ಬೇಸಿಗೆಯಲ್ಲಿ ಪ್ರಸಿದ್ಧತೆ ಪಡೆದುಕೊಂಡಿರುವ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಾಡದೆ ಉಪಯೋಗಿಸಿ ನೋಡಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಕಲ್ಲಗಂಡಿ ಹಣ್ಣು ಎಲ್ಲರೂ ನೋಡಿಯೇ ಇರುತ್ತೀರಿ. ಅದರಲ್ಲಿ ಕೆಂಪು ಕೆಂಪು ಹಾಸಿಗೆ ಇದ್ದು ಒಳಗಡೆ ಕರಿ ಬೀಜಗಳಿಂದ ತುಂಬಿರುತ್ತದೆ. ಅದನ್ನು ಕತ್ತರಿಸಿದರೆ ಸಾಕು ಎಷ್ಟೊಂದು ಸುಂದರವಾದ ಮೈ ಬಣ್ಣವನ್ನು ಹೊಂದಿರುತ್ತದೆ. ನೋಡಿದ ತಕ್ಷಣವೇ ಬಾಯಲ್ಲಿ ನೀರು ಬರುತ್ತದೆ. ಹೌದು ಬೇಸಿಗೆ ಕಾಲದಲ್ಲಿ ರಾರಾಜಿಸುತ್ತಿರುವ ಹಣ್ಣುಗಳಲ್ಲಿ ಈ ಕಲ್ಲಂಗಡಿ ಹಣ್ಣು ಕೂಡ ಒಂದು ಅಂತ ಹೇಳಬಹುದು. ಇದನ್ನು ತಿಂದರೆ ಸಿಹಿ ಹಣ್ಣಿನ ಜೊತೆಗೆ ಸಿಹಿ ನೀರು ಕುಡಿದಂತೆ ಅನುಭವ ಆಗುತ್ತದೆ. ಬೇಸಿಗೆಯಲ್ಲಿ ಬಹಳ ಮಾರಾಟವಾಗುವ ಹಣ್ಣುಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಎಲ್ಲರೂ ಮಾಡುವ ದೊಡ್ಡ ತಪ್ಪು ಏನೆಂದರೆ ನಾವು ಕಾಲಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವನೆ ಮಾಡುತ್ತೇವೆ ಆದರೆ ಅವುಗಳಲ್ಲಿ ಇರುವ ಬೀಜವನ್ನು ಕಸದ ತೊಟ್ಟಿಯಲ್ಲಿ ಬಿಸಾಡುತ್ತೇವೆ. ಆದರೆ ನಿಮಗೆ ಗೊತ್ತೇ ಹಣ್ಣುಗಳು ಎಷ್ಟು ಆರೋಗ್ಯದಾಯಕವೋ ಅಷ್ಟೇ ಅದರಲ್ಲಿ ಇರುವ ಬೀಜಗಳು ಕೂಡ ಬಹಳ ಆರೋಗ್ಯಕ್ಕೆ ಹಿತಕರ.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕಲ್ಲಂಗಡಿ ಹಣ್ಣಿನಲ್ಲಿ ಇರುವ ಬೀಜಗಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ. ಕಲ್ಲಂಗಡಿ ಬೀಜದಲ್ಲಿ ಉತ್ತಮವಾದ ಮ್ಯಾಗ್ನಿಷಿಯಂ ಅಂಶ ಅಡಗಿದೆ ಇದು ಹೃದಯದ ಕೆಲಸವನ್ನು ಸರಾಗವಾಗಿ ಆರೋಗ್ಯವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಮತ್ತು ಮುಖ್ಯವಾಗಿ ಇದರಲ್ಲಿರುವ ಮ್ಯಾಗ್ನಿಷಿಯಂ ಅಂಶವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನಿತರ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಕಲ್ಲಂಗಡಿ ಹಣ್ಣಿನ ಬೀಜಗಳು ತುಂಬಾನೇ ಸಹಾಯ ಮಾಡುತ್ತದೆ. ಮತ್ತು ಇದರ ಬೀಜಗಳನ್ನು ಪುಡಿ ಮಾಡಿ ಸೇವನೆ ಮಾಡಿದರೆ ಸಾಕು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಇರುವ ಮ್ಯಾಗ್ನಿಷಿಯಂ ಅಂಶ ಕಬ್ಬಿಣ ಹಾಗೂ ಸತು ತಾಮ್ರದ ಅಂಶಗಳು ವಿಟಮಿನ್ಸ್ ಖನಿಜಗಳು ಲವಣಗಳು ಇರುವುರಿಂದ ನಿಮ್ಮ ಮೂಳೆಗಳಿಗೆ ಬಹಳ ಒಳ್ಳೆಯದು.

 

ಮೂಳೆಗಳನ್ನು ಬಲ ಪಡಿಸುತ್ತದೆ ಹಾಗೂ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಇರುವ ಬೀಜಗಳು ಮುಖದ ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಈ ಹಣ್ಣಿನ ಬೀಜವನ್ನು ತೆಗೆದುಕೊಂಡು ಅದರ ಎಣ್ಣೆಯನ್ನು ತೆಗೆದು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬೇಕು. ಚರ್ಮದ ರಂಧ್ರದಲ್ಲಿ ಅಡಗಿರುವ ಕೊಳೆಯನ್ನು ಹಾಗೂ ಮೊಡವೆಗಳನ್ನು ಕಣ್ಮರೆ ಮಾಡುತ್ತದೆ. ಮತ್ತು ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದಲ್ಲಿ ಬೇಡವಾದ ಕಲ್ಮಶಗಳನ್ನು ಹೊರಹಾಕುತ್ತದೆ. ಇಷ್ಟೆಲ್ಲ ಉಪಯೋಗವನ್ನು ಹೊಂದಿರುವ ಕಲ್ಲಂಗಡಿ ಬೀಜಗಳನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಅಂದರೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ತದ ನಂತರ ಸಣ್ಣ ಉರಿಯಲ್ಲಿ ಅದನ್ನು ಹುರಿದು ಕೊಳ್ಳಬೇಕು. ಬಳಿಕ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ದೀರ್ಘಕಾಲದವರೆಗೆ ಬಳಕೆ ಮಾಡಬಹುದು. ಇನ್ನೂ ಇದನ್ನು ನೀವು ಯಾವ ಸಮಯದಲ್ಲಾದರೂ ಕೂಡ ಸಲಾಡ್ ಮೇಲೆ ಹಾಕಿಕೊಂಡು ಸೇವನೆ ಮಾಡಬಹುದು.ಅದಕ್ಕಾಗಿ ಯಾವುದೇ ಹಣ್ಣು ಸೇವನೆ ಮಾಡಿದರು ಕೂಡ ಅದರ ಬೀಜಗಳನ್ನು ಬಿಸಾಡಬೇಡಿ.
ಶುಭದಿನ.

Leave a Reply

Your email address will not be published. Required fields are marked *