ಮಹಿಳೆಯರೇ ಇಂತಹ ಕುಂಕುಮವನ್ನು ಹಚ್ಚಿ ಕೊಳ್ಳಬೇಡಿ. ಚರ್ಮದ ಸಮಸ್ಯೆಗಳು ಕಾಡುವುದು ತಪ್ಪುವುದಿಲ್ಲ. ಶುದ್ಧವಾದ ಕುಂಕುಮ ಹಾಗೂ ಅಶುದ್ಧವಾದ ಕುಂಕುಮವನ್ನು ಹೀಗೆ ಪತ್ತೆ ಹಚ್ಚಿ

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಬಂಧುಗಳೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಾಗೂ ಧರ್ಮದಲ್ಲಿ ಪ್ರತಿ ಕಾರ್ಯಗಳಲ್ಲಿ ಸಭೆ ಸಮಾರಂಭ ಮದುವೆ ಮುಂಜಿಗಳಲ್ಲಿ ಕುಂಕುಮವನ್ನು ಬಳಕೆ ಮಾಡುತ್ತಾರೆ. ಕುಂಕುಮ ಇಲ್ಲದೆ ಯಾವುದೇ ಕಾರ್ಯಗಳು ಪೂರ್ಣಗೊಳ್ಳುತ್ತದೆ ಅನ್ನುವ ಮಾತು ಸುಳ್ಳು ಗೆಳೆಯರೇ. ಅಷ್ಟೊಂದು ಪವಿತ್ರತೆಯನ್ನು ಹೊಂದಿದೆ. ಈ ಕೆಂಪು ಕುಂಕುಮ. ನಿಮಗೆ ಗೊತ್ತೇ ಈ ಕುಂಕುಮವನ್ನು ಯಾವ ರೀತಿಯಾಗಿ ತಯಾರಿಸುತ್ತಾರೆ ಎಂದು ಹೌದು ಇದನ್ನು ಅರಿಶಿಣದ ಕೊಂಬುಗಳನ್ನು ಚೆನ್ನಾಗಿ ಕುಟ್ಟಿ ಅದರಲ್ಲಿ ಸುಣ್ಣವನ್ನು ಹಾಕಿದರೇ ಹಳದಿ ಬಣ್ಣದ ಬಣ್ಣದ ಪುಡಿ ಕೆಂಪು ಬಣ್ಣ ತಿರುಗಿ ಕೆಂಪು ಕುಂಕುಮ ಆಗುತ್ತದೆ.
ಸಾಮಾನ್ಯವಾಗಿ ಮದುವೆ ಆದ ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ಸಿಂಧೂರವನ್ನು ಅಥವಾ ಕುಂಕುಮವನ್ನು ಖರೀದಿ ಮಾಡಿಕೊಂಡು ಹಣೆಗೆ ಹಚ್ಚಿಕೊಳ್ಳುತ್ತಾರೆ. ಆದರೆ ಇವುಗಳನ್ನು ತಯಾರಿಸುವುದು ರಾಸಾಯನಿಕ ಬಳಕೆ ಇಂದ ಮಿತ್ರರೇ. ಶುದ್ಧವಾದ ಕುಂಕುಮ ಮಾರುಕಟ್ಟೆಯಲ್ಲಿ ದೊರೆಯುವುದು ಬೆರಳಣಿಕೆಯಷ್ಟು.

 

ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ಹಾನಿ ಮಾಡುವಷ್ಟು ಸೀಸವು ಈ ಕುಂಕುಮದಲ್ಲಿ ಅಡಗಿದೆ. ಅಷ್ಟೇ ಅಲ್ಲದೇ ಇಂತಹ ಅಧಿಕವಾದ ಸೀಸಯುಕ್ತ ಕುಂಕುಮ ಹಚ್ಚುವುದರಿಂದ ಚರ್ಮದ ಬಣ್ಣವು ಬದಲಾಗುತ್ತದೆ.
ಮತ್ತು ಈ ರೀತಿ ರಾಸಾಯನಿಕದಿಂದ ಕೂಡಿದ ಕುಂಕುಮ ಎಷ್ಟು ತೊಳೆದರೂ ಉಜ್ಜಿದರೂ ಕೂಡ ಹೋಗುವುದಿಲ್ಲ. ಇಂತಹ ಸೀಸ ಹೊಂದಿರುವ ಕುಂಕುಮ ಹಣೆಗೆ ಹಚ್ಚುವುದರಿಂದ ಸೀಸವೂ ನಿಧಾನವಾಗಿ ರಕ್ತದಲ್ಲಿ ಸೇರುತ್ತದೆ. ಹಾಗೂ ವಿಶೇಷವಾಗಿ ಮಕ್ಕಳ ಜ್ಞಾಪಕ ಶಕ್ತಿ ಬುದ್ದಿ ಶಕ್ತಿ ಕ್ರಮೇಣ ಕಡಿಮೆ ಮಾಡುತ್ತದೆ ಹಾಗೂ ಅದರ ಕಾರ್ಯ ವೈಖರಿ ಮತ್ತು ಕ್ಷಮತೆಯನ್ನು ಕೂಡ ಕುಗ್ಗಿಸುತ್ತದೆ. ಮತ್ತು ಅವರ ಬೆಳವಣಿಗೆಯಲ್ಲಿ ಕೂಡ ಕುಂಠೀತವಾಗುತ್ತದೆ ಅಂತ ಕೆಲವು ಸಂಶೋಧನೆಗಳು ತಿಳಿಸಿವೆ. ಇಂತಹ ಕುಂಕುಮವನ್ನು ಹಚ್ಚಿಕೊಳ್ಳುವುದನ್ನು ಆದಷ್ಟು ಬಿಟ್ಟು ಬಿಡಿ. ನೀವು ಕುಂಕುಮವನ್ನು ತೆಗೆದುಕೊಳ್ಳುವ ಅಂಗಡಿಯಲ್ಲಿ ಶುದ್ದವಾದ ಪರಿಶುದ್ಧವಾದ ಕುಂಕುಮ ಇರುತ್ತದೆ ಅದು ಸ್ವಲ್ಪ ದುಬಾರಿ ಆದರೂ ಕೂಡ ನೀವು ಅದನ್ನು ಕೇಳಿ ಖರೀದಿಸಿ.

 

ಶುದ್ಧವಾದ ಕುಂಕುಮವನ್ನು ಅರಿಶಿನ ಕೊಂಬಗಳನ್ನೂ ಬಳಕೆ ಮಾಡಿಕೊಂಡು ಹಾಗೂ ಸುಣ್ಣವನ್ನು ಮತ್ತು ಇತರೆ ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ಶುದ್ಧವಾಗಿ ತಯಾರಿಸುತ್ತಾರೆ. ಹೌದು ಈ ರೀತಿ ಶುದ್ಧವಾಗಿ ತಯಾರಿಸಿದ ಕುಂಕುಮವನ್ನು ನೀವು ಉಪಯೋಗಿಸುವುದರಿಂದ ಮಾನಸಿಕ ಒತ್ತಡ ಖಿನ್ನತೆಯಿಂದ ಸಡಿಲಗೋಳಿಸುತ್ತದೆ ಅಲ್ಲದೆ ಮೆದುಳನ್ನು ಸದಾ ಕಾಲ ಸಕ್ರೀಯವಾಗಿ ಆಕ್ಟಿವ್ ಆಗಿ ಇರುವಂತೆ ನೆರವಾಗುತ್ತದೆ. ಆದ್ದರಿಂದ ಹಣೆಗೆ ಶುದ್ಧವಾದ ಕುಂಕುಮವನ್ನು ಬಳಕೆ ಮಾಡಿ. ಶುದ್ಧವಾದ ಕುಂಕುಮ ಮತ್ತು ಕಲಬೆರಕೆ ಕುಂಕುಮ ಹೇಗೆ ಇರುತ್ತದೆ ಅಂದರೆ ರಾಸಾಯನಿಕದಿಂದ ಕೂಡಿದ ಕುಂಕುಮ ಎಷ್ಟು ಉಜ್ಜಿದರೂ ಹೋಗುವುದಿಲ್ಲ ಹಾಗೂ ಅದರ ಕಲೆ ಹಣೆಯ ಮೇಲೆ ಹಾಗೆ ಉಳಿಯುತ್ತದೆ. ಮತ್ತೆ ಅದರ ಬಣ್ಣವು ಬಿಳಿ ಬಣ್ಣದಲ್ಲಿ ಸ್ವಲ್ಪ ದಿನವಾದ ಮೇಲೆ ಕಾಣ ತೊಡಗುತ್ತದೆ. ಅದೇ ಶುದ್ಧವಾದ ಕುಂಕುಮವನ್ನು ಗಮನಿಸಿದಾಗ ನೋಡಲು ಕೆಂಪು ಕೆಂಪಾಗಿ ಕಾಣುತ್ತದೆ. ಹಾಗೂ ಉಜ್ಜಿದರೆ ತಕ್ಷಣವೇ ಹೋಗುತ್ತವೆ ಯಾವುದೇ ಕಲೆಗಳು ಉಳಿಯುವುದಿಲ್ಲ ಚರ್ಮಕ್ಕೆ ಹಾನಿ ಆಗುವುದಿಲ್ಲ. ಹಾಗೂ ಇದರ ಬಣ್ಣ ಯಾವಾಗ್ಲೂ ಹಾಗೆ ಇರುತ್ತದೆ ಎಷ್ಟು ದಿನಗಳಾದರೂ ಕೂಡ ಬಣ್ಣ ಮಾಸಿ ಹೋಗುವುದಿಲ್ಲ.
ಶುಭದಿನ.

Leave a Reply

Your email address will not be published. Required fields are marked *