ಯಾವುದೇ ಖರ್ಚು ವೆಚ್ಚ ಇಲ್ಲದೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಅನ್ನುತ್ತೀರಾ. ಇಲ್ಲಿದೆ ಮಾಹಿತಿ. ನೋಡಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ತೂಕವನ್ನು ಹೆಚ್ಚಿಸಿಕೊಳ್ಳುವುದು ಎಷ್ಟು ಕಷ್ಟಕರವೋ ಅಷ್ಟೇ ತೂಕವನ್ನು ಇಳಿಸಿಕೊಳ್ಳುವುದು. ಹಲವರು ಜನರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟೋ ಹರಸಾಹಸ ಮಾಡುತ್ತಾರೆ. ಊಟವನ್ನು ಬಿಡುತ್ತಾರೆ, ಡಯೆಟ್ ಮಾಡುತ್ತಾರೆ ವ್ಯಾಯಾಮ ಜಿಮ್ ಮಾಡುತ್ತಾರೆ. ಎಲ್ಲರಿಗೂ ಸಮಸ್ಯೆಯೇ ಮಿತ್ರರೇ, ತೂಕ ಅಧಿಕವಾಗಿದ್ದರೆ ಕಡಿಮೆ ಮಾಡಿಕೊಳ್ಳುವುದು ಹೇಗೆ ಅಂತ ಚಿಂತೆ ಒಬ್ಬರಿಗಾದರೆ ಇನ್ನೂ ಕೆಲವರಿಗೆ ತೂಕ ಹೆಚ್ಚಿಸುವುದು ಹೇಗೆ ಅಂತ ಚಿಂತೆ ಆಗಿರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಹಾಗೂ ತೂಕ ಹೆಚ್ಚಾಗಲು ಕಾರಣವಾದರೂ ಏನು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ದೇಹದ ತೂಕ ಹಾಗೂ ಬೊಜ್ಜು ಹೆಚ್ಚಾಗಲು ಮುಖ್ಯ ಕಾರಣ ನಾವು ಸೇವನೆ ಮಾಡುವ ಆಹಾರದ ಮೇಲೆ ಅವಲಂಬಿತ ಆಗಿರುತ್ತದೆ. ಒಂದಾನೊಂದು ಕಾಲದಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದರು, ಆಹಾರವನ್ನು ಯಾವಾಗಲೂ 32 ಬಾರಿ ಜಗಿದು ತಿನ್ನಬೇಕು ಎಂದು.

 

ಆದರೆ ಈಗಿನ ಆಧುನಿಕ ಕಾಲದಲ್ಲಿ ಆಹಾರವನ್ನು ಮುಖ್ಯವಾಗಿ ಫಾಸ್ಟ್ ಫುಡ್ ಗೆ ಹೊಂದಿರುವ ಕಾರಣ ಅವರು ಆಹಾರವನ್ನು 32 ಬಾರಿ ಜಗಿಯದೆ ಸೇವನೆ ಮಾಡುತ್ತಾರೆ. ಹಾಗೂ ಗಡಿಬಿಡಿಯಾಗಿ ಸೇವನೆ ಮಾಡುತ್ತಾರೆ. ಹೀಗಾಗಿ ತಿಂದ ಆಹಾರವು ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆ ಕಾಡಲು ಶುರು ಆಗುತ್ತದೆ. ದಿನಕ್ಕೆ ನಾವು ಮೂರು ಬಾರಿ ಊಟವನ್ನು ಮಾಡಿ ಮೂರು ಮಲ ಮೂತ್ರ ವಿಸರ್ಜನೆ ಮಾಡಬೇಕು ಅಂತ ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಬಾರಿ ಕೂಡ ಮಲ ವಿಸರ್ಜನೆ ಆಗುವುದು ಕಷ್ಟವಾಗಿ ಬಿಟ್ಟಿದೆ. ಹಾಗೂ ಮಲ ವಿಸರ್ಜನೆ ಮಾಡುವಾಗ ಮಲವು ಕೂಡ ಕೆಟ್ಟ ವಾಸನೆ ಬರುತ್ತದೆ. ಇದರಿಂದ ದೇಹದಲ್ಲಿ ತಿಂದ ಆಹಾರವೂ ದೇಹದಿಂದ ಹೊರಗೆ ಹೋಗದೇ ದೇಹದ ಸುತ್ತಲೂ ಕೊಬ್ಬು ಬೆಳೆಯುತ್ತದೆ ಹಾಗೂ ದೇಹದ ತೂಕವು ಹೆಚ್ಚುತ್ತದೆ. ಹೌದು ಮಲಬದ್ಧತೆ ಉಂಟಾಗಿದ್ದರೆ ನಮಗೆ ಮತ್ತಷ್ಟು ಸಮಸ್ಯೆಗಳು ಬರಲು ಶುರು ಆಗುತ್ತದೆ. ಅದಕ್ಕಾಗಿ ಈ ಮಲಬದ್ಧತೆ ಸಮಸ್ಯೆ ದೂರ ಮಾಡಲು ನೀವು ನಾರಿನ ಅಂಶ ಇರುವ ಆಹಾರವನ್ನು ಹಾಗೂ ಹಣ್ಣುಗಳನ್ನು ಸೇವನೆ ಮಾಡಿ

 

ಹಾಗೂ ಮುಖ್ಯವಾಗಿ ನಮ್ಮ ದೇಹಕ್ಕೆ ಅಗತ್ಯವಾಗಿ ನೀರು ಬೇಕು. ಹೀಗಾಗಿ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಹೌದು ನೀರು ಕುಡಿಯುವುದರಿಂದ ದೇಹದಲ್ಲಿ ಶೇಖರಣೆ ಆದ ಕೆಟ್ಟ ಕಲ್ಮಶಗಳು ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಹೀಗಾಗಿ ನಿಮ್ಮ ದೇಹವೂ ಹಗುರವಾಗಿ ತೂಕವು ಕಡಿಮೆ ಆಗುತ್ತದೆ. ಮತ್ತು ಮುಖ್ಯವಾಗಿ ನೀವು ಸಕ್ಕರೆ ಇರುವ ಆಹಾರವನ್ನು ಆದಷ್ಟು ಕಡಿಮೆ ಸೇವನೆ ಮಾಡಿಕೊಳ್ಳುತ್ತಾ ಬನ್ನಿ.
ಏಕೆಂದ್ರೆ ಸಕ್ಕರೆ ಪದಾರ್ಥಗಳ ಕೂಡ ದೇಹದಲ್ಲಿ ಬೊಜ್ಜು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಆದ್ದರಿಂದ ಸಕ್ಕರೆ ತಿಂಡಿ ತಿನಿಸುಗಳಿಂದ ದೂರವಿರಿ.ಇನ್ನೂ ಕೆಲವರು ಮೂರ್ಖವಾದ ಕೆಲಸವನ್ನು ಮಾಡುತ್ತಾರೆ ಊಟವನ್ನು ಬಿಟ್ಟರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು. ಆದರೆ ಇದು ಬಹಳ ದೊಡ್ಡದಾದ ತಪ್ಪು ಅಂತ ಹೇಳಬಹುದು. ಹೌದು ಯಾವುದೇ ಕಾರಣಕ್ಕೂ ಊಟವನ್ನು ಬಿಡಬಾರದು. ಬಿಟ್ಟರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹಾಗೂ ಇನ್ನಿತರ ಕಾಯಿಲೆಗಳಿಗೆ ಒಳಗುತ್ತಿರಿ. ಆದ್ದರಿಂದ ನಿತ್ಯವೂ ಆಹಾರವನ್ನು ಸೇವನೆ ಮಾಡಿ ಹಾಗೂ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ ಹೀಗೆ ಮಾಡುವುದರಿಂದ ತೂಕ ಹಾಗೂ ಕೊಬ್ಬು ಬೇಗನೆ ಕಡಿಮೆ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *