ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಲಿವರ್ ಹಾಳಾಗಿದೆ ಎಂದು ಅರ್ಥ, ಅವುಗಳು ಯಾವು ಅಂತೀರಾ?? ವೈದ್ಯರ ಸಲಹೆಯನ್ನು ಪಡೆಯಿರಿ!

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಅನ್ನುವುದು ಇದ್ದೇ ಇರುತ್ತದೆ. ಕೆಲವೊಂದು ಅನಾರೋಗ್ಯಗಳು ಹೇಗೆ ದೇಹದಲ್ಲಿ ಬಂದು ಸೇರುತ್ತದೆ ಎಂದು ನಮಗೆ ಗೊತ್ತಾಗುವುದಿಲ್ಲ. ಹಾಗೂ ಅದರ ಲಕ್ಷಣಗಳು ಕೂಡ ನಮ್ಮ ಗಮನಕ್ಕೆ ಬರುವುದಿಲ್ಲ. ಕಾಯಿಲೆಯು ಕೊನೆಯ ಹಂತಕ್ಕೆ ತಲುಪಿ ತೀವ್ರ ಗಂಭೀರವಾದ ಸ್ಥಿತಿಗೆ ತಲುಪಿದ ಮೇಲೆ ನಮಗೆ ತಿಳಿಯುತ್ತದೆ. ಆಗ ಸಮಯ ಮೀರಿ ಹೋಗಿರುತ್ತದೆ. ನಾವು ಯಾವಾಗ್ಲೂ ಆರೋಗ್ಯದ ಕಡೆಗೆ ತುಂಬಾನೇ ಕಾಳಜಿಯನ್ನು ವಹಿಸಬೇಕು. ಕಾಯಿಲೆ ಬರುವ ಮುನ್ನ ನಾವು ಬಹಳ ಎಚ್ಚರಿಕೆ ವಹಿಸಬೇಕು. ಇಂತಹ ಕೆಲವು ಗುಣಲಕ್ಷಣಗಳನ್ನು ನಾವು ಅರಿತುಕೊಳ್ಳುವುದು ಕಷ್ಟವಾಗುತ್ತದೆ. ಅಂಥಹ ಲಕ್ಷಣಗಳಲ್ಲಿ ಈ ಕಿಡ್ನಿ ಅಥವಾ ಲಿವರ್ ಡ್ಯಾಮೇಜ್ ಆಗುವುದು. ಇದರ ಲಕ್ಷಣಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಿ ಕಿಡ್ನಿ ಫೇಲ್ಯೂರ್ ಆದರೆ ತಕ್ಷಣವೇ ನಿಮಗೆ ಗುಣಲಕ್ಷಣಗಳು ಕಂಡು ಬಂದು ನಿಮಗೆ ಕಿಡ್ನಿ ಕೆಟ್ಟು ಹೋಗಿದೆ ಎಂದು ತಕ್ಷಣವೇ ಸೂಚಿಸುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಕಿಡ್ನಿ ವೈಫಲ್ಯ ಉಂಟಾಗಿದ್ದರೆ ನಿಮ್ಮಲ್ಲಿ ಯಾವ ಬಗೆಯ ಗುಣಲಕ್ಷಣಗಳು ಕಂಡು ಬರುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲನೆಯ ಲಕ್ಷಣ ಯಾವುದು ಅಂದರೆ ಕಿಡ್ನಿ ವೈಫಲ್ಯ ಆದರೆ ನಿಮಗೆ ಹಸಿವು ಆಗುವುದಿಲ್ಲ. ಎಷ್ಟು ತಿಂದರೂ ಕೂಡ ನಿಮಗೆ ಹಸಿವು ಅನ್ನುವುದು ಆಗುವುದಿಲ್ಲ. ಇನ್ನೂ ಎರಡನೆಯದು, ಬಹಳ ಸುಸ್ತು ಆಗುತ್ತದೆ. ಸ್ವಲ್ಪ ಕೆಲಸವನ್ನು ಮಾಡಿದರೂ ಕೂಡ ಸುಸ್ತು ಆಯಾಸ ಆಗುತ್ತದೆ. ಇನ್ನೂ ಕಿಡ್ನಿ ಡ್ಯಾಮೆಜ್ ಆದವರು ಎಷ್ಟೇ ಒಳ್ಳೆಯ ಆಹಾರ ಹಣ್ಣುಗಳನ್ನು ತರಕಾರಿ ತಿಂದರೂ ಕೂಡ ಅವರಿಗೆ ಪೌಷ್ಟಿಕತೆ ಸರಿಯಾಗಿ ಸಿಗುವುದಿಲ್ಲ. ಹಾಗೂ ದೇಹದ ಅಂಗಾಂಶಗಳು ಆಹಾರದಲ್ಲಿ ಇರುವ ಸತ್ವಗಳನ್ನು ಹೀರಿಕೊಳ್ಳುವುದಿಲ್ಲ. ಇದರಿಂದ ದೇಹಕ್ಕೆ ಶಕ್ತಿ ಕೂಡ ಸಿಗದೇ ಕಿಡ್ನಿ ಮತ್ತಷ್ಟು ಹಾಳಾಗುತ್ತದೆ. ಇನ್ನೂ ಕೆಲವರಿಗೆ ತುಂಬಾ ಹೊಟ್ಟೆ ನೋವು ಶುರು ಆಗುತ್ತದೆ. ಆಸಿಡಿಟಿ ವಾಂತಿ ವಾಕರಿಕೆ ಬರಲು ಶುರು ಆಗುತ್ತದೆ. ಇನ್ನೂ ಲಿವರ್ ಹಾಳಾದವರು ಕಣ್ಣುಗಳ ಬಣ್ಣ ಬದಲಾಗುತ್ತದೆ. ಕಣ್ಣಲ್ಲಿ ರಕ್ತ ಕೂಡ ಇರುವುದಿಲ್ಲ. ಕಣ್ಣುಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಲಕ್ಷಣ ಅನುಭವ ಆದಾಗ ನೀವು ಒಂದು ಬಾರಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಇನ್ನೂ ಯಾರಿಗೆ ಹೆಚ್ಚಾಗಿ ಲಿವರ್ ಹಾಳು ಆಗಿ ಹೋಗಿದ್ದಾಗ ನಿಮ್ಮ ಮೂತ್ರದ ಬಣ್ಣವೂ ಬದಲಾಗುತ್ತದೆ.

 

ಇಂತಹ ಗುಣಲಕ್ಷಣ ನಿಮ್ಮಲ್ಲಿ ಕಂಡು ಬಂದರೆ ಲಿವರ್ ಕೆಟ್ಟು ಹೋಗಿದೆಯೋ ಇಲ್ಲವೋ ಎಂದು ಒಂದು ಬಾರಿ ವೈದ್ಯರಲ್ಲಿ ಚೆಕ್ ಮಾಡಿಸಿಕೊಳ್ಳಿ. ಇನ್ನೂ ಕೊನೆಯ ಲಕ್ಷಣ ಯಾವ ರೀತಿ ನಿಮ್ಮಲ್ಲಿ ಕಂಡು ಬಂದರೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಅಂದರೆ ನಿಮ್ಮ ಕೈ ಕಾಲುಗಳು ಸುಮ್ಮನೆ ಊದಿಕೊಳ್ಳುವುದು ಹೌದು ಕೈ ಕಾಲುಗಳಲ್ಲಿ ಬಾವು ಬರುವುದು ಮತ್ತು ಉಬ್ಬುವುದು ಸ್ವಲ್ಪ ಬಡೆದಾಗ ಡಬ್ ಡಬ್ ಅನ್ನುವ ಶಬ್ದ ಬರುವಷ್ಟು ಊದಿಕೊಳ್ಳುವುದು ಹೀಗೆ ಇಂತಹ ಲಕ್ಷಣ ನಿಮ್ಮಲ್ಲಿ ಕಂಡು ಬಂದರೆ ತಪ್ಪದೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಕಿಡ್ನಿ ಆರೋಗ್ಯವಾಗಿದ್ದರೆ ನಮ್ಮ ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ ಹಾಗೂ ದೇಹದ ಎಲ್ಲಾ ಅಂಗಾಂಶಗಳು ಕೂಡ ಸರಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ. ಆದ್ದರಿಂದ ಕಿಡ್ನಿ ವೈಫಲ್ಯ ಆದಾಗ ತಕ್ಷಣವೇ ನಮಗೆ ಅರಿವು ಆಗುವುದಿಲ್ಲ. ಇಂತಹ ಲಕ್ಷಣಗಳು ಸೂಕ್ಷ್ಮವಾಗಿ ನಿಮ್ಮಲ್ಲಿ ಕಂಡು ಬಂದರೆ ಖಂಡಿತವಾಗಿ ವೈದ್ಯರಲ್ಲಿ ತೋರಿಸಿ. ಶುಭದಿನ.

Leave a Reply

Your email address will not be published. Required fields are marked *