ದೇವರಿಗೆ ತುಪ್ಪದ ದೀಪವನ್ನೇ ಯಾಕೆ ಹಚ್ಚಬೇಕು? ಇಲ್ಲಿಗೆ ಅರ್ಥಪೂರ್ಣ ವ್ಯಾಖ್ಯಾನ.

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಸನಾತನ ಹಿಂದೂ ಧರ್ಮದಲ್ಲಿ ದೀಪ ಹಚ್ಚದೆ ಯಾವ ಕೆಲಸವೂ ಶುರು ಆಗಲ್ಲ. ನಿತ್ಯ ದೇವರ ಮನೆಯಲ್ಲಿ ದೀಪ ಹಚ್ಚಿ ದಿನಚರಿ ಶುರು ಆಗುತ್ತೆ. ಸಂಜೆ ಸಹ ಅಷ್ಟೇ ದೀಪದಿಂದಲೆ ನಾವು ದೇವರನ್ನು ಆರಾಧನೆ ಮಾಡುತ್ತೇವೆ. ಪೂಜೆ ಪ್ರಾರ್ಥನೆ ತಪಸ್ಸು ಮಾಡುವ ಪ್ರತಿಯೊಂದು ಕೆಲಸದಲ್ಲಿ ದೀಪಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ದೀಪ ಬೇಳಗಿಸದೆ ಯಾವ ಪ್ರಾರ್ಥನೆಯು ಮಾಡಬಾರದು ಎನ್ನುವ ನಂಬಿಕೆ ಇದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸುವುದು ಇದೆ ಕಾರಣಕ್ಕೆ. ಶಾಸ್ತ್ರಗಳಲ್ಲಿ ದೀಪಗಳನ್ನು ಯಾವಾಗ ಎಲ್ಲಿ ಬೇಳಗಿಸಬೇಕು ಎನ್ನುವುದನ್ನು ಹೇಳಿದೆ. ಇದನ್ನು ಮಾಡದಿದ್ದರೆ ಅದಕ್ಕೆ ಫಲ ಸಿಗಲ್ಲ.

 

ನಮ್ಮ ನಂಬಿಕೆಗಳಲ್ಲಿ ತುಪ್ಪದ ದೀಪಕ್ಕೆ ಶ್ರೇಷ್ಠವಾದ ಸ್ಥಾನ ಇದೆ. ಎಲ್ಲಾ ಕೋಣೆಗಳಲ್ಲಿ ದೀಪವನ್ನು ಹಚ್ಚಲು ಸಾಧ್ಯ ಆಗದಿದ್ದರೆ ದೇವರ ಕೋಣೆಯಲ್ಲಿ ಅಥವಾ ದೇವರ ಮೂರ್ತಿಯ ಮುಂದೆ ಹಚ್ಚುವುದರಿಂದ ಶಾಂತಿಯ ವಾತಾವರಣ ನೆಲೆಸುತ್ತೆ. ಮನೆಯಲ್ಲಿ ಯಾವುದೇ ಕಲಹಗಳು ಆಗುವುದಿಲ್ಲ ಮನೆಯಲ್ಲಿ ಕೆಟ್ಟ ಶಕ್ತಿಗಳು ಇದ್ರೆ ನಿವಾರಣೆ ಆಗುತ್ತೆ. ಸೂರ್ಯ ದೇವರ ಮುಂದೆ ದೀಪವನ್ನು ಹಚ್ಚಿ ಪ್ರಾರ್ಥನೆ ಮಾಡಿದರೆ ಸರ್ವ ರೋಗ ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಇದೆ. ತುಪ್ಪದ ದೀಪ ಅತೀ ಶ್ರೇಷ್ಠವಾದದ್ದು ಆದ್ದರಿಂದ ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ನೆಗಟಿವ್ ಎನರ್ಜಿ ನಿವಾರಣೆ ಆಗಿ ಮನೆ ತುಂಬಾ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ. ಒಂದುವೇಳೆ ತುಪ್ಪದ ದೀಪ ದಿನಾಲೂ ಹಚ್ಚೋಕೆ ಕಷ್ಟ ಅಂದ್ರೆ ಮಂಗಳವಾರ ಅಥವಾ ಶುಕ್ರವಾರ ಹಚ್ಚಲು ಶಾಸ್ತ್ರಗಳಲ್ಲಿ ಹೇಳಿದೆ.

 

ಇದರಿಂದ ಮನೆಯಲ್ಲಿ ಸಮೃದ್ಧಿ ಸದಾ ನೆಮ್ಮದಿ ತುಂಬಿಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ವಿಶೇಷ ಪೂಜೆಗಳಲ್ಲಿ ಸನಾತನ ಹಿಂದೂ ಪರಂಪರೆಯಲ್ಲಿ ತುಪ್ಪದ ದೀಪ ಹಚ್ಚುವ ಪದ್ಧತಿ ಬೆಳೆದು ಬಂತು. ಕೆಲವು ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ತುಪ್ಪದ ದೀಪಗಳನ್ನು ಹಚ್ಚಲಾಗುತ್ತೆ. ಜ್ಯೋತಿಷ್ಯದ ಪ್ರಕಾರ ಕೆಲವು ದೋಷಗಳಿಗೆ ತುಪ್ಪದ ದೀಪವನ್ನು ದೇವರಿಗೆ ಹಚ್ಚಿ ಶ್ರದ್ದೆಯಿಂದ ಪ್ರಾರ್ಥನೆ ಮಾಡಿದ್ರೆ ದೋಷಗಳ ನಿವಾರಣೆ ಆಗುತ್ತೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ತುಪ್ಪದ ದೀಪಕ್ಕೆ ಬೇರೆ ಎಲ್ಲಾ ದಿಪಕ್ಕಿಂತ ಹೆಚ್ಚಿನ ಮಹತ್ವ ಇದೆ. ನೋಡಿದ್ರಲ್ಲ ತುಪ್ಪದ ದೀಪ ಹಚ್ಚುವುದರಿಂದ ಏನೆಲ್ಲಾ ಲಾಭಗಳು ಇವೆ ಅಂತ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ತುಪ್ಪದ ದೀಪ ಹಚ್ಚಿ ದೇವರ ಹೆಚ್ಚಿನ ಆಶೀರ್ವಾದ ಪಡೆಯಿರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *