತ್ಯವೂ ಒಂದೊಂದು ಬಾಳೆಹಣ್ಣು ತಿನ್ನುತ್ತಾ ಬನ್ನಿ. ಇದರಿಂದ ಕೂಡ ನಿಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಇರುವ ಪೋಷಕಾಂಶಗಳು ಪುರುಷರ ಗುಪ್ತದಲ್ಲಿ ರಕ್ತ ಸಂಚಾರ ಅಧಿಕವಾಗುವಂತೆ ಮಾಡುತ್ತದೆ. ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ. ಪ್ರತಿನಿತ್ಯವೂ ನೀವು ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ ಹಾಗೂ ಗುಪ್ತಚರ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಕೆ ಎ ಹಾಗೂ ಸಿ ಇರುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಮತ್ತು ಒಳ್ಳೆಯ ಪೋಷಕಾಂಶ ಇರುವ ಆಹಾರವನ್ನು ಸೇವನೆ ಮಾಡಿ. ಜಂಕ್ ಫುಡ್ ಫಾಸ್ಟ್ ಫುಡ್ ಎಣ್ಣೆ ಮಸಾಲೆ ಆಹಾರಗಳನ್ನು ಹೆಚ್ಚು ಸೇವನೆ ಮಾಡಲು ಹೋಗಬೇಡಿ. ಜೊತೆಗೆ ಪ್ರತಿನಿತ್ಯವೂ ಯೋಗ ಧ್ಯಾನ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ ಜೊತೆಗೆ ಬೇಗನೆ ಸಂತಾನ ಭಾಗ್ಯ ಲಭಿಸುತ್ತದೆ ಹಾಗೂ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಶುಭದಿನ.

Leave a Reply

Your email address will not be published. Required fields are marked *