ಮಲಬದ್ಧತೆ ಸಮಸ್ಯೆ ಕೇವಲ ಹತ್ತು ನಿಮಿಷದಲ್ಲಿ ನಿವಾರಣೆ ಆಗುತ್ತದೆ. ಹಾಗೂ ಹೊಟ್ಟೆ ಫುಲ್ ಕ್ಲೀನ್ ಆಗುತ್ತದೆ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ಮಲಬದ್ಧತೆ ಸಮಸ್ಯೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಕಾಡುವ ಸರ್ವೇ ಸಾಮಾನ್ಯ ಆರೋಗ್ಯದ ಸಮಸ್ಯೆ ಆಗಿದೆ ಅಂತ ಹೇಳಬಹುದು. ಇದಕ್ಕೆ ನಾವು ಸೇವಿಸುವ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಕಾರಣ ಅಂತ ಹೇಳಿದರೆ ತಪ್ಪಾಗಲಾರದು ಹೌದು ಅತಿಯಾದ ಮಸಾಲೆಯುಕ್ತ ಆಹಾರ ಸೇವನೆ ಎಣ್ಣೆ ಪದಾರ್ಥಗಳ ಸೇವನೆ ಇಂದ ಹಾಗೂ ಅಧಿಕವಾಗಿ ಊಟವನ್ನು ಮಾಡುವುದರಿಂದ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ನಿಮಗೆ ಗೊತ್ತೇ ಕೇವಲ ಹತ್ತು ನಿಮಿಷದಲ್ಲಿ ನಿಮ್ಮ ಹೊಟ್ಟೆ ಫುಲ್ ಕ್ಲೀನ್ ಆಗುತ್ತದೆ. ಹೊಟ್ಟೆಯಲ್ಲಿ ಯಾವುದೇ ಕಲ್ಮಶಗಳು ಉಳಿಯುವುದಿಲ್ಲ. ಮಲಬದ್ಧತೆ ಸಮಸ್ಯೆ ಅನ್ನುವುದು ತಕ್ಷಣ ಮಾಯವಾಗುತ್ತದೆ. ಮಲಬದ್ಧತೆ ಸಮಸ್ಯೆ ಒಮ್ಮೆ ಶುರು ಆದರೆ ದೇಹದಲ್ಲಿ ಮತ್ತಷ್ಟು ಹಲವಾರು ಅನೇಕ ರೋಗಗಳು ಉದ್ಭವಿಸುತ್ತವೆ. ಜೊತೆಗೆ ಹೊಟ್ಟೆಗೆ ಸಂಭಂದಿಸಿದ ಹೊಟ್ಟೆ ಉಬ್ಬರ ಹೊಟ್ಟೆ ನೋವು ಹುಳಿತೇಗು ಮಲ ವಿಸರ್ಜನೆ ಮಾಡುವಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ತಡೆದುಕೊಳ್ಳಲು ಆಗದಷ್ಟು ನೋವು ಆಗುತ್ತವೆ. ಆದರೆ ಇದಕ್ಕೆ ಖಂಡಿತವಾಗಿ ಪರಿಹಾರ ಇದೆ ಗೆಳೆಯರೇ, ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

 

ಕೆಲವು ಜನರಿಗೆ ಕೆಲವೊಂದು ಬಾರಿ ಮೂರ್ನಾಲ್ಕು ದಿನವಾದರೂ ಕೂಡ ಮಲ ವಿಸರ್ಜನೆ ಆಗುವುದಿಲ್ಲ. ಆಗ ಅವರಿಗೆ ಹೊಟ್ಟೆ ಗಟ್ಟಿಯಾಗಿ ಹೊಟ್ಟೆಯಲ್ಲಿ ನೋವು ಬರಲು ಶುರು ಆಗುತ್ತದೆ ಅದನ್ನು ಸಹಿಸಿ ಕೊಳ್ಳಲು ಆಗುವುದಿಲ್ಲ. ಅದರಲ್ಲೂ ಚಿಕ್ಕ ಮಕ್ಕಳಿಗೆ ಈ ಮಲಬದ್ಧತೆ ಸಮಸ್ಯೆ ಬಂದರೆ ಅವುಗಳು ತುಂಬಾನೇ ಕಿರಿಕಿರಿ ಮಾಡುತ್ತವೆ. ಅಂಥಹ ಸಮಯದಲ್ಲಿ ನೀವು ಈ ಕೆಲವು ಮನೆಮದ್ದುಗಳನ್ನು ಬಳಕೆ ಮಾಡಿ ನೋಡಿ ಖಂಡಿತವಾಗಿ ಹತ್ತು ನಿಮಿಷ ದಲ್ಲಿ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಅದು ಯಾವ ಮನೆಮದ್ದು ಅದನ್ನು ಹೇಗೆ ಮಾಡುವುದು? ಮತ್ತು ಅದರಿಂದ ಪರಿಹಾರ ಹೇಗೆ ಸಿಗುತ್ತದೆ ಅಂತ ತಿಳಿಯೋಣ ಬನ್ನಿ ಗೆಳೆಯರೇ. ಒಂದು ನಿಂಬೆ ಗಾತ್ರದ ಹುಣಸೆ ಹಣ್ಣು ತೆಗೆದುಕೊಂಡು ಅದರನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿ ಇಡೀ ಬಳಿಕ ಅದನ್ನು ಹಿಂಡಿ ಅದರ ರಸವನ್ನು ತೆಗೆದುಕೊಳ್ಳಿ. ಆಮೇಲೆ ಇಂದು ಬಾಳೆಹಣ್ಣು ತೆಗೆದುಕೊಂಡು ಅದನ್ನು ಕಿವುಚಿ ಅದರಲ್ಲಿ ಹುಣಸೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ನೀವು ಸೇವನೆ ಮಾಡಿದರೆ ಖಂಡಿತವಾಗಿ ನಿಮಗೆ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.

 

ಎರಡನೆಯ ಮನೆಮದ್ದು ಯಾವುದು ಅಂತ ನೋಡುವುದಾದರೆ, ಒಂದು ಏಲಕ್ಕಿ ಅನ್ನು ತೆಗೆದು ಅದರ ಕಾಳುಗಳನ್ನು ಚೆನ್ನಾಗಿ ಬಿಡಿಸಿ ಅದನ್ನು ಒಂದು ಬಾಳೆಹಣ್ಣಿನಲ್ಲಿ ಹಾಕಿ ಮಿಕ್ಸ್ ಮಾಡಿ ತಿನ್ನಿ. ಇದರಿಂದ ಕೂಡ ಮಲಬದ್ಧತೆ ಸಮಸ್ಯೆ ನಿಮಗೆ ಕಾಡುವುದಿಲ್ಲ ಬೇಗನೆ ಕಡಿಮೆ ಆಗುತ್ತದೆ. ಹೌದು ಬಾಳೆಹಣ್ಣು ಮಲಬದ್ಧತೆ ಸಮಸ್ಯೆಗೆ ಹೇಳಿ ಮಾಡಿಸಿದ ಸೂಪರ್ ಫ್ರೂಟ್ ಅಂತ ಹೇಳಬಹುದು. ಮೂರನೆಯ ಮನೆಮದ್ದು ಏನೂ ಅಂತ ಹೇಳುವುದಾದರೆ, ರಾತ್ರಿ ಮಲಗುವಾಗ ಒಂದು ಕ್ಯಾರೆಟ್ ರಸವನ್ನು ಕುಡಿದು ಮಲಗಿ. ಇದರಿಂದ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಇನ್ನೂ ಕ್ಯಾರೆಟ್ ತಿನ್ನಲು ಅಥವಾ ಅದರ ರಸವನ್ನು ಕುಡಿಯಲು ಇಷ್ಟ ಆಗದೇ ಇರುವವರು ಪರಂಗಿ ಹಣ್ಣಿನ ರಸವನ್ನು ಕುಡಿಯಿರಿ. ಇವುಗಳ ಜೊತೆ ಜೊತೆಯಾಗಿ ನೀವು ನಿತ್ಯವೂ ಸರಿಯಾಗಿ ಹೆಚ್ಚು ಹೆಚ್ಚು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಹಾಗೂ ಊಟವಾದ ಬಳಿಕ ಸೋಂಪು ಕಾಳುಗಳನ್ನು ತಿನ್ನಬೇಕು. ಹಾಗೂ1-2 ಚಮಚ ತೆಂಗಿನ ಎಣ್ಣೆಯನ್ನು ಸೇವನೆ ಮಾಡಬೇಕು. ಮತ್ತು ಹೊಟ್ಟೆಗೆ ಸಂಭಂದಿಸಿದ ಕಷಾಯವನ್ನು ಮಾಡಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ.
ಜೊತೆಗೆ ಮಲಬದ್ಧತೆ ಸಮಸ್ಯೆ ಬರುವುದಿಲ್ಲ.

Leave a Reply

Your email address will not be published. Required fields are marked *