ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಸ್ತನ ಕ್ಯಾನ್ಸರ್ ಅನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ಪರಿಹಾರ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ಕ್ಯಾನ್ಸರ್ ಮಹಾಮಾರಿ ಕಾಯಿಲೆ. ಒಮ್ಮೆ ಇದು ದೇಹವನ್ನು ಹಾಸುಹೊಕ್ಕಿದರೆ ಸಾಯುವವರೆಗೂ ಎಡಬಿಡದೆ ಕಾಡುವ ಬಹುದೊಡ್ಡ ಕಾಯಿಲೆ ಅಂತ ಹೇಳಬಹುದು. ಇಂತಹ ಕಾಯಿಲೆಗಳು ನಮ್ಮ ಆಹಾರ ಪದ್ಧತಿ ಇಂದಲೇ ಬರುತ್ತದೆ. ನಮ್ಮ ಜೀವನ ಶೈಲಿ ನಮ್ಮ ಆಹಾರ ಪದ್ಧತಿ ನಮ್ಮ ಆರೋಗ್ಯದಲ್ಲಿ ಏರುಪೇರು ಆಗಲು ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಡಯಾಬಿಟೀಸ್ ರಕ್ತದೊತ್ತಡ ಹೃದಯ ಸಂಬಂಧಿ ರೋಗಗಳು ತೂಕ ಹೆಚ್ಚಳ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಅಂತ ತಿಳಿದು ಬಂದಿದೆ.ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯರೂ ಬಹಳ ಕೆಲಸದ ಒತ್ತಡದಿಂದಾಗಿ ಮನುಷ್ಯನು ಫಾಸ್ಟ್ ಫುಡ್ ಜಂಕ್ ಫುಡ್ ಗೆ ಹೊಂದಿ ಕೊಂಡಿದ್ದೇವೆ. ಹಾಗೂ ಹಣ್ಣುಗಳು ತರಕಾರಿ ಸೇವನೆ ಮಾಡದೇ ಅತಿ ಮುಖ್ಯವಾಗಿ ಅವುಗಳಲ್ಲಿ ಇರುವ ಬೀಜವನ್ನು ಕಸದ ತೊಟ್ಟಿಗೆ ಹಾಕುತ್ತೇವೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳಲು ಕಾರಣ ಆಗುತ್ತಿದ್ದೇವೆ. ಮತ್ತು ಮಹಾಮಾರಿ ಕಾಯಿಲೆಗಳಿಗೆ ನಾವು ದಾರಿ ಮಾಡಿ ಕೊಡುತ್ತಿದ್ದೇವೆ.

 

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಮುಖ್ಯವೋ ಹಾಗೆಯೇ ಅದರಲ್ಲಿ ಇರುವ ಬೀಜಗಳು ಕೂಡ ಅಷ್ಟೇ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡುತ್ತದೆ ಅನ್ನುವುದನ್ನು ನಾವು ಮರೆತು ಹೋಗಿದ್ದೇವೆ ಮಿತ್ರರೇ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ಆ ಯಾವ ಬೀಜ ಆರೋಗ್ಯಕರ ಗುಣಗಳನ್ನು ಹೊಂದಿದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಅದು ಬೇರೆ ಯಾವುದೇ ಅಲ್ಲ ಗೆಳೆಯರೇ ಅದುವೇ
ಕುಂಬಳಕಾಯಿ ಬೀಜ. ಹೌದು ಸಾಮಾನ್ಯವಾಗಿ ನಾವು ಕುಂಬಳ ಕಾಯಿ ಪಲ್ಯವನ್ನು ಮಾಡುತ್ತೇವೆ ಆದರೆ ಅದರಲ್ಲಿರುವ ಬೀಜಗಳನ್ನು ಬಿಸಾಡಿ ಬಿಡುತ್ತೇವೆ. ನಿಮಗೆ ಗೊತ್ತೇ ಕುಂಬಳ ಕಾಯಿ ಬೀಜದಲ್ಲಿ ಮ್ಯಾಗ್ನಿಷಿಯಂ, ಐರನ್ ವಿಟಮಿನ್ ಕೆ ಸಿ ಬಿ ಕ್ಯಾಲ್ಷಿಯಂ ನಾರಿನ ಅಂಶ ಎಲ್ಲವೂ ಅಡಗಿದೆ. ಈ ತರಕಾರಿ ಬೀಜದಲ್ಲಿ ಅಡಗಿರುವ ಈ ಎಲ್ಲ ಅಂಶಗಳು ನಮ್ಮ ದೇಹಕ್ಕೆ ದೊರೆತರೆ ನಮ್ಮ ಆರೋಗ್ಯವೂ ಎಷ್ಟು ವೃದ್ಧಿ ಆಗುತ್ತದೆ ಗೊತ್ತೇ ಆದರೆ ನಾವು ಈ ಕುಂಬಳ ಕಾಯಿ ಬೀಜಗಳನ್ನು ಬಿಸಾಡಿ ಬಿಡುತ್ತೇವೆ. ಆದರೆ ನೀವು ಈ ತಪ್ಪು ಮಾಡಬೇಡಿ ಮಿತ್ರರೇ, ಏಕೆಂದ್ರೆ ಈ ಬೀಜಗಳನ್ನು ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ.

 

ಹಾಗೂ ಈ ಬೀಜದಲ್ಲಿ ಮ್ಯಾಗ್ನಿಷಿಯಂ ಹೇರಳವಾಗಿ ಇರುವುದರಿಂದ ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಧುಮೇಹಿ ಗಳಿಗೆ ಕುಂಬಳಕಾಯಿ ಬೀಜಗಳು ರಾಮಬಾಣ ಇದ್ದಂತೆ ಅವರು ಈ ಕುಂಬಳ ಕಾಯಿ ಬೀಜಗಳನ್ನು ಸೇವನೆ ಮಾಡುವುದು ಒಳಿತು. ಹಾಗೂ ವಯಸ್ಸಾದವರಲ್ಲಿ ಕಂಡು ಬರುವ ಪ್ಯಾರಲೈಸಿಸ್ ರೋಗವು ಕೂಡ ಬರುವುದಿಲ್ಲ. ಅಂದರೆ ಆದಷ್ಟು ಅಪಾಯ ಕಡಿಮೆ ಆಗುತ್ತದೆ.
ಇನ್ನೂ ಮಹಿಳೆಯರಲ್ಲಿ ಕಾಡುವ ಸ್ತನ ಕ್ಯಾನ್ಸರ್ ರೋಗವನ್ನು ಕೂಡ ಕುಂಬಳ ಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ತಪ್ಪಿಸಬಹುದು. ಇನ್ನೂ ರಾತ್ರಿ ಮಲಗುವಾಗ ಈ ಕುಂಬಳ ಕಾಯಿ ಬೀಜಗಳನ್ನು ನೀರಿನಲ್ಲಿ ಹಾಕಿ ನೆನೆಸಿ ಮರುದಿನ ಬೆಳಿಗ್ಗೆ ತಿನ್ನುವುದರಿಂದ ಹಸಿವು ಹೆಚ್ಚಾಗಿ ಆಗುವುದಿಲ್ಲ ಇದರಿಂದ ದೇಹದ ತೂಕವನ್ನು ನೀವು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಮತ್ತು ದೇಹದಲ್ಲಿ ಉರಿ ಊತದ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಕುಂಬಳಕಾಯಿ ಸಹಕಾರಿಯಾಗಿದೆ. ಮತ್ತು ಕುಂಬಳ ಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹೀಗೆ ಅನೇಕ ಲಾಭಗಳನ್ನು ಹೊಂದಿರುವ ಬೀಜಗಳನ್ನು ನಾವು ಎಂದಿಗೂ ಬಿಸಾಡಬಾರದು ಅವುಗಳ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬೇಕು. ಶುಭದಿನ.

Leave a Reply

Your email address will not be published. Required fields are marked *