ಬೇಸಿಗೆ ಕಾಲದಲ್ಲಿ ನಿದ್ದೆ ಬಹಳ ಕಡಿಮೆ. ನಿಮಗೇನಾದರೂ ಮಧ್ಯಾಹ್ನ ಮಲಗುವ ಅಭ್ಯಾಸವಿದ್ದರೆ ಈಗಲೇ ಬಿಟ್ಟು ಬಿಡಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಾವು ಬೇಸಿಗೆ ಕಾಲದಲ್ಲಿ ನಮ್ಮ ಅರೋಗ್ಯದ ಮೇಲೆ ಚರ್ಮದ ಮೇಲೆ ಕೂದಲಿನ ಆರೋಗ್ಯ ಮೇಲೆ ಬಹಳ ಕಾಳಜಿಯನ್ನು ವಹಿಸಬೇಕಾಗುತ್ತದೆ. ಏಕೆ ಅನ್ನುತ್ತೀರಾ ನಮ್ಮ ದೇಹವು ಸರಿಯಾದ ಪ್ರಮಾಣದಲ್ಲಿ ನೀರಿನ ಅಂಶವು ಬೇಸಿಗೆ ಕಾಲದಲ್ಲಿ ಸಿಗುವುದಿಲ್ಲ. ಎಷ್ಟೇ ನೀರು ಕುಡಿದರು ಕೂಡ ಕಡಿಮೆ ಸ್ನೇಹಿತರೆ ಇದರಿಂದ ದೇಹವು ನಿರ್ಜಲೀಕರಣ ಸ್ಥಿತಿಗೆ ತಲುಪುವ ಸಾಧ್ಯತೆ ಇರುತ್ತದೆ. ಮಾರ್ಚ್ ತಿಂಗಳು ಶುರುವಾದರೆ ಸಾಕು ಬಿಸಿಲು ಶುರು ಆಗುತ್ತದೆ. ಪ್ರತಿ ವರ್ಷವೂ ಬಿಸಿಲು ಹೆಚ್ಚುತ್ತಲೇ ಇದೆ ಹೊರತು ಕಡಿಮೆ ಆಗುತ್ತಿಲ್ಲ ಮಿತ್ರರೇ. ಈ ಬೇಸಿಗೆ ಕಾಲದಲ್ಲಿ ಕಣ್ಣಿನ ಸಮಸ್ಯೆ ಬರುತ್ತದೆ, ಚಿಕ್ಕ ಮಕ್ಕಳಿಗೆ ಚಿಕನ್ ಪಾಕ್ಸ್ ಆಗುತ್ತದೆ.ಬಿಸಿಲಿನಿಂದ ತಲೆ ಸುತ್ತು ಮೈಗ್ರೆನ್ ಅತಿಯಾದ ತಲೆ ಸುತ್ತು, ಅತಿಯಾಗಿ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ ಮತ್ತು ಚರ್ಮದ ಸಮಸ್ಯೆಗಳು ಕಾಡುತ್ತದೆ. ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೇಸಿಗೆ ಕಾಲದಲ್ಲಿ ಹೇಗೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತ ತಿಳಿಯೋಣ.

 

ಬೇಸಿ ಗೆ ಕಾಲದಲ್ಲಿ ನಿದ್ದೆ ಬಹಳ ಕಡಿಮೆ. ನಿಮಗೇನಾದರೂ ಮಧ್ಯಾಹ್ನ ಮಲಗುವ ಹವ್ಯಾಸ ಇದ್ದರೆ ಅದನ್ನು ಬಿಟ್ಟು ಬಿಡಿ. ನಿದ್ದೆ ಹಾಳು ಆದರೆ ದೈನಂದಿನ ಚಟುವಟಿಕೆ ಗಳು ಹಾಗೂ ಆತನ ಆರೋಗ್ಯವೂ ಹಾಳು ಆಗುತ್ತದೆ. ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುವುದು ಬಹಳ ಒಳ್ಳೆಯದು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆಗಳು ಕಾಡುತ್ತವೆ. ಒಣ ಚರ್ಮ ಇರುವವರು ಪ್ರತಿನಿತ್ಯ ಸ್ನಾನ ಮಾಡುವ ಮುನ್ನ ಪಾದಕ್ಕೆ ಶುದ್ಧ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಮತ್ತು ಮುಖ್ಯವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ಇದು ಬಹಳ ಒಳ್ಳೆಯದು. ಬೇಸಿಗೆ ಕಾಲದಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವ ಆಹಾರವನ್ನು ಸೇವನೆ ಮಾಡಬೇಕು ನೀರಿನ ಅಂಶ ಇರುವ ಹಣ್ಣು ಗಳೆಂದರೆ ಖರ್ಬುಜ್ ಹಣ್ಣು ಕಲ್ಲಂಗಡಿ ಸೌತೆಕಾಯಿ ಅನಾನಸ್ ದ್ರಾಕ್ಷಿ ಹಣ್ಣು ಸೇವನೇ ಮಾಡಬೇಕು.

 

ವಾರದಲ್ಲಿ ಎರಡು ಬಾರಿ ಎಳೆ ನೀರು ಕುಡಿಯಿರಿ. ದೇಹದಲ್ಲಿ ನಿರ್ಜಲೀಕರಣವನ್ನು ದೂರ ಮಾಡುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ತಪ್ಪದೇ ಬೇಸಿಗೆ ಕಾಲದಲ್ಲಿ ಎಳೆ ನೀರು ಕುಡಿಯಿರಿ. ಬೇಸಿಗೆ ಕಾಲದಲ್ಲಿ ಬಟ್ಟೆ ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೇಸಿಗೆ ಕಾಲದಲ್ಲಿ ಯಾವಾಗ್ಲೂ ಶುದ್ಧವಾದ ಕಾಟನ್ ಬಟ್ಟೆ ಯನ್ನು ಧರಿಸಿ. ಮತ್ತು ಹೊರಗಡೆ ಆಹಾರವನ್ನು ಕರಿದಿರುವ ಆಹಾರವನ್ನು ಸೇವನೆ ಮಾಡಬೇಡಿ. ಬೇಸಿಗೆ ಕಾಲದಲ್ಲಿ ವಿಧ್ಯಾರ್ಥಿ ಗಳು ಹೆಚ್ಚು ಗಮನ ಹರಿಸಬೇಕು. ಪರೀಕ್ಷೆ ಇದ್ದ ಕಾರಣ ಅವರು ಊಟವನ್ನು ನಿದ್ದೆಯನ್ನು ಬಿಟ್ಟು ಬಿಡುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಅವರು ಕಾಲಕ್ಕೆ ತಕ್ಕಂತೆ ಸರಿಯಾಗಿ ಊಟ ನಿದ್ದೆ ನೀರು ಎಲ್ಲವನ್ನು ಚಾಚೂ ತಪ್ಪದೇ ಮಾಡಬೇಕು. ಇಲ್ಲವಾದರೆ ಮೈಗ್ರೇನ್ ಹಾಗೂ ಮೆದುಳಿನ ಸಮಸ್ಯೆಗಳು ಬರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.
ಬೇಸಿಗೆ ಕಾಲದಲ್ಲಿ ಬಹಳ ಬೆವರು ಬರುತ್ತದೆ ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ ಹಾಗಾಗಿ ಹೆಚ್ಚು ಹೆಚ್ಚು ನೀರು ಕುಡಿಯಿರಿ.

Leave a Reply

Your email address will not be published. Required fields are marked *