ಈ ಆಹಾರಗಳನ್ನು ಎಂದಿಗೂ ಒಟ್ಟಿಗೆ ಸೇವಿಸಬೇಡಿ,ಅಪಾಯ ಕಟ್ಟಿಟ್ಟಬುತ್ತಿ ಆರೋಗ್ಯ ಹಾಳಾಗುತ್ತೆ ಎಚ್ಚರ..!ಅವುಗಳು ಇಂತಿವೆ!!!

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಕೆಲವು ಆಹಾರಗಳು ನಮಗೆ ಉತ್ತಮವಾದ ಲಾಭವನ್ನು ಹಾಗೂ ಪರಿಣಾಮವನ್ನು ನೀಡುತ್ತದೆ ಆದರೆ ಇನ್ನುದವುಗಳು ಹಾನಿಯನ್ನು ಉಂಟು ಮಾಡುತ್ತವೆ ಕೆಲವು ಆಹಾರಗಳನ್ನು ಇನ್ನೊಂದು ಆಹಾರದೊಂದಿಗೆ ಸೇರಿಸಿ ತಿನ್ನಲಾಗುತ್ತದೆ. ಹೌದು ಅಂದರೆ ಇಡ್ಲಿಗೆ ಚಟ್ನಿ ಮತ್ತು ವಡೆ ಹಾಗೂ ಪಿಜ್ಜಾ ಜೊತೆಗೆ ಕೋಕೋ ಕೋಲಾ ಥಂಸಪ್ ಹೀಗೆ ಎರಡು ಎರಡು ಆಹಾರವನ್ನು ನಾವು ಒಟ್ಟಿಗೆ ಸೇವನೆ ಮಾಡುತ್ತೇವೆ. ಅಂದರೆ ಒಂದಕ್ಕೊಂದು ಕಾಂಬಿನೇಷನ್ ಮಾಡಿಕೊಂಡು ಹೆಚ್ಚಾಗಿ ತಿನ್ನಲು ಇಷ್ಟ ಪಡುತ್ತೇವೆ. ಹಾಗೂ ಇತ್ತೀಚಿನ ದಿನಗಳಲ್ಲಿ ಇದು ಸರ್ವೇ ಸಾಮಾನ್ಯ ಕೂಡ ಆಗಿದೆ. ಆದರೆ ನಿಮಗೆ ಈ ರೀತಿ ಕಾಂಬಿನೇಷನ್ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಹೌದು ಈ ರೀತಿ ವಿರುದ್ಧ ಕಾಂಬಿನೇಶನ್ ಇರುವ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಬಂದರೆ ನಮ್ಮ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.

 

ಉದಾಹರಣೆಗೆ, ಹಾಲಿನ ಜೊತೆಗೆ ಮೊಸರನ್ನು ಜೊತೆ ಜೊತೆಗೆ ಸೇವನೆ ಮಾಡಬಾರದು. ಹಾಗೂ ಸಿಹಿ ಪದಾರ್ಥಗಳ ಜೊತೆಗೆ ಮೊಸರನ್ನು ಮಿಕ್ಸ್ ಮಾಡಿ ಕೂಡ ತಿನ್ನಬಾರದು, ಮೊಸರಿನಲ್ಲಿ ಹೆಚ್ಚಾಗಿ ಉಪ್ಪು ಹಾಕಿ ಸೇವನೆ ಮಾಡಬಾರದು. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನೂ ಚಿಕ್ಕ ಮಕ್ಕಳಿಗೆ ಹುಳಿ ಹಣ್ಣುಗಳನ್ನು ಅಥವಾ ಆಹಾರವನ್ನು ನೀಡಿ ಅವುಗಳಿಗೆ ತಕ್ಷಣವೇ ಹಾಲನ್ನು ಕುಡಿಸುವುದರಿಂದ ಚಿಕ್ಕ ಮಕ್ಕಳು ವಾಂತಿ ಮಾಡಿಕೊಳ್ಳುತ್ತದೆ ಆದ್ದರಿಂದ ಇಂತಹ ತಪ್ಪು ಮಾಡಬೇಡಿ. ನೀವು ಕೇಳಬಹುದು ಮಿತ್ರರೇ, ಈ ರೀತಿ ವಿರುದ್ಧವಾದ ಆಹಾರವನ್ನು ತೆಗೆದುಕೊಳ್ಳುವುದರಿಂದ ಏನಾಗುತ್ತದೆ ಎಂದು? ಹೌದು ಈ ರೀತಿ ವಿರುದ್ಧ ಕಾಂಬಿನೇಶನ್ ಇರುವ ಆಹಾರವನ್ನು ಸೇವನೆ ಮಾಡುವುದರಿಂದ, ನಿಮ್ಮ ದೇಹದ ಅಂಗಾಂಗಗಳ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹಾನಿ ಉಂಟು ಮಾಡುತ್ತದೆ ಅಷ್ಟೇ ಅಲ್ಲದೇ ಈ ರೀತಿ ಮಾಡುವುದು ತಪ್ಪು ಅಂತ ಆಯುರ್ವೇದದಲ್ಲಿ ಕೂಡ ಹೇಳಲಾಗಿದೆ. ಹಾಗೂ ನಮಗೆ ಆಹಾರದ ಮೇಲೆ ಸಂಪೂರ್ಣವಾಗಿ ಆಸಕ್ತಿ ಹೊರಟು ಹೋಗಿ ನಾವು ಅವುಗಳನ್ನು ನಿರಾಕರಿಸಿ ಬಿಡುತ್ತೇವೆ.

 

ಇನ್ನೂ ಕೆಲವೊಂದು ಉದಾಹರಣೆ ತಿಳಿಯುತ್ತಾ ಹೋದರೆ, ಬೇಳೆ ಹಾಕಿ ಮಾಡಿದ ಆಹಾರವನ್ನು ಹಾಲಿನೊಂದಿಗೆ ಹಾಗೂ ಮೊಸರಿನೊಂದಿಗೆ ಬೆರೆಸಿ ತಿನ್ನಬಾರದು. ಮತ್ತು ಬೆಂಡೆ ಕಾಯಿ ಮತ್ತು ಬದನೆಕಾಯಿ ಪಲ್ಯ ದ ಜೊತೆಗೆ ಹಾಲನ್ನು ಮಿಕ್ಸ್ ಮಾಡಿ ತಿನ್ನಬಾರದು.  ಅದು ಇವುಗಳನ್ನು ಅಪ್ಪಿ ತಪ್ಪಿ ನೀವು ಇಂತಹ ಆಹಾರವನ್ನು ಸೇವನೆ ಮಾಡಿದರೆ ಅದು ಕೇವಲ ಶ್ರಮ ವಹಿಸಿ ಕೆಲಸವನ್ನು ಮಾಡುವ ಜನರಲ್ಲಿ ಮಾತ್ರ ಜೀರ್ಣವಾಗುವ ಸಾಧ್ಯತೆ ಇರುತ್ತದೆ. ಯಾರ ಜೀರ್ಣಾಂಗ ವ್ಯವಸ್ಥೆ ಗಟ್ಟಿ ಇದ್ದರೆ ಮಾತ್ರ ಇಂತಹ ಪದಾರ್ಥಗಳ ಸೇವನೆ ತಪ್ಪಿ ಮಾಡಿದರೆ ಬಚಾವ್ ಆಗಬಹುದು ಇಲ್ಲವಾದರೆ ಪರಿಣಾಮ ಬೀರುವುದು ಖಚಿತ.
ಆದರೆ ಎಲ್ಲರಿಗೂ ಇಂತಹ ಕಾಂಬಿನೇಶನ್ ಆಹಾರಗಳು ಜೀರ್ಣವಾಗುವುದಿಲ್ಲ. ಆದರೆ ರುಚಿಯಾದ ಪಾಯಸವನ್ನು ಮಾಡುವಾಗ ನಾವು ಕಡಲೆಬೇಳೆ ಹೆಸರು ಬೇಳೆ ಹಾಲು ತುಪ್ಪ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ರುಚಿಯನ್ನು ಹೆಚ್ಚಿಸಿ ಪಾಯಸವನ್ನು ಮಾಡುತ್ತೇವೆ. ಆದರೆ ಸಿಹಿಯಾದ ಆಹಾರವನ್ನು ಸೇವಿಸಿದ ನಂತರ ಬೇರೆ ಆಹಾರವನ್ನು ತಿನ್ನಲು ಮನಸ್ಸಾಗುವುದಿಲ್ಲ. ಇಂತಹ ಅನೇಕ ಬಗೆಯ ವಿರುದ್ಧ ಕಾಂಬಿನೇಶನ್ ಆಹಾರಗಳು ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕು. ಶುಭದಿನ.

Leave a Reply

Your email address will not be published. Required fields are marked *