ಕಪ್ಪು ಒಣದ್ರಾಕ್ಷಿ ಮತ್ತು ಅಂಜೂರವನ್ನು ಹೀಗೆ ಮಾಡಿ ಕುಡಿದು ನೋಡಿ. ನಿಮ್ಮ ಮೂಳೆಗಳು ವಜ್ರದಂತೆ ಗಟ್ಟಿಯಾಗುತ್ತವೆ ಹಾಗೂ ಶಕ್ತಿ ದುಪ್ಪಟ್ಟು ಆಗುತ್ತದೆ.

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಆಯಾಸ ಸುಸ್ತು ಮಾನಸಿಕ ಒತ್ತಡ ದೈಹಿಕ ನಿಶ್ಯಕ್ತಿ ಎಲ್ಲವನ್ನು ಹೋಗಲಾಡಿಸಲು ಒಂದು ಸೂಪರ್ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಕೆಲವರಿಗೆ ಜೀರ್ಣಶಕ್ತಿ ಕಡಿಮೆ ಆದಾಗ ಅವರು ಏನೇ ತಿಂದರೂ ಕೂಡ ಅವರಿಗೆ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ದೇಹಕ್ಕೆ ಶಕ್ತಿ ನಾವು ಸರಿಯಾಗಿ ಆಹಾರವನ್ನು ಸೇವನೆ ಮಾಡಿದಾಗಲೇ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ. ತಿಂದ ಆಹಾರವೂ ಸರಿಯಾಗಿ ಜೀರ್ಣವಾಗದೇ ಇದ್ದಾಗ ನಮ್ಮ ದೇಹಕ್ಕೆ ಅಗತ್ಯವಾದ ಬೇಕಾದ ಶಕ್ತಿ ಮತ್ತು ಪೋಷಕಾಂಶಗಳು ದೊರೆಯುವುದಿಲ್ಲ. ಹೀಗಾಗಿ ದೇಹವು ಶಕ್ತಿಯನ್ನು ಕಳೆದುಕೊಂಡು ಶಕ್ತಿಹೀನವಾಗಿ ಬಿಡುತ್ತದೆ. ಹೀಗಾಗಿ ಏನೇ ಕೆಲಸವನ್ನು ಮಾಡಿದರೂ ಕೂಡ ಆಯಾಸ ಸುಸ್ತು ಆಗುವುದು ಹಾಗೂ ಸ್ವಲ್ಪ ನಡೆದಾಡಿದ್ರು ಓಡಾಡಿದರೂ ಕೂಡ ದೇಹದಲ್ಲಿ ದಣಿವು ಆಗುವುದು ಹೀಗೆ ಆಗಿ ಬಿಡುತ್ತದೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳನ್ನು ನಾವು ವಯಸ್ಸದವರಲ್ಲಿ ಕಾಣುವುದು ಸಹಜವಾದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಿಗೂ ಮುನ್ನ ಇಂತಹ ಸಮಸ್ಯೆಗಳು ಶುರು ಆಗುತ್ತಿವೆ ನಮ್ಮ ಯುವ ಜನತೆಯಲ್ಲಿ. ವಯಸ್ಕರಲ್ಲಿ ರಕ್ತದ ಕೊರತೆ ವಿಟಮಿನ್ ಗಳ ಕೊರತೆ ಹಾಗೂ ಮಾತ್ರೆಗಳ ಅಭಾವದಿಂದ ಇಂತಹ ಸಮಸ್ಯೆಗಳು ಅಂದರೆ ದೇಹದಲ್ಲಿ ಆಯಾಸ ದಣಿವು ನಿಶ್ಯಕ್ತಿ ಶಕ್ತಿ ಕುಂದುವಿಕೆ ಆಗುತ್ತದೆ.

 

ಹಾಗೂ ಕೆಲವು ಜನರು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಅಂಥವರಿಗೆ ದೇಹದಲ್ಲಿ ಬಹಳ ರಕ್ತ ಕಡಿಮೆ ಆಗಿ ಅವರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ದೇಹದಲ್ಲಿ ನಿರಾಸಕ್ತಿ ಆಯಾಸ ದಣಿವು ಶಕ್ತಿಹೀನತೆ ಉಂಟಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಎಲ್ಲ ಸಮಸ್ಯೆಗಳಿಗೆ ಒಂದು ಅದ್ಭುತವಾದ ಪರಿಹಾರವನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ಈ ಮನೆಮದ್ದು ನೀವು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಿಕೊಳ್ಳಿ. ಹಾಗೂ ಇದನ್ನು ನೀವು ಮೂರು ದಿನಗಳ ತನಕ ಸತತವಾಗಿ ವಾರದಲ್ಲಿ ಮಾಡಿದರೆ ಸಾಕು ನಿಮ್ಮ ದೇಹಕ್ಕೆ ಬೇಕಾದಂತಹ ವಿಟಮಿನ್ಸ್ ಖನಿಜಗಳು ದೊರೆಯುತ್ತವೆ ವಜ್ರದಂತಹ ಶಕ್ತಿ ಹೆಚ್ಚುತ್ತದೆ ಹಾಗೂ ದೇಹವು ಬಲಶಾಲಿ ಆಗುತ್ತದೆ. ಶಕ್ತಿಯುತ ಆಗುತ್ತದೆ. ಹಾಗದರೆ ಈ ಮನೆಮದ್ದು ಯಾವುದು ಅಂತ ಹೇಳುವುದಾದರೆ ಈ ಮನೆಮದ್ದು ತಯಾರಿಸಲು ಕೇವಲ ಮೂರೇ ಮೂರು ವಸ್ತುಗಳು ಸಾಕು ಮಿತ್ರರೇ. ಅವುಗಳೆಂದರೆ ಕಪ್ಪು ಒಣದ್ರಾಕ್ಷಿ ಅಂಜೂರ ಮತ್ತು ಹಾಲು. ಕಪ್ಪು ಒಣದ್ರಾಕ್ಷಿ ಬಗ್ಗೆ ಹೇಳುವುದಾದರೆ ಏನು ಮಿತ್ರರೇ ಎಲ್ಲರಿಗೂ ಗೊತ್ತಿರುವ ಹಾಗೆ ಇದರಲ್ಲಿ ಅಧಿಕವಾದ ಮ್ಯಾಗ್ನಿಷಿಯಂ ಕಬ್ಬಿಣ ಪೊಟ್ಯಾಶಿಯಂ ಕ್ಯಾಲ್ಷಿಯಂ ಅಂಶಗಳನ್ನು ಒಳಗೊಂಡಿದೆ.

 

ಹೀಗಾಗಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ಇದರಲ್ಲಿ ಬೀಟಾ ಕೆರೋಟಿನ್ ಅಂಶ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.ಮುಖ್ಯವಾಗಿ ರಕ್ತದ ಮಟ್ಟವನ್ನು ಹೆಚ್ಚಿಸುವಲ್ಲಿ ಒಣದ್ರಾಕ್ಷಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಅನೀಮಿಯಾ ಕಾಯಿಲೆಗೆ ಇದು ರಾಮಬಾಣ.  ಇನ್ನೂ ಎರಡನೆಯದು ಅಂಜೂರ, ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಲು ಇಡೀ ಅದರಲ್ಲಿ ಇವೆರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಬಳಿಕ ಅದು ತಣ್ಣಗಾಗಲು ಬಿಡಿ ತಣ್ಣಗಾದ ಮೇಲೆ ಹಾಲನ್ನು ಕುಡಿದು ಒಣದ್ರಾಕ್ಷಿ ಮತ್ತು ಅಂಜೂರವನ್ನು ಜಗಿದು ತಿನ್ನಿ. ಹೀಗೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆಯಾಸ ಸುಸ್ತು ನಿಶ್ಯಕ್ತಿ ಶಕ್ತಿ ಕುಂದುವಿಕೆ ಎಲ್ಲವೂ ದೂರವಾಗಿ ನೀವು ಶಕ್ತಿವಂತರು ಆಗುತ್ತೀರಿ. ಒಮ್ಮೆ ಟ್ರೈ ಮಾಡಿ ಶುಭದಿನ.

Leave a Reply

Your email address will not be published. Required fields are marked *