ಕೇವಲ ಮನೆಯಲ್ಲಿ ಸೋಂಪು ಕಾಳು ಇದ್ದರೆ ಸಾಕು, ಅಜೀರ್ಣತೆ ಮಲಬದ್ಧತೆ, ಗ್ಯಾಸ್ಟ್ರಿಕ್ ಅಸಿಡಿಟಿ ಮೋಷನ್ ಎಲ್ಲವೂ ತಕ್ಷಣವೇ ಪರಿಹಾರ!!!

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಆರಾಮವಾಗಿ ಇದ್ದಾಗಲೇ ಕೆಲವೊಂದು ಬಾರಿ ನಾವು ಸುಮ್ಮನೆ ಆರೋಗ್ಯವಾಗಿ ಇದ್ದಾಗಲೇ ನಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಫುಡ್ ಪಾಯಿಸನ ಅಂತ ಹೇಳಬಹುದು ಇನ್ನಿತರ ಕಾರಣಗಳಿಂದ ಕೂಡ ಈ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅವುಗಳೆಂದರೆ ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದೇ ಇದ್ದಾಗ ಹೊಟ್ಟೆ ನೋವು ಬರುವುದು ಸಹಜ. ಕೆಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ಗಟ್ಟಿಯಾಗಿ ಹೊಟ್ಟೆ ನೋವು ಬರುತ್ತದೆ ಇನ್ನೂ ಕೆಲವರಿಗೆ ಮಲಬದ್ಧತೆ ಸಮಸ್ಯೆಯಿಂದ ಈ ಹೊಟ್ಟೆ ನೋವು ಅನ್ನುವುದು ಕಾಣಿಸಿಕೊಳ್ಳುತ್ತದೆ.
ಅಷ್ಟೇ ಅಲ್ಲದೇ ನೀವು ಮೋಷನ್ ಗೆ ಹೋದಾಗ ಅಲ್ಲಿ ನಿಮಗೆ ಮೋಷನ್ ಸರಿಯಾಗಿ ಆಗದೇ ಇದ್ದಾಗ ಕೂಡ ಹೊಟ್ಟೆ ನೋವು ಶುರು ಆಗುತ್ತದೆ. ಇಂಥಹ ಹೊಟ್ಟೆ ನೋವು ತಡೆಯಲು ಆಗುವುದಿಲ್ಲ ಬಹಳ ಕಷ್ಟವಾಗುತ್ತದೆ. ಕೆಲವು ಜನರು ಅಂತೂ ನೆಲದ ಮೇಲೆ ಉರುಳಾಡಲು ಶುರು ಮಾಡುತ್ತಾರೆ. ಅಷ್ಟೊಂದು ಹೊಟ್ಟೆಯಲ್ಲಿ ನೋವು ಆಗುತ್ತಿರುತ್ತದೆ. ಹಾಗಾದರೆ ಈ ರೀತಿ ತಕ್ಷಣ ಹೊಟ್ಟೆ ನೋವು ಬರುವುದಕ್ಕೆ ತಕ್ಷಣವೇ ಮನೆಯಲ್ಲಿ ನಾವು ಸುಲಭವಾದ ಮನೆಮದ್ದು ಮಾಡಿಕೊಂಡು ಆರಾಮವಾಗಿ ಕಡಿಮೆ ಮಾಡಿಕೊಳ್ಳಬಹುದು. ಹೌದು ನಾವು ತಿಳಿಸುವ ಈ ಮನೆಮದ್ದು ಬಹಳ ಪರಿಣಾಮಕಾರಿ ಆಗಿದೆ.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಈ ಮನೆಮದ್ದು ತಯಾರಿಸಲು ಯಾವೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಇದನ್ನು ಹೇಗೆ ತಯಾರಿಸಬೇಕು ಮತ್ತು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅಂತ ಒಂದು ಚಿಕ್ಕದಾದ ಪ್ರಯತ್ನವನ್ನು ಮಾಡುತ್ತೇವೆ ಬನ್ನಿ. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಬಿಸಿ ಮಾಡಿಕೊಳ್ಳಿ. ನೀರು ಚೆನ್ನಾಗಿ ಕುದೀಯಬೇಕು. ಕುದಿ ಬಂದ ನಂತರ ಅದನ್ನು ಒಂದು ಲೋಟದಲ್ಲಿ ಹಾಕಿಕೊಳ್ಳಿ. ಅದು ಬಿಸಿ ಇರುವಾಗಲೇ ನೀವು ಒಂದು ಲೋಟಕ್ಕೆ ಹಾಕಿಕೊಳ್ಳಿ. ಅದರಲ್ಲಿ ಒಂದು ಚಮಚದಷ್ಟು ಸೋಂಪು ಕಾಳುಗಳನ್ನು ಹಾಕಿ. ಸೋಂಪು ಕಾಳುಗಳ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ಊಟವಾದ ಮೇಲೆ ಅಜೀರ್ಣನತೆಯನ್ನು ಹೋಗಲಾಡಿಸಲು ತಿನ್ನುತ್ತಾರೆ. ಹಾಗೂ ಇದು ಜೀರ್ಣಕ್ರಿಯೆಯನ್ನು ಆದಷ್ಟು ಉತ್ತಮಗೊಳಿಸುತ್ತದೆ. ಮತ್ತು ರಕ್ತವನ್ನು ಶುದ್ಧೀಕರಿಸುವುದರಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ. ಮತ್ತು ಈ ಸೋಂಪು ಕಾಳುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವೂ ಉತ್ತಮವಾಗುತ್ತದೆ.

 

ನಿಮಗೆ ಈ ನೀರು ಬೇರೆ ವಿಧಾನದಲ್ಲಿ ಕೂಡ ತಯಾರಿಸಬಹುದು ಅದು ಹೇಗೆಂದರೆ ಕುದಿಯುವ ನೀರಿಗೆ ಒಂದು ಚಮಚ ಸೋಂಪು ಕಾಳುಗಳನ್ನು ಹಾಕಿ ಚೆನ್ನಾಗಿ ಅದರ ಜೀವ ಸತ್ವಗಳು ನೀರಿನಲ್ಲಿ ಸೇರುವ ಹಾಗೆ ಕುದಿಸಿ ಸೋಸಿಕೊಂಡು ಆರಿಸಿ ಕುಡಿಯಬೇಕು. ಇಲ್ಲವಾದರೆ ಒಂದು ಲೋಟ ಬಿಸಿ ನೀರಿಗೆ ಸೋಂಪು ಕಾಳನ್ನು ಹಾಕಿ ಒಂದು 10-15 ನಿಮಿಷಗಳ ಕಾಲ ಬಿಟ್ಟು ಅದರ ಜೀವಸತ್ವಗಳು ನೀರಿನಲ್ಲಿ ಹೊಂದಿಕೊಳ್ಳುವವರೆಗು ಒಂದು ಮುಚ್ಚಳ ಮುಚ್ಚಿ ಇಡಬೇಕು. ಇದು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಬಳಿಕ ಇದರಲ್ಲಿ ಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಬೇಕು. ಹೌದು ಇಲ್ಲಿ ನೀವು ನೆನಪಿಡಬೇಕಾದ ಅಂಶವೆಂದರೆ ಜೇನುತುಪ್ಪವನ್ನು ಎಂದಿಗೂ ಬಿಸಿ ನೀರಿನಲ್ಲಿ ಹಾಕಿ ಮಿಕ್ಸ್ ಮಾಡಬೇಡಿ. ಇಲ್ಲವಾದರೆ ಅದು ವಿಷವಾಗುತ್ತದೆ. ಆದ್ದರಿಂದ ನೀರು ಸಂಪೂರ್ಣವಾಗಿ ತಣ್ಣಗಾದ ಮೇಲೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು. ಇನ್ನೂ ಇದನ್ನು ಯಾವಾಗ ಕುಡಿಯಬೇಕೆಂದರೆ ನಿಮಗೆ ಯಾವಾಗ ಹೊಟ್ಟೆ ನೋವು ಗ್ಯಾಸ್ಟ್ರಿಕ್ ಅಸಿಡಿಟಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿರುತ್ತದೆ ಅಂಥಹ ಸಮಯದಲ್ಲಿ ಇದನ್ನು ಮಾಡಿ ಕುಡಿಯಿರಿ. ಇನ್ನೂ ಕೆಳಗಡೆ ಉಳಿದಿರುವ ಸೋಂಪು ಕಾಳನ್ನು ನೀವು ಅಗೀದು ಜಗಿದು ತಿನ್ನಬಹುದು. ಇದು ಒಂದು ಮೌಂತ ಪ್ರೇಶನರ್ ಆಗಿ ಕೆಲಸವನ್ನು ನಿರ್ವಹಿಸುತ್ತದೆ.
ಒಮ್ಮೆ ಟ್ರೈ ಮಾಡಿ.ಶುಭದಿನ.

Leave a Reply

Your email address will not be published. Required fields are marked *