ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮದುವೆ ಸಮಾರಂಭ ಹಾಗೂ ಇನ್ನಿತರ ಗ್ರಾಂಡ್ ಪಾರ್ಟಿ ಫಂಕ್ಷನ್ ಗೆ ತಕ್ಷಣವೇ ರೆಡಿ ಆಗಿ ಹೋಗಬೇಕಾಗುತ್ತದೆ. ಅಂಥಹ ಸಮಯದಲ್ಲಿ ನಮ್ಮ ಮುಖವನ್ನು ನಾವು ಬ್ಯೂಟಿ ಪಾರ್ಲರ್ ಗೆ ಹೋಗಿ ಸುಂದರವಾಗಿ ಮಾಡಿಕೊಳ್ಳುವಷ್ಟು ಸಮಯ ಇರುವುದಿಲ್ಲ ಅಲ್ವಾ ಗೆಳೆಯರೇ. ಹೀಗಾಗಿ ಇಂದಿನ ಲೇಖನದ ಮೂಲಕ ನಾವು ನಿಮಗೆ ಮದುವೆ ಸಮಾರಂಭಗಳಿಗೆ ಹೋಗಬೇಕಾದರೆ ತಕ್ಷಣವೇ ನಿಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಳ್ಳಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ನಿಜಕ್ಕೂ ಇದು 100% ನೈಸರ್ಗಿಕವಾದ ಮನೆಮದ್ದು ಆಗಿದೆ. ಇದು ಬಹಳ ಪರಿಣಾಮಕಾರಿ ಆಗಿದ್ದು ಇದನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ ಖಂಡಿತವಾಗಿ ನಿಮ್ಮ ಮುಖ ಫಳ ಫಳ ಹೊಳೆಯುತ್ತದೆ.
ನಿಮ್ಮ ಮುಖದ ಮೇಲೆ ಹಾಗೂ ಒಳಚರ್ಮದ ಮೇಲೆ ಭಾರಿ ಕೆಲಸವನ್ನು ಮಾಡುತ್ತದೆ. ಈ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅದನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಅನೇಕ ದಾರಿಯನ್ನು ಹಾಗೂ ಖರ್ಚು ಮಾಡುತ್ತಾರೆ. ಆದರೆ ನಾವು ತಿಳಿಸುವ ಈ ಮನೆಮದ್ದು ನಿಜಕ್ಕೂ 100% ನ್ಯಾಚುರಲ್ ಆಗಿದ್ದು ಇದನ್ನು ಸಿದ್ದ ಪಡಿಸಿ ಕೊಳ್ಳಲು ನಿಮಗೆ ಹಣದ ಅವಶ್ಯಕತೆ ಇಲ್ಲ. ಏಕೆಂದ್ರೆ ಕೇವಲ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನೀವು ಈ ಮನೆಮದ್ದು ತಯಾರಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಮನೆಮದ್ದು ಏನು ಅಂತ ತಿಳಿಯೋಣ. ಮೊದಲಿಗೆ ಒಂದು ಬಟ್ಟಲಿನಲ್ಲಿ ಕಾಫಿ ಪುಡಿ ಹಾಕಿಕೊಳ್ಳಿ. ನಿಮ್ಮ ಮನೆಯಲ್ಲಿ ಇರುವ ಯಾವುದೇ ಬ್ರಾಂಡ್ ಇರುವ ಕಾಫಿ ಪುಡಿ ತೆಗೆದುಕೊಳ್ಳಿ. ಇದರಿಂದ ಏನು ತೊಂದರೆ ಆಗುವುದಿಲ್ಲ. ಈಗ ಕಾಫಿ ಪುಡಿ ಹಾಕಿದ ಮೇಲೆ ಅರ್ಧ ಚಮಚ ಅಕ್ಕಿ ಹಿಟ್ಟು ಹಾಕಿ ಆಮೇಲೆ ಇದಕ್ಕೆ ಎರಡು ಚಿಟಿಕೆ ಅಷ್ಟು ಕಸ್ತೂರಿ ಅರಿಶಿನವನ್ನು ಹಾಕಿ. ತದ ನಂತರ ಅರ್ಧ ಚಮಚ ದಷ್ಟು ಅಲೋವೆರಾ ಜೆಲ್ ಹಾಕಿ. ನಂತರ ಒಂದೂವರೆ ಚಮಚದಷ್ಟು ರೋಸ್ ವಾಟರ್ ಹಾಕಿ. ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಮಿಶ್ರಣವನ್ನು ಮಾಡಿ ಇಟ್ಟುಕೊಳ್ಳಿ.
ಈಗ ಈ ಪೇಸ್ಟ್ ಸಿದ್ಧವಾಗಿದೆ ಇನ್ನೂ ಇದನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಅಂತ ತಿಳಿವಿದಾದರೆ ಮೊದಲಿಗೆ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಸ್ವಚ್ಛವಾಗಿ ಮಾಡಿಕೊಳ್ಳಿ.
ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. 10-15 ನಿಮಿಷಗಳವರೆಗೆ ನಿಮ್ಮ ಮುಖದ ಮೇಲೆ ಈ ಪೇಸ್ಟ್ ಹಾಗೆ ಇರುವಂತೆ ನೋಡಿಕೊಳ್ಳಿ ಅಂದರೆ ಒಣಗಲು ಹಾಗೆ ಬಿಡಿ. ಚೆನ್ನಾಗಿ ಒಣಗಿದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಆಗ ನೋಡಿ ನಿಮ್ಮ ಮುಖ ಹೇಗೆ ಫಳಫಳ ಹೊಳೆಯುತ್ತದೆ ಎಂದು ನೀವೇ ಆಶ್ಚರ್ಯ ಪಡುತ್ತೀರಿ. ನಿಮ್ಮ ಮುಖ ಹಾಗೆಯೇ ಹೊಳೆಯುತ್ತದೆ. ಈ ನೈಸರ್ಗಿಕ ಮನೆಮದ್ದು ಅನ್ನು ನೀವು ವಾರದಲ್ಲಿ ಎರಡು ಬಾರಿ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮುಖದ ತ್ವಚೆ ನಿಮ್ಮದಾಗುತ್ತದೆ ನಿಮ್ಮ ಮುಖದ ಕಾಂತಿ ದುಪ್ಪಟ್ಟು ಆಗುತ್ತದೆ. ಇಂತಹ ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು. ಶುಭದಿನ.