ನಮಸ್ತೇ ಪ್ರಿಯ ಓದುಗರೇ, ಹಲ್ಲು ನೋವು ಬಂದರೆ ಸಾಕಪ್ಪಾ ಸಾಕು ಅನ್ನಿಸುತ್ತದೆ. ಎಲ್ಲ ನೋವಿಗಿಂತ ಹಲ್ಲು ನೋವು ಬರಬಾರದು ಅಂತ ಜನರು ಹೇಳುತ್ತಾರೆ. ಎಷ್ಟೊಂದು ವಿಪರೀತವಾದ ನೋವು ಹಿಂಸೆ ಆಗಿರುತ್ತದೆ ಈ ಹಲ್ಲು ನೋವು. ಇನ್ನೂ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಹಲ್ಲುಗಳಲ್ಲಿ ಹುಳು ಆಗುವುದು ಆಗುತ್ತದೆ ಹಾಗೆಯೇ ವಯಸ್ಸಾದವರಲ್ಲಿ ಕೂಡ ಈ ಹಲ್ಲುಗಳ ಸಮಸ್ಯೆಯನ್ನು ಕಾಣಬಹುದು. ನಿಮ್ಮ ಹಲ್ಲುಗಳು ಹಳದಿ ಬಣ್ಣದಲ್ಲಿ ಕಾಣುತ್ತಿದ್ದರೆ ಹಾಗೂ ಒಸಡು ಗಳಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ, ವಿಪರೀತವಾದ ನೋವು ಆಗುತ್ತಿದ್ದರೆ ಮತ್ತು ತುಂಬಾನೇ ತಣ್ಣಗೆ ಇರುವ ಹಾಗೂ ಬಿಸಿ ಇರುವ ಆಹಾರವನ್ನು ತಿನ್ನುವುದರಿಂದ ಹಲ್ಲುಗಳು ಜುಮ್ ಅನ್ನುತ್ತಿದ್ದರೆ ನಾವು ಇಂದಿನ ಲೇಖನದಲ್ಲಿ ತಿಳಿಸುವ ಮನೆಮದ್ದು ಮಾಡಿ ನೋಡಿ ಖಂಡಿತವಾಗಿ ಫಲಿತಾಂಶ ನಿಮ್ಮದಾಗುತ್ತದೆ.
ನೀವು ಕೂಡ ಹಲ್ಲಿನ ವಿಷಯದಲ್ಲಿ ಇಂತಹ ಅನೇಕ ಬಗೆಯ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಖಂಡಿತವಾಗಿ ನಾವು ತಿಳಿಸುವ ಮನೆಮದ್ದು ಮಾಡಿಕೊಂಡು ನಿಮ್ಮ ಹಲ್ಲುಗಳನ್ನು ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಿ ಹಾಗಾದ್ರೆ ಆ ಮನೆಮದ್ದು ಹೇಗೆ ಮಾಡಬೇಕು ಯಾವ ರೀತಿಯಲ್ಲಿ ಮಾಡಬೇಕು ಹಾಗೂ ಯಾವಾಗ ಮಾಡಬೇಕು ಅಂತ ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲನೆಯ ಮನೆಮದ್ದು ಮಾಡಲು ಬೇಕಾಗುವ ಸಾಮಾಗ್ರಿಗಳು ಯಾವುವು ಅಂತ ತಿಳಿಯುವುದಾದರೆ, ಅರಿಶಿನ ಸೈಂಧವ ಲವಣ ಸ್ಫಟಿಕ, ಹಾಗೂ ಹರಳೆಣ್ಣೆ. ಇವೆಲ್ಲ ಸಾಮಗ್ರಿಗಳು ಈ ಮನೆಮದ್ದು ತಯಾರಿಸಲು ಬೇಕಾಗುತ್ತದೆ.
ಮೊದಲಿಗೆ ಸ್ಪಟಿಕವನ್ನು ಪುಡಿ ಮಾಡಿ ಇಟ್ಟುಕೊಳ್ಳಿ ಇದು ನಿಮಗೆ ಆಯುರ್ವೇದಿಕ್ ಅಂಗಡಿಯಲ್ಲಿ ಸಿಗುತ್ತದೆ ಅಥವಾ ಗ್ರಂಥಿ ಅಂಗಡಿಯಲ್ಲಿ ಸಿಗುತ್ತದೆ. ಇದು ನೋಡಲು ಬಿಳಿ ಉಪ್ಪಿನ ಹಾಗೆ ಹರಳಿನ ಹಾಗೆ ಇರುತ್ತದೆ. ಇದನ್ನು ಕುಟ್ಟಿ ಪುಡಿ ಮಾಡಿ ಒಂದು ಗಾಜಿನ ಡಬ್ಬದಲ್ಲಿ ಹಾಕಿ ಬೇಕಾದಾಗ ಬಳಕೆ ಮಾಡಿಕೊಳ್ಳಬೇಕು. ಬಳಿಕ ಇಂದು ಬಟ್ಟಲಿನಲ್ಲಿ ಅರಿಶಿನ ಪುಡಿಯನ್ನು ಹಾಕಿ.
ಅದಕ್ಕೆ ಈ ಸ್ವಲ್ಪ ಸ್ಪಠಿಕವನ್ನು ಸೇರಿಸಿ ಮಿಕ್ಸ್ ಮಾಡಿ. ಆಮೇಲೆ ಅದಕ್ಕೆ ಸೈಂಧವ ಲವಣದ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಹರಳೆಣ್ಣೆ ಹಾಕಿ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಲಸಿ. ಈ ರೀತಿ ನೀವು ಮಾಡಿದ ಮಿಶ್ರಣವನ್ನು ಪ್ರತಿನಿತ್ಯವೂ ಬೆಳಿಗ್ಗೆ ಹಲ್ಲು ಉಜ್ಜುವಾಗ ಇದನ್ನು ಬ್ರಷ್ ಗೆ ಹಚ್ಚಿಕೊಂಡು ಹಲ್ಲು ಉಜ್ಜಬೇಕು. ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿ ಇರುವ ಕಲೆಗಳು ಹಾಗೂ ಹಳದಿ ಹಲ್ಲುಗಳು ಮತ್ತು ಮುಖ್ಯವಾಗಿ ಹುಳುಕು ಹಲ್ಲುಗಳು ಹಾಗೂ ಕೊಳೆತ ಹಲ್ಲುಗಳು, ಒಸಡುಗಳಲ್ಲಿ ರಕ್ತ ಬರುವುದು ಮತ್ತು ಹಲ್ಲು ಜುಮ್ ಎನ್ನುವುದು ಹೀಗೆ ಇನ್ನಿತರ ಸಮಸ್ಯೆಯನ್ನು ತಕ್ಷಣವೇ ಪರಿಹಾರ ಮಾಡುತ್ತದೆ. ಈ ಮನೆಮದ್ದು ನಲ್ಲಿ ಬಳಸಿರುವ ಎಲ್ಲ ಸಾಮಗ್ರಿಗಳು ಮನೆಯಲ್ಲಿ ಸಿಗುವ ಸಾಮಗ್ರಿಗಳಾಗಿವೆ. ಹೌದು ಯಾವುದೇ ಖರ್ಚು ವೆಚ್ಚ ಇಲ್ಲದೆ ನೀವು ಸುಲ್ಭವಾಗಿ ಈ ಹಲ್ಲು ನೋವಿಗೆ ಮನೆಯಲ್ಲಿ ಪರಿಹಾರ ಮಾಡಿಕೊಳ್ಳಬಹುದು. ಹಲ್ಲುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನುವುದು ಅದರ ನೋವು ಬಂದಾಗ ಗೊತ್ತಾಗುತ್ತದೆ. ಹೀಗಾಗಿ ನೀವು ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸಿ ಇಂತಹ ಮನೆಮದ್ದುಗಳನ್ನು ಮನೆಯಲ್ಲಿ ಮಾಡಿ ಪರಿಹಾರ ಕಂಡುಕೊಳ್ಳಿ.