ನಮಸ್ತೇ ಪ್ರಿಯ ಓದುಗರೇ, ಮನುಷ್ಯನಿಗೆ ದೇಹದಲ್ಲಿ ಶಕ್ತಿ ಇದ್ದರೆ ಆತನು ಎಂಥಹ ಭಾರವಾದ ಕೆಲಸವನ್ನು ಮಾಡಬಲ್ಲನು, ಹೌದಲ್ಲವೇ, ಗೆಳೆಯರೇ ನಮ್ಮ ದೇಹಕ್ಕೆ ಶಕ್ತಿ ಬೇಕೆಂದರೆ ನಾವು ಪೌಷ್ಟಿಕಾಂಶ ಆಹಾರವನ್ನು ಸೇವನೆ ಮಾಡಬೇಕು. ಹಾಗೂ ನಾವು ಸೇವಿಸಿದ ಆಹಾರವೂ ಚೆನ್ನಾಗಿ ಜೀರ್ಣವಾದರೆ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ. ಕೆಲವರಿಗೆ ಜೀರ್ಣ ಶಕ್ತಿ ಅನ್ನುವುದು ಕಡಿಮೆ ಇರುವ ಕಾರಣ ಅವರು ಏನೇ ತಿಂದರೂ ಕೂಡ ಅದು ಅಜೀರ್ಣವಾಗುತ್ತದೆ. ಹೀಗಾಗಿ ತಿಂದ ಆಹಾರವೂ ಸರಿಯಾಗಿ ದೇಹಕ್ಕೆ ದೊರಕದೆ ಇದ್ದಾಗ ದೇಹಕ್ಕೆ ಅಗತ್ಯವಾದ ಶಕ್ತಿ ಉತ್ಪತ್ತಿ ಆಗುವುದಿಲ್ಲ. ಇದರಿಂದ ಶರೀರಕ್ಕೆ ಬೇಕಾದ ಶಕ್ತಿ ಒದಗದೆ ದೇಹವೂ ತನ್ನ ಶಕ್ತಿಯನ್ನು ಕಳೆದು ಕೊಳ್ಳುತ್ತದೆ. ದೇಹದಲ್ಲಿ ಶಕ್ತಿ ಇದ್ದರೆ ಮಾತ್ರ ನಾವು ಕೆಲಸವನ್ನು ಮಾಡಬಲ್ಲೆವು ಹಾಗೂ ಕುಳಿತುಕೊಳ್ಳಲು ಹಾಗೂ ನಡೆಯಲು ಎಲ್ಲ ಕೆಲಸವನ್ನು ಮಾಡಬಲ್ಲೆವು ಅದೇ ದೇಹದಲ್ಲಿ ಶಕ್ತಿ ಇಲ್ಲದೆ ಇದ್ದಾಗ ಸ್ವಲ್ಪ ದೂರ ನಡೆದಾಡಿದರೂ ಕೂಡ ದೇಹ ಸುಸ್ತು ಆಯಾಸವನ್ನು ದಣಿವು ಕಾಡಲು ಶುರು ಆಗುತ್ತದೆ. ವಯಸ್ಸಾದವರಲ್ಲಿ ರಕ್ತಹೀನತೆ ಸಮಸ್ಯೆ ರಕ್ತದೊತ್ತಡ ಸಮಸ್ಯೆ ಹೃದ್ರೋಗದ ಸಮಸ್ಯೆಗಳು ಕಾಡುವುದು ಹಾಗೂ ವಿಟಮಿನ್ ಕೊರತೆಯಿಂದಾಗಿ ಅವರಲ್ಲಿ ಸುಸ್ತು ಆಯಾಸ ನಿಶ್ಯಕ್ತಿ ದಣಿವು ಎಲ್ಲವೂ ಕಾಣಿಸಿ ಕೊಳ್ಳುತ್ತದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಕಂಡು ಕೊಳ್ಳಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ನಾವು ತಿಳಿಸುವ ಈ ಮನೆಮದ್ದುಗಳನ್ನು ನೀವು ನಿಯಮಿತವಾಗಿ ಸರಿಯಾದ ರೀತಿಯಲ್ಲಿ ಅನುಸರಣೆ ಮಾಡಿದರೆ ನಿಮ್ಮ ದೇಹಕ್ಕೆ ಅಗತ್ಯವಾದ ಬೇಕಾದ ಪೋಷಕಾಂಶಗಳು ವಿಟಮಿನ್ ಗಳು ಶಕ್ತಿ ರೋಗ ನಿರೋಧಕ ಸಾಮರ್ಥ್ಯ ಎಲ್ಲವೂ ದೊರೆಯುತ್ತವೆ.
ಹಾಗಾದ್ರೆ ಆ ಮನೆಮದ್ದು ಹೇಗೆ ತಯಾರಸುವುದು ಅಂತ ತಿಳಿವುದಾದರೇ, ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅಂದ್ರೆ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ ಅವುಗಳೆಂದರೆ, ಕಪ್ಪು ಒಣದ್ರಾಕ್ಷಿ, ಅಂಜೂರ ಮತ್ತು ಹಾಲು. ನಾವು ಬಳಸುವ ಈ ಕಪ್ಪು ಒಣ ದ್ರಾಕ್ಷಿಯಲ್ಲಿ ಹೇರಳವಾದ ಮ್ಯಾಗ್ನಿಷಿಯಂ ಕಬ್ಬಿಣ ಪೊಟ್ಯಾಶಿಯಂ ಕ್ಯಾಲ್ಷಿಯಂ ಹೊಂದಿದೆ. ಕೇವಲ ಒಣದ್ರಾಕ್ಷಿ ಮಾತ್ರ ನೀವು ಸೇವನೆ ಮಾಡಿದರು ಕೂಡ ನಿಮಗೆ ಬೇಕಾದಷ್ಟು ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ.ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಮೂಳೆಗಳಿಗೆ ಬಲವನ್ನು ನೀಡುತ್ತದೆ. ಮತ್ತು ಒಣದ್ರಾಕ್ಷಿ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹೌದು ಇದರಲ್ಲಿ ಇರುವ ವಿಟಮಿನ್ ಕೆರೋಟಿನ್ ಹಾಗೂ ಬೀಟಾ ಕೆರೋಟಿನ್ ಅಂಶಗಳು ಕಣ್ಣಿನ ಆರೋಗ್ಯವನ್ನು ದುಪ್ಪಟ್ಟು ಮಾಡುತ್ತವೆ.
ಹಾಗೂ ಇದರಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇದರಿಂದ ರಕ್ತದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಅನೀಮಿಯಾ ರೋಗಿಗಳಿಗೆ ಕಪ್ಪು ಒಣದ್ರಾಕ್ಷಿ ರಾಮಬಾಣ ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಈ ಮನೆಮದ್ದು ನಲ್ಲಿ ಬಳಕೆ ಮಾಡುವ ಅಂಜೂರ ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದನ್ನು ದೇಹದ ತೂಕವನ್ನು ಇಳಿಸಿಕೊಳ್ಳಲು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಮತ್ತು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ. ಜೊತೆಗೆ ಜೀರ್ಣಶಕ್ತಿ ಅನ್ನು ವೃದ್ಧಿಸುತ್ತದೆ. ಇನ್ನೂ ಮನೆಮದ್ದು ಬಗ್ಗೆ ಹೇಳುವುದಾದರೆ ಇವೆರಡೂ ಸಾಮಗ್ರಿಗಳನ್ನು ತೆಗೆದುಕೊಂಡು ಎಂಟು ಒಣದ್ರಾಕ್ಷಿ ಹಾಗೂ ಐದು ಅಂಜೂರವನ್ನ ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು ಸಂಪೂರ್ಣವಾಗಿ ತಣ್ಣಗಾದ ಮೇಲೆ ಹಾಲನ್ನು ಕುಡಿಯಿರಿ ಹಾಗೂ ಅಂಜೂರ ಮತ್ತು ಕಪ್ಪು ಒಣದ್ರಾಕ್ಷಿ ಜಗಿದು ತಿನ್ನಿ. ಈ ಮನೆಮದ್ದು ಆದಷ್ಟು ಬೆಳಿಗ್ಗೆ ಮಾಡುವುದು ಸೂಕ್ತ. ಇದನ್ನು ನೀವು ಮೂರು ದಿನಗಳ ಕಾಲ ನಿಯಮಿತವಾಗಿ ಮಾಡುವುದರಿಂದ ನಿಮ್ಮಲ್ಲಿ ಬೇಡವಾದಷ್ಟು ಶಕ್ತಿ ಉತ್ಪತ್ತಿ ಆಗುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸುಸ್ತು ಆಯಾಸ ದಣಿವು ನಿಶ್ಯಕ್ತಿ ಬರುವುದಿಲ್ಲ. ನೀವು ತುಂಬಾ ಸ್ಟ್ರಾಂಗ್ ಆಗುತ್ತಿರೀ. ಶುಭದಿನ.