ನಮಸ್ತೇ ಪ್ರಿಯ ಓದುಗರೇ ನಮ್ಮ ದೈನಂದಿನ ಆರೋಗ್ಯ ಪದ್ಧತಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ನಾವು ನಮ್ಮ ದೇಹದ ಪ್ರತಿಯೊಂದು ಅಂಗಗಳ ಬಗ್ಗೆ ಮುಖ್ಯವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆರೋಗ್ಯ ಹೇಗೆ ಮುಖ್ಯವೋ ಹಾಗೆಯೇ ದೇಹದ ಪ್ರತಿಯೊಂದು ಅಂಗವೂ ಮುಖ್ಯವಾಗಿರುತ್ತದೆ. ನೀವು ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೆಂದರೆ ಅವುಗಳು ಸೂಕ್ಷ್ಮಾಣು ಜೀವಿಗಳ ಮೂಲಕ ದೇಹವನ್ನು ಸೇರುತ್ತವೆ. ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಾವು ಆರೋಗ್ಯವಾಗಿರಲು ನಮ್ಮ ದೇಹದ ಪ್ರತಿಯೊಂದು ಅಂಗಗಳು ಪ್ರಮುಖವಾಗಿ ಕೆಲಸವನ್ನು ಮಾಡಬೇಕಾಗುತ್ತದೆ.ಉತ್ತಮವಾದ ಆರೋಗ್ಯದ ಜೊತೆಗೆ ಉತ್ತಮವಾದ ಆಹಾರವನ್ನು ನಾವು ಸೇವನೆ ಮಾಡಿದರೆ ನಾವು ಸ್ವಾಸ್ಥ್ಯವಾಗಿ ಇರಲು ಸಹಾಯ ಆಗುತ್ತದೆ.
ಹೀಗಾಗಿ ದೇಹದ ಪ್ರತಿಯೊಂದು ಭಾಗವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೌದು ಕೇವಲ ಸ್ನಾನವನ್ನು ಮಾಡಿದರೆ ಮಾತ್ರ ನಾವು ಸ್ವಚ್ಚ ಆಗಿದ್ದೇವೆ ಅಂತ ಭಾವಿಸುವುದು ತಪ್ಪು. ಸಾಮಾನ್ಯವಾಗಿ ಸ್ನಾನವನ್ನು ಮಾಡುವಾಗ ಎಲ್ಲ ಭಾಗವನ್ನು ಸ್ವಚ್ಛಗೊಳಿಸಿ ಪ್ರಮುಖವಾದ ಭಾಗವಾದ ಹೊಕ್ಕಳನ್ನು ಮರೆತು ಬಿಡುತ್ತಾರೆ. ಹೌದು ನಿಮಗೆ ಗೊತ್ತೇ ಹೊಕ್ಕಳಿನಲ್ಲಿ ನಮ್ಮ ಎಲ್ಲ ಅಂಶಗಳು ಅಡಗಿರುತ್ತವೆ.
ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೂ ನೀವು ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಇದರಲ್ಲಿ ಮುಖ್ಯವಾಗಿ ಬೆವರು ಹಾಗೂ ಎಲ್ಲ ಕೊಲೆಗಳು ಅಲ್ಲಿ ಸ್ನಾನ ಮಾಡುವಾಗ ಅಡಗಿಕೊಂಡು ಕುಳಿತೀರುತ್ತದೆ. ಈ ಹೊಕ್ಕಳಿನ ಭಾಗವನ್ನು ಸರಿಯಾಗಿ ಶುದ್ಧವಾಗಿ ಕ್ಲೀನ್ ಆಗಿ ಇಟ್ಟುಕೊಳ್ಳದೆ ಇದ್ದಾಗ ಅವುಗಳಿಂದ ಬ್ಯಾಕ್ಟೀರಿಯಾ ನಮ್ಮ ದೇಹದಲ್ಲಿ ಬಂದು ಸೇರುತ್ತದೆ.
ಆದ್ದರಿಂದ ಹೊಕ್ಕಳಿನ ಸುರಕ್ಷಣೆ ಆರೈಕೆ ನಮ್ಮ ಕೈಯಲ್ಲಿದೆ. ಇನ್ನೂ ಇದನ್ನು ಹೇಗೆ ಸ್ವಚ್ಚ ಮಾಡಿಕೊಳ್ಳಬಹುದು ಅಂತ ನೀವು ಕೇಳಬಹುದು ಮಿತ್ರರೇ, ನಿಮ್ಮ ಹೊಕ್ಕಳಿನ ಭಾಗವನ್ನು ಸೋಪಿನಿಂದ ತೊಳೆದುಕೊಳ್ಳಬಹುದು ಅಥವಾ ಕಾಟನ್ ನಿಂದಾ ನಿಧಾನವಾಗಿ ಸ್ವಚ್ಛ ಮಾಡಿಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ಹೊಕ್ಕಳನ್ನು ಹಾಗೆಯೇ ಬಿಡಬಾರದು. ಕೆಲವೊಂದು ಬಾರಿ ಇದರ ಬಗ್ಗೆ ಅರಿವು ಇಲ್ಲದೆ ಇದ್ದವರು ಹೊಕ್ಕಳಿನ ಭಾಗವನ್ನು ಹಾಗೆ ಬಿಟ್ಟಿದ್ದಾರೆ ಅಲ್ಲಿ ಕಲ್ಮಶದ ಪದರುಗಳು ರೂಪುಗೊಳ್ಳುತ್ತವೆ ಆಗ ನೀವು ಶುದ್ಧವಾದ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು. ಮೊದಲಿಗೆ ಕೊಬ್ಬರಿಯನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಹೊಕ್ಕಳಿಗೆ ಹಾಕಿ ಅದನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಬ್ಯಾಕ್ಟೀರಿಯಾಗಳು ನಾಶ ಗೊಳ್ಳುತ್ತವೇ. ಇನ್ನೂ ಸ್ನಾನವಾದ ಮೇಲೆ ನಿಮ್ಮ ಹೊಕ್ಕಳನ್ನು ಸಂಪೂರ್ಣವಾಗಿ ಒರೆಸಿಕೊಳ್ಳುತ್ತಾ ಬನ್ನಿ ಇಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡಿದ ನೀರು ಉಳಿಯದಂತೆ ನೋಡಿಕೊಳ್ಳಿ ಹಾಗೆಯೇ ಹೊಕ್ಕಳನ್ನು ಒರೆಸಿದ ಮೇಲೆ ಅದನ್ನು ಚೆನ್ನಾಗಿ ಒಣಗಿಸಬೇಕು. ತೇವಾಂಶ ಇರುವ ಜಾಗದಲ್ಲಿ ಬ್ಯಾಕ್ಟ್ಟಿರಿಯಾಗಳು ಆದಷ್ಟು ತೀವ್ರವಾಗಿ ಬೆಳೆಯುತ್ತವೆ.