ಕೊಬ್ಬರಿ ಎಣ್ಣೆಯ ಜೊತೆ ಒಂದು ಮುಷ್ಟಿ ಇದನ್ನು ಬೆರೆಸಿ ಹೀಗೆ ತಲೆಗೆ ಹಚ್ಚಿ ಒಂದೇ ವಾರದಲ್ಲಿ ಕೂದಲು ದಟ್ಟವಾಗಿ ಬೆಳೆಯುತ್ತೆ..ಉದುರೋದು ಕಮ್ಮಿ ಆಗುತ್ತೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೌದು ಇದಕ್ಕೆ ಅನೇಕ ಬಗೆಯ ಪ್ರಯತ್ನಗಳನ್ನು ಮಾಡಿದರು ಕೂಡ ಮನಸ್ಸಿಗೆ ತೃಪ್ತಿ ನೀಡುವ ಫಲಿತಾಂಶ ದೊರೆಯುತ್ತಿಲ್ಲ. ಹಾಗಾದರೆ ನೀವು ಕೊಬ್ಬರಿ ಎಣ್ಣೆಯಲ್ಲಿ ಈ ಒಂದು ವಸ್ತುವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಸೌಂದರ್ಯವನ್ನು ನೀವೇ ಗಮನಿಸುವಿರಿ. ಮೊದಲಿನ ಕಾಲದ ಅಜ್ಜಿಗಳು ಹಾಗೂ ಹಿರಿಯರು ಹೆಣ್ಣು ಮಕ್ಕಳಿಗೆ ಸಂಜೆ ವೇಳೆಗೆ ತಲೆ ಸ್ನಾನವನ್ನು ಮಾಡಿಸುತ್ತಿದ್ದರು ಕೂದಲಿಗೆ ಚೆನ್ನಾಗಿ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಟ್ಟು ತಲೆ ಸ್ನಾನ ಮಾಡಿಸುತ್ತಿದ್ದರು ಆಗ ಅಂಥಹ ಕಾಲ ಈಗ ಇಲ್ಲ ಗೆಳೆಯರೇ ಕಾರಣ ಸಮಯದ ಕೊರತೆ ಕೆಲಸದ ಒತ್ತಡ. ಹೀಗಾಗಿ ಕೂದಲಿನ ಆರೈಕೆ ಮಾಡುವುದು ತುಂಬಾನೇ ಕಷ್ಟದ ಕೆಲಸವಾಗಿದೆ.

 

ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮುಖದ ಸೌಂದರ್ಯ ಹಾಗೂ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಆದರೆ ಕಾಲ ಬದಲಾಗಿದೆ. ಈಗಿನ ಯುವಜನತೆ ಪಾರ್ಲರ್ ಗಳ ಮೊರೆ ಹೋಗುತ್ತಿದ್ದಾರೆ. ಎಷ್ಟೇ ಖರ್ಚು ಆದರೂ ಕೂಡ ಪಾರ್ಲರ್ ಗೆ ಕೂದಲಿನ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮೊರೆ ಹೋಗಿದ್ದಾರೆ ಹಾಗೂ ಹೋಗುತ್ತಿದ್ದಾರೆ. ಆದರೆ ನಿಮಗೆ ಗೊತ್ತೇ, ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಹಣದ ಖರ್ಚು ಮಾಡಿದರೂ ಕೂಡ ಅದು ಮೊದಲಿನ ಸ್ಥಿತಿಗೆ ಬರುತ್ತದೆ. ಆದ್ದರಿಂದ ನಾವು ಆದಷ್ಟು ಮನೆಮದ್ದುಗಳನ್ನು ಬಳಕೆ ಮಾಡಬೇಕು. ನಮ್ಮ ವಾತಾವರಣದಲ್ಲಿ ಸುತ್ತಮುತ್ತಲೂ ಹಾಗೂ ಹಿತ್ತಲಿನಲ್ಲಿ ಬೆಳೆಯುವ ಸಸ್ಯಗಳ ಗಿಡ ಮೂಲಿಕೆಗಳ ಬಳಕೆ ಮಾಡಿಕೊಂಡು ನೈಸರ್ಗಿಕವಾಗಿ ನಮ್ಮ ಕೂದಲಿನ ಹಾಗೂ ಮುಖದ ಕಾಂತಿ ಮತ್ತು ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಬಹುದು.
ಆದರೆ ನಾವು ಅದನ್ನು ಅರಿತರು ಕೂಡ ಅವುಗಳನ್ನು ಪಾಲನೆ ಮಾಡುವುದಿಲ್ಲ. ಅಂಥಹ ತಪ್ಪನ್ನು ಮಾಡಬೇಡಿ.

 

ಅದರಲ್ಲೂ ಕೂದಲಿನ ಸಮಸ್ಯೆ ಕಾಡುತ್ತಿದ್ದರೆ ಜನರು ಗಾಬರಿ ಪಡುತ್ತಾರೆ. ಕೂದಲನ್ನು ಹೆಚ್ಚಾಗಿ ಆರೈಕೆ ಮಾಡುತ್ತಾರೆ. ಕೂದಲು ದಟ್ಟವಾಗಿ ಬೆಳೆಯದೇ ಹೋದಲ್ಲಿ ಉದುರುವುದು ಸಮಸ್ಯೆ ಕಾಡುತ್ತಲೇ ಇರುತ್ತಿದ್ದರೆ ಸಾಕಷ್ಟು ಹಿಂಸೆ ಬೇಜಾರು ನೋವು ಜಿಗುಪ್ಸೆ ಬಂದು ಬಿಡುತ್ತದೆ ಆದರೆ ಚಿಂತೆ ಬಿಡಿ. ನಾವು ಇಂದು ನಿಮಗೆ ಒಂದು ಸೂಪರ್ ಮನೆಮದ್ದು ತಿಳಿಸಿ ಕೊಡುತ್ತೇವೆ. ಮೊದಲಿಗೆ ಒಂದು ಹಿಡಿಯಷ್ಟು ಕರಿಬೇವು ಹಾಗು ಮೆಹಂದಿ ಸೊಪ್ಪು ತೆಗೆದುಕೊಳ್ಳಿ. ತದ ನಂತರ ಅದರಲ್ಲಿ ದಾಸವಾಳ ಎಲೆಗಳನ್ನು ಹಾಕಿ ಕುದಿಸಿ ಬಳಿಕ ಐದು ನಿಮಿಷ ಬಿಟ್ಟು ನೆಲ್ಲಿಕಾಯಿ ಹಾಕಿ ಹುರಿದುಕೊಳ್ಳಿ. ಅದಕ್ಕೆ ಒಂದು ಚಮಚ ಮೆಂತ್ಯ ಕಾಳು ಹಾಕಿ ಮತ್ತು ಒಂದು ಹಿಡಿ ಬೃಂಗ ರಾಜ ಪುಡಿ ಹಾಗೂ ಕೊಳಿಂಜ್ ಬೀಜಗಳನ್ನು ಹಾಕಿ. ಎಲ್ಲವನ್ನು ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ ಅದರಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಾಕಿ.
ಚೆನ್ನಾಗಿ ಅದರ ಬಣ್ಣ ಬದಲಾಗುವವರೆಗೆ ಬಿಸಿ ಮಾಡುತ್ತಾ ಬನ್ನಿ.ಅದನ್ನು ಆರಲು ಬಿಡಿ ಬಳಿಕ ಅದನ್ನು ಶೋಧಿಸಿಕೊಳ್ಳಿ. ವಾರದಲ್ಲಿ ಎರಡು ನಿಮ್ಮ ಕೂದಲಿಗೆ ಹಚ್ಚಿದರೆ ಸಾಕು ನಿಮ್ಮ ಕೂದಲು ದಟ್ಟವಾಗಿ ಸುಂದರವಾಗಿ ಬೆಳೆಯುತ್ತವೆ. ಅಷ್ಟೇ ಅಲ್ಲದೇ ತಲೆನೋವು ತಲೆ ಸುತ್ತು ಮತ್ತಿತ್ತರ ಸಮಸ್ಯೆಗಳು ಬರುವುದಿಲ್ಲ. ಎಲ್ಲವೂ ಕಡಿಮೆ ಆಗುತ್ತವೆ. ಶುಭದಿನ.

Leave a Reply

Your email address will not be published. Required fields are marked *