ಊಟವನ್ನು ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ. ತಪ್ಪು ಮಾಡಿದರೆ ನಿಮ್ಮ ಮನೆಯೂ ದಾರಿದ್ರ್ಯದಿಂದ ಸಿಲುಕಿ ನಷ್ಟವಾಗುತ್ತದೆ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವೆಲ್ಲರೂ ಊಟವಾದ ಮೇಲೆ ತಟ್ಟೆಯಲ್ಲಿ ಕೈ ತೊಳೆಯುತ್ತೇವೆ. ಆದರೆ ಹೀಗೆ ಮಾಡುವುದರಿಂದ ಏನಾಗುತ್ತದೆ ಅನ್ನುವುದರ ಬಗ್ಗೆ ನಿಮಗೆ ಗೊತ್ತೇ? ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಕೊಳ್ಳತ್ತಿದ್ದೇವೆ ಬನ್ನಿ. ನಮ್ಮ ಮನೆಯ ಸುಖ ಶಾಂತಿ ನೆಮ್ಮದಿ ವೃದ್ಧಿಸಲು ಹಾಗೂ ಸಕಾರಾತ್ಮಕ ಶಕ್ತಿ ಭಾವನೆ ಬೆಳೆಯಲು, ಈ ಉಪಾಯಗಳನ್ನು ತಿಳಿಸಿ ಕೊಡಲಾಗಿದೆ. ಪ್ರಾಚೀನ ಗ್ರಂಥಗಳಲ್ಲಿ ಯಾವ ರೀತಿ ಊಟವನ್ನು ಮಾಡಬೇಕು ಯಾವ ಪದ್ಧತಿಯಲ್ಲಿ ನಾವು ಊಟವನ್ನು ಸೇವನೆ ಮಾಡಿದರೆ ಒಳ್ಳೆಯದಾಗುತ್ತದೆ ಅಂತ ತಿಳಿಸಿ ಕೊಟ್ಟಿದ್ದಾರೆ ಮನೆಯ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯೂ ಬಹಳ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೌದು ಶೌಚಾಲಯದ ಬಳಿ ಅಥವಾ ಅಡುಗೆ ಮನೆಯ ಮೇಲೆ ಬಾತ್ರೂಂಗಳು ಕಟ್ಟಿಸಬಾರದು ಅಂತ ಹೇಳಲಾಗಿದೆ.
ಹಾಗೂ ಬಾತ್ರೂಂ ಮತ್ತು ಅಡುಗೆ ಮನೆಯ ಗೋಡೆ ಒಂದೇ ಆಗಿರಬಾರದು ಏಕೆಂದ್ರೆ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತದೆ.

 

ಆದ್ದರಿಂದ ಇವುಗಳು ಬೇರೆ ಬೇರೆಯಾಗಿದ್ದರೆ ಒಳ್ಳೆಯದು ಇನ್ನೂ ಎರಡನೆಯ ವಿಚಾರಕ್ಕೆ ಬಂದರೆ, ಊಟವನ್ನು ಮಾಡುವಾಗ ನೀವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖವನ್ನು ಮಾಡಿ ಊಟವನ್ನು ಮಾಡಬೇಕು. ಹಾಗೂ ಯಾರಿಗೆ ಇಬ್ಬರು ತಂದೆ ತಾಯಿ ಇಬ್ಬರೂ ಇರುವವರು ದಕ್ಷಿಣದ ಕಡೆಗೆ ಮುಖವನ್ನು ಮಾಡಿ ಎಂದಿಗೂ ಊಟವನ್ನು ಮಾಡಬಾರದು ಅಂತ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನೂ ಊಟವನ್ನು ಮಾಡಬೇಕಾದ್ರೆ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಹಾಗೂ ನಿಮ್ಮ ಕಾಲುಗಳು ಒದ್ದೆ ಇಟ್ಟುಕೊಂಡು ಊಟವನ್ನು ಮಾಡಬಾರದು. ಹಾಗೂ ಯಾವಾಗ್ಲೂ ನೆಲದ ಮೇಲೆ ಕುಳಿತುಕೊಂಡು ಊಟವನ್ನು ಮಾಡಬೇಕು ಇದರಿಂದ ನಿಮ್ಮ ಆರೋಗ್ಯವೂ ಮತ್ತಷ್ಟು ವೃದ್ಧಿ ಆಗುತ್ತದೆ. ಒಂದು ವೇಳೆ ನೀವು ಉದ್ದವಾಗಿ ಕಾಲುಗಳನ್ನು ಬಿಟ್ಟು ಕೈ ಕಾಲುಗಳನ್ನು ಆಡಿಸುತ್ತಾ ಅಗಲಿಸುತ್ತಾ ಊಟವನ್ನು ಮಾಡಿದರೆ ತಾಯಿ ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ.

 

ಯಾವಾಗ್ಲೂ ನಾವು ಪ್ರತಿ ಅನ್ನದ ಅಗುಳಿಗೆ ಮರ್ಯಾದೆ ಗೌರವವನ್ನು ಕೊಡಬೇಕು. ಏಕೆಂದ್ರೆ ಎಷ್ಟೋ ಜನರು ಹಸಿವಿನಿಂದ ನರಳಿ ಸಾಯುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಅನ್ನದ ಮೇಲೆ ಅವರವರ ಹೆಸರು ಬರೆದಿರುತ್ತದೆ ಅನ್ನಕ್ಕೆ ನಾವು ಅವಮಾನ ಮಾಡಬಾರದು. ಮತ್ತು ಊಟವನ್ನು ನಾವು ಎಂದಿಗೂ ಮಂಚದ ಮೇಲೆ ಕುಳಿತುಕೊಂಡು ಮಾಡಬಾರದು ಇಲ್ಲವಾದರೆ ಅನಾರೋಗ್ಯದ ಸಮಸ್ಯೆಗಳು ಕಾಡಲು ಶುರು ಆಗುತ್ತದೆ. ಇನ್ನೂ ಮನೆಯಲ್ಲಿ ಯಾವುದೇ ಕಾರಣಕ್ಕೂ ಉಪ್ಪು ಅಕ್ಕಿ ಅರಿಶಿನ ಖಾಲಿ ಆಗಬಾರದು ಅಂತ ಹೇಳುತ್ತಾರೆ ಹಿರಿಯರು.ಇವುಗಳು ಮನೆಯಲ್ಲಿ ಖಾಲಿ ಆದ್ರೆ ನಿಮ್ಮ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.
ಇನ್ನೂ ಮನೆಯ ಯಜಮಾನಿ ಅಡುಗೆ ಮನೆಗೆ ಹೋಗಬೇಕಾದರೆ ತಲೆ ಸ್ನಾನ ಮಾಡಿ ಹೋಗಬೇಕು ಜೊತೆಗೆ ಪಾತ್ರೆಗಳಿಗೆ ನಮಸ್ಕಾರ ಮಾಡಿ ಅಡುಗೆ ಮಾಡಬೇಕು. ಒಂದು ವೇಳೆ ಆಗದೇ ಇದ್ದರೆ ಕನಿಷ್ಠ ಕೈಕಾಲು ಮುಖವನ್ನು ತೊಳೆದು ಅಡುಗೆ ಮನೆಗೆ ಹೋಗಿ. ಇನ್ನೂ ಊಟವನ್ನು ನೀವು ಗಲೀಜು ಹಾಗೂ ಒಡೆದು ಹೋದ ತಟ್ಟೆಯಲ್ಲಿ ಮಾಡಬೇಡಿ. ಇಂತಹ ಅಡುಗೆ ವಸ್ತುಗಳು ಒಡೆದು ಹೋದ ತಟ್ಟೆಗಳು ಮನೆಯಲ್ಲಿ ಇದ್ದರೆ ಅವುಗಳನ್ನು ಮನೆಯಿಂದ ಆಚೆಗೆ ಹಾಕಬೇಕು. ಅವುಗಳನ್ನು ಬಳಸಬೇಡಿ. ಹಾಗೂ ಹೆಚ್ಚಾಗಿ ಹಿತ್ತಾಳೆ ಪಾತ್ರೆಗಳನ್ನು ಅಡುಗೆಗೆ ಹಾಗೂ ಊಟವನ್ನು ಮಾಡುವಾಗ ಬಳಕೆ ಮಾಡುವುದು ಸೂಕ್ತ. ಶುಭದಿನ.

Leave a Reply

Your email address will not be published. Required fields are marked *