ಸೈಂಧವ ಲವಣ ಉಪ್ಪು ನಿಮಗೆಷ್ಟು ಗೊತ್ತೇ? ಅದರ ಬಗ್ಗೆ ತಿಳಿದುಕೊಳ್ಳಿ ಹಾಗೂ ಬಳಕೆ ಮಾಡಿ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಉಪ್ಪು ಇಲ್ಲದೇ ಯಾವ ಅಡುಗೆಯೂ ರುಚಿಸುವುದಿಲ್ಲ ಅನ್ನುವ ಸತ್ಯ ಎಲ್ಲರಿಗೂ ತಿಳಿದೇ ಇದೆ ಮಿತ್ರರೇ ಅಲ್ವಾ. ಅಡುಗೆಯಲ್ಲಿ ಸ್ವಲ್ಪ ಉಪ್ಪು ಕಡಿಮೆಯಾದರೂ ಕೂಡ ಮುಖವನ್ನು ಸಿಂಡರಿಕೊಂಡು ಮೂಗು ಮುರಿಯುತ್ತೇವೆ. ಈ ಊಟ ಬೇಡವೆಂದು ಎದ್ದು ಹೋಗುತ್ತೇವೆ. ಅಷ್ಟೊಂದು ಈ ಉಪ್ಪು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ಬಳಕೆ ಮಾಡುವ ಉಪ್ಪುಗಳಲ್ಲಿ ಬಹಳಷ್ಟು ವಿಧಗಳಿವೆ. ಕೆಲವು ಉಪ್ಪು ಅಡುಗೆಗೆ ಅಂತ ಬಳಸಬಹುದು ಇನ್ನೂ ಕೆಲವು ಮನೆಮದ್ದುಗಳಲ್ಲಿ ಬಳಕೆ ಮಾಡಬಹುದು. ಹೌದು ಹಾಗೆಯೇ ಉಪ್ಪಿನಲ್ಲಿ ನಮ್ಮ ಆರೋಗ್ಯವೂ ಕೂಡ ಅಡಗಿದೆ.
ಅದರಲ್ಲಿ ಸೈಂಧವ ಲವಣ. ಸಾಮಾನ್ಯವಾಗಿ ಈ ಸೈಂಧವ ಲವಣ ನಮಗೆ ಹಿಮಾಲಯದಲ್ಲಿ ಅಥವಾ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಉಪ್ಪು ನಾವು ಉಪ್ಪು ಸರೋವರ ಸಮುದ್ರಗಳಿಂದ ಪಡೆಯಬಹುದು. ಏಕೆಂದರೆ ಸಾಗರ ಸಮುದ್ರ ನೀರು ಉಪ್ಪು ಆಗಿರುತ್ತದೆ. ಅಲ್ಲಿಂದ ನಾವು ಈ ಸೈಂಧವ ಲವಣ ಪಡೆಯಬಹುದು. ಈ ಸೈಂಧವ ಲವಣದಲ್ಲಿ ಭಾರೀ ಪ್ರಮಾಣದ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ಬಹಳ ಹೆಚ್ಚಾಗಿ ಆಯುರ್ವೇದ ಹಾಗೂ ಮನೆಮದ್ದುಗಳನ್ನು ತಯಾರಿಸುವಲ್ಲಿ ಉಪಯೋಗಿಸುತ್ತಾರೆ.

 

ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪು ಇಡಲು ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ ನಿಮಗೆ ಬಹಳ ನಿಶ್ಯಕ್ತಿ ಸುಸ್ತು ಆಯಾಸ ಆಗುತ್ತಿದ್ದರೆ ನಿಂಬೆ ಹಣ್ಣಿನ ರಸವನ್ನು ಒಂದು ಲೋಟ ನೀರಿಗೆ ಹಾಕಿ ಅದರಲ್ಲಿ ಸ್ವಲ್ಪ ಸೈಂಧವ ಲವಣ ಉಪ್ಪು ಹಾಕಿ ಕುಡಿದರೆ ನಿಶ್ಯಕ್ತಿ ಮಾಯವಾಗುತ್ತದೆ. ದೇಹದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. ಮತ್ತು ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಇನ್ನಿತರ ಪೋಷಕಾಂಶಗಳನ್ನು ಶಕ್ತಿಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ಈ ಜಂತು ಹುಳಗಳು ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕೂಡ ಕಂಡುಬರುತ್ತದೆ. ಹೀಗಾಗಿ ನೀವು ಔಷಧಗಳ ಮೊರೆ ಹೋಗದೇ ಈ ಸೈಂಧವ ಲವಣ ಬಳಕೆ ಮಾಡಿಕೊಂಡು ಈ ಜಂತು ಹುಳಗಳ ಸಮಸ್ಯೆಯಿಂದ ಪಾರಾಗಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಮತ್ತು ದೇಹದ ತೂಕವನ್ನು ಇಳಿಸಿಕೊಳ್ಳಲು ಕೂಡ ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ನೀವು ಅಲೋವೆರಾ ಜೆಲ್ ನಲ್ಲಿ ಸ್ವಲ್ಪ ಈ ಉಪ್ಪು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿದರೆ ಸಾಕು ನಿಮ್ಮ ಮುಖ ಕಾಂತಿಯುಕ್ತ ಆಗುತ್ತದೆ.

 

ಅಷ್ಟೇ ಅಲ್ಲದೇ ನೀವು ಸ್ನಾನ ಮಾಡುವ ನೀರಿಗೆ ಈ ಸೈಂಧವ ಲವಣ ಉಪ್ಪು ಹಾಕಿಕೊಂಡು ಸ್ನಾನ ಮಾಡಿದರೆ ನಿಮಗೆ ಚರ್ಮವ್ಯಾಧಿ ಸಮಸ್ಯೆಗಳು ಬರುವುದಿಲ್ಲ ಹಾಗೂ ನಿಮ್ಮ ಚರ್ಮದಲ್ಲಿ ತುರಿಕೆ ಕೆಂಪು ಬಣ್ಣದ ಗುಳ್ಳೆಗಳು ಕಪ್ಪು ಕಲೆಗಳು ಆಗುತ್ತಿದ್ದರೆ ಅವೆಲ್ಲವೂ ಮಾಯವಾಗುತ್ತದೆ. ಇನ್ನೂ ಹಲ್ಲುಗಳಿಗೆ ಈ ಉಪ್ಪು ರಾಮಬಾಣ ಅಂತ ಹೇಳಬಹುದು ಏಕೆಂದರೆ ಇದನ್ನು ನೀವು ನೆಲ್ಲಿಕಾಯಿ ರಸದೊಂದಿಗೆ ಸ್ವಲ್ಪ ಈ ಉಪ್ಪು ಹಾಕಿ ನಿಮ್ಮ ಹಲ್ಲುಗಳನ್ನು ಹಾಗೂ ಒಸಡುಗಳನ್ನು ಮಸಾಜ್ ಮಾಡಿದರೆ ನಿಮಗೆ ಹಲ್ಲು ನೋವು ಬರುವುದಿಲ್ಲ. ಒಸಡು ಊತ ಉರಿ ಹಾಗೂ ರಕ್ತಸ್ರಾವ ಎಲ್ಲವೂ ಕಡಿಮೆ ಆಗುತ್ತದೆ ಹಾಗೂ ಹಲ್ಲಿಗೆ ಸಂಭಂದ ಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಕೂಡ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಇನ್ನೂ ನಿಮಗೆ ಕಫ ಆದರೆ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಸೈಂಧವ ಲವಣ ಉಪ್ಪು ಹಾಕಿ ಕುಡಿದರೆ ವೋಮಿಟ್ ಆಗಿ ಕಫ ಎಲ್ಲವೂ ಹೊರಗೆ ಬರುತ್ತದೆ. ಹಾಗೂ ನೆಗಡಿ ಕೆಮ್ಮು ಕಡಿಮೆ ಮಾಡಿಕೊಳ್ಳಲು ಶುಂಠಿ ನೀರಿಗೆ ಸ್ವಲ್ಪ ಈ ಸೈಂಧವ ಲವಣ ಉಪ್ಪು ಹಾಕಿ ಕುಡಿದರೆ ಖಂಡಿತವಾಗಿ ಇವೆಲ್ಲ ಚಿಕ್ಕ ಪುಟ್ಟ ತೊಂದರೆಗಳು ನಿವಾರಣೆ ಆಗುತ್ತವೆ. ಆದರೆ ಇದು ಒಳ್ಳೆಯದೆಂದು ಅತಿಯಾಗಿ ಸೇವನೆ ಮಾಡಬಾರದು ಹೆಚ್ಚಾಗಿ ಮಧುಮೇಹಿಗಳು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಇದರಿಂದ ಆದಷ್ಟು ದೂರವಿರುವುದು ಒಳ್ಳೆಯದು.
ಶುಭದಿನ.

Leave a Reply

Your email address will not be published. Required fields are marked *