ಬಿಸಿ ನೀರಿಗಿಂತ ತಣ್ಣೀರು ಯಾಕೆ ತಲೆ ಸ್ನಾನಕ್ಕೆ ಬಳಕೆ ಮಾಡುತ್ತಾರೆ ಗೊತ್ತೇ???

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ನಾವು ಸ್ನಾನ ಮಾಡಬೇಕಾದರೆ, ತಣ್ಣೀರನ್ನು ಕಾಯಿಸಿ ಬಿಸಿ ಮಾಡಿ ಬಳಸುತ್ತೇವೆ. ತಂಪಾದ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಲು ಯಾರೂ ಇಷ್ಟ ಪಡುವುದಿಲ್ಲ.
ಬಿಸಿ ನೀರು ಮಾತ್ರ ಸ್ನಾನಕ್ಕೆ ಒಳ್ಳೆಯದು ಎಂದು ನಾವು ಪ್ರತಿದಿನವೂ ತಲೆ ಸ್ನಾನವನ್ನು ಮಾಡುತ್ತೇವೆ ಆದರೆ ನಿಮಗೆ ಗೊತ್ತೇ ಇದರಿಂದ ಎಷ್ಟೊಂದು ಅಡ್ಡ ಪರಿಣಾಮಗಳೂ ಬೀರುತ್ತದೆ ಎಂದು. ಹೌದು ಗೆಳೆಯರೇ ಈ ಒಂದು ಮಾತನ್ನು ನೀವು ಅರಿತುಕೊಳ್ಳಿ. ಬಿಸಿ ನೀರಿನಲ್ಲಿ ನಿತ್ಯವೂ ಸ್ನಾನ ಮಾಡುವುದರಿಂದ ತೊಂದರೆಗಳು ಆಗುತ್ತವೆ ಎಂದು ಆದಷ್ಟು ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ಯಾವಾಗಾಲದರೂ ಅಪ್ಪಿ ತಪ್ಪಿ ನೀವು ಕೆಲಸದಿಂದ ದಣಿದು ಬಂದಿದ್ದರೆ ಹಾಗೂ ಮೈಕೈ ನೋವು ಆಗುತ್ತಿದ್ದರೆ ಮಾತ್ರ ಬಿಸಿ ನೀರನ್ನು ಉಪಯೋಗಿಸಿದರೆ ಖಂಡಿತವಾಗಿ ಆರಾಮದಾಯಕ ಅನ್ನಿಸುತ್ತದೆ. ಹಾಗೂ ವಿಶ್ರಾಂತಿ ಸಿಕ್ಕಿದ ಹಾಗೆ ಭಾಸವಾಗುತ್ತದೆ.

 

ಹೌದು ವೈದ್ಯರು ಹೀಗೆ ಹೇಳುತ್ತಾರೆ ಯಾವುದೇ ಕಾರಣಕ್ಕೂ ನೀವು ತಲೆ ಸ್ನಾನ ಮಾಡಬೇಕಾದರೆ ಅತಿ ಬಿಸಿ ನೀರನ್ನು ಉಪಯೋಗಿಸಬೇಡಿ ಎಂದು. ಇದರಿಂದ ಕೂದಲಿನ ಆರೋಗ್ಯ ನಿಜಕ್ಕೂ ಹಾಳಾಗುವ 100% ಜಾಸ್ತಿ ಇರುತ್ತದೆ. ಬಿಸಿ ನೀರು ತಲೆಗೂದಲಿಗೆ ಒಳ್ಳೆಯದಲ್ಲ ಹಾಗೂ ಸೂಕ್ತವೂ ಅಲ್ಲ ಮಿತ್ರರೇ. ಏಕೆಂದರೆ ದೇಹದ ಎಲ್ಲಾ ಭಾಗಗಳಿಗೆ ಹಾಗೂ ಮಾಂಸ ಖಂಡಗಳಿಗೆ ಬಿಸಿ ನೀರು ಒಳ್ಳೆಯದಾದರೆ ನೆತ್ತಿಯ ಭಾಗಕ್ಕೆ ಉತ್ತಮವಲ್ಲ.
ನೆತ್ತಿಗೆ ಯಾವುದೇ ರೀತಿಯ ಆರಾಮ ವಿಶ್ರಾಂತಿ ಅನ್ನಿಸುವುದಿಲ್ಲ ಆದರೆ ದೇಹದ ಸ್ನಾಯುಗಳಿಗೆ ಮಾಂಸ ಖಂಡಗಳಿಗೆ ಆಹ್ಲಾದಕವೆನ್ನಿಸುತ್ತದೆ. ಚರ್ಮ ಬಹಳ ಸೂಕ್ಷ್ಮ ಕೆಲವರ ಚರ್ಮ ಮೃದುವಾಗಿದ್ದರೆ ಇನ್ನೂ ಕೆಲವರದು ಬಹಳ ಗಡುಸಾಗಿ ಗಟ್ಟಿಯಾಗಿ ಇರುತ್ತದೆ. ಹೀಗಾಗಿ ಅವರ ಚರ್ಮವೂ ಬೇಗನೆ ಸುಕ್ಕುಗಟ್ಟಿದ ಹಾಗೆ ಆಗುತ್ತದೆ ಹಾಗೂ ಚರ್ಮವೂ ಬೇಗನೆ ಬಿರುಕು ಬಿಡುತ್ತದೆ. ಚರ್ಮದ ಮೇಲ್ಭಾಗದಲ್ಲಿ ಕೆರಟಿನ್ ಎಂಬ ಅಂಶ ಇರುತ್ತದೆ ಇದರಿಂದ ಚರ್ಮಕ್ಕೆ ಕಾಂತಿ ಸಿಗುತ್ತದೆ. ಮುಖ್ಯವಾಗಿ ಏಕೆ ಈ ವಿಷಯವನ್ನು ಹೇಳಲಾಗುತ್ತಿದೆ ಅಂದರೆ ಬಿಸಿ ನೀರು ತಲೆ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಬಿಸಿ ನೀರು ನೆತ್ತಿಯ ಭಾಗಕ್ಕೆ ತಲುಪಿ ರಂಧ್ರಗಳು ತೆರೆದುಕೊಂಡು ಕೂದಲು ಉದುರುವ ಸಮಸ್ಯೆ ಶುರು ಆಗುತ್ತದೆ.

 

ಚರ್ಮಕ್ಕೆ ಕೂಡ ತೊಂದರೆ ಆಗುತ್ತದೆ ತುಂಬಾ ಬೇಗನೆ ಚರ್ಮ ಸುಕ್ಕುಕಟ್ಟಿಕೊಳ್ಳುತ್ತದೆ ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ನೆತ್ತಿಯ ಭಾಗದಲ್ಲಿ ಸೂಕ್ಷ್ಮವಾದ ರಂಧ್ರಗಳು ತೆರೆದುಕೊಂಡು ನೆತ್ತಿಯ ಭಾಗದಲ್ಲಿ ಎಣ್ಣೆ ಅಂಶವನ್ನು ಬಿಡುಗಡೆ ಮಾಡುತ್ತವೆ. ಅಂತಹ ಸಮಯದಲ್ಲಿ ನೀವು ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಎಣ್ಣೆಯ ಅಂಶ ಹೋಗುತ್ತದೆ ಆದರೆ ಚರ್ಮ ಒಣಗುತ್ತದೆ. ಚರ್ಮ ಒಣಗಿದರೆ ತಲೆ ಹೊಟ್ಟು ಆಗಲು ಶುರು ಆಗುತ್ತದೆ. ಇಂತಹ ಅನೇಕ ಬಗೆಯ ಚರ್ಮದ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ ಅದಕ್ಕಾಗಿ ಆದಷ್ಟು ನೀವು ತಣ್ಣೀರು ಬಳಕೆ ಮಾಡಲು ಕಷ್ಟವಾದರೆ ಕನಿಷ್ಠ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಿ. ಇನ್ನೂ ಚರ್ಮದಲ್ಲಿ ಚಿಕ್ಕ ಚಿಕ್ಕ ಕೂದಲು ಇದ್ದು ಅಲ್ಲಿ ಕಿರು ಚೀಲಗಳು ಇರುತ್ತವೆ. ಅವುಗಳನ್ನು ಓಪನ್ ಪೋರ್ಸ ಅಂತ ಕರೆಯುತ್ತಾರೆ. ಅವುಗಳ ಮೇಲೆ ಬಿಸಿ ನೀರು ತಾಗಿದಾಗ  ಅದು ತೆರೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಕೊಳಕು ಹೋಗಿ ಅಲ್ಲಿ ತುಂಬಿಕೊಳ್ಳುತ್ತದೆ ಅಥವಾ ಹೊರಗಡೆ ಹೋದಾಗ ದೂಳು ತುಂಬಿಕೊಳ್ಳುತ್ತದೆ ಇದರಿಂದ ಚರ್ಮದಲ್ಲಿ ಮೊಡವೆಗಳು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆದಷ್ಟು ನೀವು ಬಿಸಿ ನೀರನ್ನು ಕಡಿಮೆ ಉಪಯೋಗಿಸಿ ಹಾಗೂ ತಂಪಾದ ನೀರನ್ನು ಬಳಕೆ ಮಾಡಿ. ಇದರಿಂದ ಆರೋಗ್ಯವಾಗಿ ಇರುವುದಲ್ಲದೆ ದೇಹಕ್ಕೆ ಮಾಂಸ ಖಂಡಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಹಾಗೂ ಕೂದಲು ಚೆನ್ನಾಗಿ ಬೆಳೆಯುತ್ತವೆ. ಕೂದಲು ಉದುರುವುದಿಲ್ಲ. ಅದಕ್ಕಾಗಿ ಆದಷ್ಟು ತಣ್ಣೀರನ್ನು ಬಳಸಿ.ಶುಭದಿನ.

Leave a Reply

Your email address will not be published. Required fields are marked *