ಗೊರಕೆ ಹೊಡೆಯುತ್ತಿದ್ದವರಿಗೆ ಈ ಮನೆಮದ್ದುಗಳನ್ನು ಮಾಡಿ ಕೊಡಿ. ನೈಸರ್ಗಿಕವಾದ ಮನೆಮದ್ದುಗಳು.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ವಯಸ್ಸಾದ ಮೇಲೆ ಗೊರಕೆ ಹೊಡೆಯುವುದು ಸಹಜ ಆದರೆ ವಯಸ್ಸಿಗೂ ಮುನ್ನ ಗೊರಕೆ ಹೊಡೆಯುವುದೆಂದರೆ ಬಹಳ ಮುಜುಗರ ತಂದು ಕೊಡುತ್ತದೆ ಆದರೆ ಇದು ಒಂದು ದೈಹಿಕವಾಗಿ ನಡೆಯುವಂತಹ ಒಂದು ನೈಸರ್ಗಿಕವಾದ ಪ್ರಕ್ರಿಯೆ ಅಂತ ಹೇಳಬಹುದು. ರಾತ್ರಿ ಗೊರಕೆ ಹೊಡೆಯುವುದು ಬಹುಜನರಿಗೆ ಇರುವ ಅಭ್ಯಾಸ ಅಂತ ಹೇಳಬಹುದು. ಈ ಸಮಸ್ಯೆ ಗೊರಕೆ ಹೊಡೆಯುತ್ತಿದ್ದವರಿಗೆ ಗೊತ್ತಿರುವುದಿಲ್ಲ ಅವರಿಗೆ ಅರಿವು ಕೂಡ ಇರುವುದಿಲ್ಲ ಆದರೆ ಅವರ ಪಕ್ಕದಲ್ಲಿ ಇರುವ ಜನರಿಗೆ ಇದು ಹಿಂಸೆ ಆಗಿರುತ್ತದೆ. ಸುಖವಾದ ನಿದ್ರೆ ಮಾಡಲು ಆಗುವುದಿಲ್ಲ. ಗೊರಕೆ ಹೊಡೆಯುವವರಿಗೆ ಸುಖವಾದ ನಿದ್ರೆ ಏನೋ ಹತ್ತುತ್ತದೆ ಗೆಳೆಯರೇ ಆದರೆ ಪಕ್ಕದಲ್ಲಿ ಇರುವವರಿಗೆ ಯಾಕಪ್ಪಾ ಇವರ ಹತ್ತಿರ ಮಲಗಿದ್ದೆವು ಅಂತ ಅನ್ನಿಸುತ್ತದೆ. ಈ ನಿದ್ರೆ ಸಮಸ್ಯೆ ಅನ್ನುವುದು ಪ್ರತಿಯೊಬ್ಬರಲ್ಲಿ ಕೂಡ ಕಾಡುವ ಸಮಸ್ಯೆ ಆಗಿದೆ.

 

ಈ ಗೊರಕೆ ಶಬ್ದ ಯಾರಲ್ಲಿ ಅಧಿಕವಾಗಿ ಕಾಣಬಹುದು ಅಂದರೆ ಲೇಟಾಗಿ ಮಲಗುವವರಿಗೆ ರಾತ್ರಿ ಲೇಟಾಗಿ ಊಟವನ್ನು ಮಾಡುವವರಿಗೆ ಹಾಗೂ ಮಧ್ಯಪಾನ ಮತ್ತು ಧೂಮಪಾನ ಸೇವನೆ ಮಾಡುವವರಿಗೆ ದಪ್ಪ ಇರುವವರಿಗೆ ಹಾಗೂ ಅತಿಯಾದ ಕಷ್ಟದ ಕೆಲಸವನ್ನು ಮಾಡುವವರಿಗೆ ಈ ಗೊರಕೆ ಶಬ್ದ ಹೆಚ್ಚಾಗಿ ಬರುತ್ತದೆ. ಆದರೆ ಗೊರಕೆ ಹೊಡೆಯುತ್ತಿದ್ದವರಿಗೆ ಪರಿಜ್ಞಾನ ಅನ್ನುವುದು ಇರುವುದಿಲ್ಲ. ಈ ಗೊರಕೆ ಶಬ್ದ ಅನ್ನುವುದು ಕೆಲವರು ದಪ್ಪ ಧ್ವನಿಯಲ್ಲಿ ಮಾಡುತ್ತಾರೆ ಇನ್ನೂ ಕೆಲವರು ಸಣ್ಣ ಧ್ವನಿಯಲ್ಲಿ ಗೊರಕೆ ಹೊಡೆಯುತ್ತಾರೆ. ಈ ಗೊರಕೆ ಶಬ್ದ ಪಕ್ಕದಲ್ಲಿ ಇರುವವರ ಸುಖವಾದ ನಿದ್ರೆಯನ್ನು ಹಾಳು ಮಾಡುವುದದೇ ಅವರ ನೆಮ್ಮದಿಯನ್ನು ಕೂಡ ಹಾಳು ಮಾಡುತ್ತದೆ. ನೀವು ನೋಡಿರಬಹುದು ಹಾಗೂ ಕೇಳಿರಬಹುದು ಈ ಗೊರಕೆ ಶಬ್ದದಿಂದ ಅನೇಕ ದಂಪತಿಗಳ ಮಧ್ಯೆ ಕಲಹ ಉಂಟಾಗಿ ಡೈವೋರ್ಸ್ ಮಟ್ಟಕ್ಕೆ ತಲುಪುವ ಉದಾಹರಣೆಯನ್ನು ನಾವು ನೋಡಿರಬಹುದು ಹಾಗೂ ಕೇಳಿರಬಹುದು. ಗೊರಕೆ ಹೊಡೆಯುತ್ತಿದ್ದರು ಯಾವಾಗ್ಲೂ ಬೈಸಿ ಕೊಳ್ಳುತ್ತಲೇ ಇರಬೇಕು.

 

ಹಾಗಾದ್ರೆ ಇದಕ್ಕೆ ಪರಿಹಾರ ಇಲ್ಲವೇ? ಖಂಡಿತವಾಗಿ ಇದೆ ಗೆಳೆಯರೇ, ನಾವು ತಿಳಿಸುವ ಈ ಮನೆಮದ್ದು ಹಾಗೂ ಸಲಹೆಯನ್ನು ಫಾಲೋ ಮಾಡುತ್ತಾ ಬನ್ನಿ ಖಂಡಿತವಾಗಿ ನಿಮಗೆ ಈ ಸಮಸ್ಯೆಯಿಂದ ಪಾರಾಗುವಿರಿ.
ಮೊದಲನೆಯ ವಿಧಾನ ಏಲಕ್ಕಿ ಪುಡಿಯನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಅದನ್ನು ಮಲಗುವಾಗ ಕುಡಿದು ಮಲಗಿ ಇದರಿಂದ ಗೊರಕೆ ಶಬ್ದ ನಿಲ್ಲುತ್ತದೆ. ಇನ್ನೂ ಈ ಗೊರಕೆ ಸಮಸ್ಯೆ ಇರುವವರು ಮಲಗಿದ್ದಾಗ ಆಗಾಗ ತಮ್ಮ ಮಗ್ಗಲನ್ನು ಬದಲಾಯಿಸುತ್ತಾ ಇರಬೇಕು. ಇನ್ನೂ ಗೊರಕೆ ಶಬ್ದ ಮಾಡುವವರ ಪಕ್ಕದಲ್ಲಿ ಮಲಗಿದ್ದಾಗ ನೀವು ಅವರನ್ನು ಆಗಾಗ ಎಬ್ಬಿಸುತ್ತಾ ಇರಬೇಕು ಇದರಿಂದ ಅವರು ಎಚ್ಚರಗೊಂಡು ಗೊರಕೆ ಶಬ್ದ ನಿಲ್ಲುತ್ತದೆ. ಇನ್ನೂ ಕೊನೆಯದಾಗಿ ಒಂದು ಕಪ್ ನಶ್ಟು ಆ್ಯಪಲ್ ಪೀಸ್ ಅನ್ನು ತೆಗೆದುಕೊಳ್ಳಿ ಆಮೇಲೆ ಒಂದು ಕಪ ನಶ್ಟು ಕ್ಯಾರೆಟ್ ತುರಿ ತೆಗೆದುಕೊಂಡು ಅದರಲ್ಲಿ ಶುಂಠಿ ಹಾಕಿ ಅದಕ್ಕೆ ನಿಂಬೆ ರಸ ಹಿಂಡಿ ಮಲಗುವ ಎರಡು ತಾಸು ಮುನ್ನವೇ ತಿಂದು ಮಲಗಿ. ಇದರಿಂದ ನಿಮಗೆ ನಿದ್ರೆ ತುಂಬಾನೇ ಚೆನ್ನಾಗಿ ಬರುತ್ತದೆ. ಹಾಗೂ ನಿಮ್ಮ ತಲೆ ಯಾವಾಗ್ಲೂ ಎತ್ತರವಾಗಿ ಇರಬೇಕು ಹಾಗೆ ನೋಡಿ ಕೊಳ್ಳಿ. ಇದರಿಂದ ನಿಮಗೆ ಗೊರಕೆ ಸಮಸ್ಯೆ ಕಾಡುವುದಿಲ್ಲ. ಹೌದು ಈ ಸರಳವಾದ ಸುಲಭವಾದ ಟಿಪ್ಸ್ ಗಳನ್ನು ನೀವು ಮಾಡಿ ಖಂಡಿತವಾಗಿ ನಿಮಗೆ ಸಹಾಯ ಆಗುತ್ತದೆ ಶುಭದಿನ.

Leave a Reply

Your email address will not be published. Required fields are marked *