ಎಷ್ಟೇ ಭಯಂಕರವಾದ ಮೂಲವ್ಯಾಧಿ ಅಥವಾ ಪೈಲ್ಸ್ ಮಂಗ ಮಾಯ ಆಗಬೇಕೆಂದರೆ ಹೀಗೆ ಮಾಡಿ.

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ ಮನುಷ್ಯ ಅಂದ ಮೇಲೆ ಆತನಿಗೆ ಅನಾರೋಗ್ಯದ ಸಮಸ್ಯೆಗಳು ಕಾಡುವುದು ಸಹಜವಾದ ಮಾತು ಅದರಲ್ಲಿ ಈ ಮೂಲವ್ಯಾಧಿ ಅಥವಾ ಪೈಲ್ಸ್ ಕಾಯಿಲೆ. ಹೌದು ಇದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಡುವ ಅನಾರೋಗ್ಯದ ಕಾಯಿಲೆಗಳಲ್ಲಿ ಒಂದಾಗಿದೆ. ಇದಕ್ಕೆ ಅನೇಕ ಬಗೆಯ ಕಾರಣಗಳು ಇರಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಪೈಲ್ಸ್ ಗೆ ಏನೆಲ್ಲ ಕಾರಣಗಳು ಹಾಗೂ ಇದಕ್ಕೆ ಅದ್ಭುತವಾದ ಒಂದು ಸೂಪರ್ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಮೂಲವ್ಯಾಧಿ ಸಮಸ್ಯೆ ಇರುವವರು ಪಡೋ ಪಾಡು ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಮೂಲವ್ಯಾಧಿ ಅಥವಾ ಪೈಲ್ಸ್ ಕಾಯಿಲೆಯಾದರೆ ಆ ನೋವು ಸಹಿಸಲು ಆಗುವುದಿಲ್ಲ. ಹಾಗಾದರೆ ಈ ಪೈಲ್ಸ್ ಕಾಯಿಲೆಗೆ ಮುಖ್ಯ ಕಾರಣವೆಂದರೆ ಫುಡ್ ಹ್ಯಾಬಿಟ್ ಮತ್ತು ಮಲಬದ್ಧತೆ ಸಮಸ್ಯೆ ಅಂತ ಹೇಳಬಹುದು. ಹೌದು ಯಾರಿಗೆ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆಯೋ ಅಥವಾ ಮೋಷನ್ ಸರಿಯಾಗಿ ಆಗುವುದಿಲ್ಲವೋ ಅದನ್ನು ಅವರು ನಿರ್ಲಕ್ಷ್ಯ ಮಾಡಿದರೆ ಖಂಡಿತವಾಗಿ ಭವಿಷ್ಯದಲ್ಲಿ ಒಂದು ಇದು ಪೈಲ್ಸ್ ಕಾಯಿಲೆ ಆಗಿ ಪರಿವರ್ತನೆ ಆಗುತ್ತದೆ. ಇನ್ನೂ

 

ಮತ್ತೊಂದು ಕಾರಣದ ಬಗ್ಗೆ ಹೇಳುವುದಾದರೆ, ಯಾರಿಗೆ ಅಜೀರ್ಣತೆ ಸಮಸ್ಯೆ ಇರುತ್ತದೆ ತಿಂದ ಆಹಾರವೂ ಸರಿಯಾಗಿ ಜೀರ್ಣವಾಗದೇ ಪದೇ ಪದೇ ಮೋಷನ್ ಆಗಲು ಶುರು ಆದರೆ ಖಂಡಿತವಾಗಿ ಅಂಥಹ ಸಮಯದಲ್ಲಿ ಕೂಡ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇನ್ನೂ ಅತಿಯಾದ ಮಸಾಲೆ ಆಹಾರಗಳನ್ನು ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದರಿಂದ ಕೂಡ ಪೈಲ್ಸ್ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಇನ್ನೂ ಮಿತ್ರರೇ ಈ ಪೈಲ್ಸ್ ಹೆಚ್ಚಾಗಿ ಯಾಕೆ ಯುವಕರಲ್ಲಿ ಕಾಡುತ್ತಿದೆ ಅಂದರೆ ಈಗಿನ ಆಧುನಿಕ ಕಾಲದಲ್ಲಿ ಎಲ್ಲರೂ ಹೆಚ್ಚಾಗಿ ಕೆಲಸದಲ್ಲಿ ಮಗ್ನರಾಗಿರುತ್ತಾರೆ ಅದರಲ್ಲೂ ಅವರು ಯಾವಾಗ್ಲೂ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸವನ್ನು ಮಾಡುವುದರಿಂದ ಕೂಡ ಈ ಕಾಯಿಲೆ ಬರುತ್ತದೆ. ಹಾಗೂ ಹೆಚ್ಚು ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವ ಜನರಲ್ಲಿ ಈ ಮೂಲವ್ಯಾಧಿ ಸಮಸ್ಯೆಗಳನ್ನು ಕಾಣಬಹುದು. ಇನ್ನೂ ಪೈಲ್ಸ್ ನ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ, ಮಲ ವಿಸರ್ಜನೆ ಮಾಡುವಾಗ ಬಹಳ ನೋವು ಆಗುವುದು ಹಾಗೂ ಮಲ ವಿಸರ್ಜನೆ ಗಟ್ಟಿ ಆಗುವುದಿಲ್ಲ.

 

ಮೋಷನ ಆಗುವಾಗ ರಕ್ತ ಬರುವುದು. ಹಾಗೂ ಅದೇ ಜಾಗದಲ್ಲಿ ಕೆರೆತ ಶುರು ಆಗುವುದು ಹಾಗೂ ಊದಿಕೊಳ್ಳುವುದು ಆಗುತ್ತದೆ. ಹಾಗಾದರೆ ಈ ಪೈಲ್ಸ್ ಸಮಸ್ಯೆಯನ್ನು ದೂರ ಮಾಡಲು ಒಂದು ಸೂಪರ್ ಮನೆಮದ್ದು ತಿಳಿಸುತ್ತೇವೆ ಅಂತ ಹೇಳಿದ್ದೇವೆ ಅಲ್ವಾ ಮಿತ್ರರೇ ಹಾಗಾದರೆ ಬನ್ನಿ ಅದನ್ನು ತಯಾರಿಸುವುದು ಹೇಗೆ ಅಂತ ತಿಳಿಯೋಣ. ಮೊದಲಿಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಚಿಟಿಕೆ ಇಂಗು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದ ನಂತರ ಇದನ್ನು ನಿಮ್ಮ ಪೈಲ್ಸ್ ಸಮಸ್ಯೆ ನಿವಾರಣೆ ಆಗುವವರೆಗೂ ಕುಡಿಯುತ್ತಾ ಬನ್ನಿ. ಜೊತೆಗೆ ನಿಮ್ಮ ಜೀರ್ಣ ಶಕ್ತಿಯನ್ನೂ ಕೂಡ ಮನೆಮದ್ದು ಹೆಚ್ಚಿಸುತ್ತದೆ. ಹಾಗೂ ಪೈಲ್ಸ್ ಸಮಸ್ಯೆಯಿಂದ ಮುಕ್ತಿಯನ್ನು ಒದಗಿಸುತ್ತದೆ. ಕೇವಲ ಎರಡೇ ಎರಡು ಸಾಮಗ್ರಿಗಳಿಂದ ಮಾಡುವ ಮನೆಮದ್ದು ಇದಾಗಿದೆ. ಒಮ್ಮೆ ಟ್ರೈ ಮಾಡಿ ಶುಭದಿನ.

Leave a Reply

Your email address will not be published. Required fields are marked *