ಕಿಡ್ನಿ ಸ್ಟೋನ್ ಉರಿ ಮೂತ್ರ, ಮೂತ್ರ ಕೋಶದ ಸಮಸ್ಯೆಗಳು ಹಾಗೂ ಸೋಂಕುಗಳಿಗೆ ಬಸಳೆ ಸೊಪ್ಪಿನ ಜ್ಯೂಸ್ ರಾಮಬಾಣ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ ನಮ್ಮ ಪ್ರಕೃತಿ ಅದೇಷ್ಟು ನೈಸರ್ಗಿಕವಾದ ಔಷಧೀಯ ಗಿಡ ಮೂಲಿಕೆಯನ್ನು ನೀಡಿದೆ. ಅದರಲ್ಲಿ ಕಾಡು ಬಸಳೆ ಸೊಪ್ಪು. ಈ ಸೊಪ್ಪಿನ ಜ್ಯೂಸ್ ಮಾಡಿಕೊಂಡು ಕುಡಿದುಕೊಂಡರೆ ನಿಮಗೆ ಜೀವನದಲ್ಲಿ ಕಿಡ್ನಿ ಸ್ಟೋನ್ ಜೊತೆಗೆ ಉರಿ ಮೂತ್ರದ ಸಮಸ್ಯೆ ಕೂಡ ಗುಣಮುಖವಾಗುತ್ತದೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ಕಾಡು ಬಸಳೆ ಸೊಪ್ಪು ಅನ್ನು ಮೀರ್ಯಕಲ್ ಪ್ಲಾಂಟ್ ಎಂದು ಕೂಡ ಕರೆಸಿಕೊಂಡಿದೆ. ನೈಸರ್ಗಿಕವಾಗಿ ಸಿಗುವ ಈ ಬಸಳೆ ಸೊಪ್ಪು ಇದರ ಕಾಂಡ ಎಲೆ ಬೇರು ಪ್ರತಿಯೊಂದು ಭಾಗವೂ ಬಹಳ ಆರೋಗ್ಯದಾಯಕ ವಾಗಿದೆ. ಈ ಸಸ್ಯವು ಸಾಮಾನ್ಯವಾಗಿ ಬದುಗಳಲ್ಲಿ ಗದ್ದೆಯಲ್ಲಿ ತೇವಾಂಶ ಅಧಿಕ ಇರುವ ಜಾಗದಲ್ಲಿ ಕಂಡು ಬರುತ್ತದೆ.

 

ಇನ್ನೂ ಈ ಸಸ್ಯದ ಜ್ಯೂಸ್ ಕಿಡ್ನಿ ಸ್ಟೋನ್ ಹಾಗೂ ಉರಿ ಮೂತ್ರದ ಸಮಸ್ಯೆ ಮೂತ್ರ ಕೋಶದ ಸೋಂಕುಗಳಿಗೆ ಅತ್ಯುತ್ತಮ ದಿವ್ಯ ಔಷಧ ಆಗಿದೆ. ಹೌದು ಮುಖ್ಯವಾಗಿ ಹೇಳಬೇಕೆಂದರೆ ಈ ಎಲ್ಲ ಸಮಸ್ಯೆಗಳಿಗೆ ಈ ಕಾಡು ಬಸಳೆ ಸೊಪ್ಪಿನ ಜ್ಯೂಸ್ ಮಾಡಿಕೊಂಡು ಪ್ರತಿ ನಿತ್ಯವೂ ಕುಡಿದರೆ ಸಾಕು ಮೂತ್ರ ಕೋಶದ ಸಮಸ್ಯೆ ಉರಿ ಮೂತ್ರದ ಸಮಸ್ಯೆ ಕಿಡ್ನಿ ಸ್ಟೋನ್ ಎಲ್ಲ ಸಮಸ್ಯೆಗಳಿಗೆ ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರದ ಹಾಗೆ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು. ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು ಯಾಕೆಂದರೆ ನೀರು ಹೆಚ್ಚಾಗಿ ಕುಡಿಯದೇ ಇರುವುದು ಇದಕ್ಕೆ ಕಾರಣವಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಈಗ ಎಲ್ಲೆಡೆಗೆ ಎಲ್ಲರಲ್ಲಿಯೂ ಅಧಿಕವಾಗಿ ಕಂಡು ಬರುವ ಸಮಸ್ಯೆ ಆಗಿದೆ. ಕಿಡ್ನಿ ಸ್ಟೋನ್ ಕಿಡ್ನಿ ವೈಫಲ್ಯಕ್ಕೆ ಅನೇಕ ಜನರು ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಇದು ಆರೋಗ್ಯಕ್ಕೆ ಕುತ್ತು ತರುತ್ತದೆ. ಹೀಗಾಗಿ ಮನೆಯಲ್ಲಿ ನೀವು ಸುಲಭವಾಗಿ ಈ ಬಸಳೆ ಸೊಪ್ಪಿನ ಜ್ಯೂಸ್ ಮಾಡಿಕೊಂಡು ಕುಡಿದು ಈ ಪರಿಹಾರದಿಂದ ಮುಕ್ತಿ ಪಡೆಯಬಹುದು.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಬಸಳೆ ಸೊಪ್ಪಿನ ಜ್ಯೂಸ್ ಹೇಗೆ ಸಿದ್ದ ಪಡಿಸುವುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಕಾಡು ಬಸಳೆ ಸೊಪ್ಪು ಅನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು. ಬಳಿಕ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಆದರೆ ನೆನಪಿರಲಿ ಇರದಲ್ಲಿ ಯಾವುದೇ ಕಾರಣಕ್ಕೂ ನೀರನ್ನು ಹಾಕಬೇಡಿ. ಇದರ ಎಲೆಯಲ್ಲಿ ಇರುವ ನೀರಿನ ಅಂಶವೇ ಸಾಕಾಗುತ್ತದೆ. ಪೇಸ್ಟ್ ಮಾಡಿಕೊಂಡ ನಂತರ ಅದರ ರಸ ಬರುವ ಹಾಗೆ ಚೆನ್ನಾಗಿ ಶೋದಿಸಿಕೊಳ್ಳಿ. ಈ ರಸವನ್ನು ಒಂದು ಲೋಟದಲ್ಲಿ ಹಾಕಿಕೊಳ್ಳಿ. ಬಳಿಕ ಒಂದು ಎಳೆನೀರು ತೆಗೆದುಕೊಂಡು ಎರಡನ್ನೂ ಸೇರಿಸಿ ಒಂದು ಚಮಚದ ಸಹಾಯದಿಂದ ಕಲಕಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ನೀವು ಪ್ರತಿದಿನವೂ ಸೇವನೆ ಮಾಡುತ್ತಾ ಬಂದರೆ ಖಂಡಿತವಾಗಿ ಕಿಡ್ನಿ ಸ್ಟೋನ್ ನಿವಾರಣೆ ಆಗುತ್ತದೆ. ಹೌದು ಇಲ್ಲಿ ಬಳಕೆ ಮಾಡಿರುವ ಎಳೆನೀರು ಕೂಡ ಭಾರೀ ಪ್ರಮಾಣದಲ್ಲಿ ದೇಹಕ್ಕೆ ಲಾಭಗಳನ್ನು ನೀಡುತ್ತದೆ. ಹೀಗಾಗಿ ಕಿಡ್ನಿ ಸ್ಟೋನ್, ಉರಿ ಮೂತ್ರ ಮತ್ತು ನಿರ್ಜಲೀಕರಣ ಈ ಬಗೆಯ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದು. ಮುಖ್ಯವಾದ ವಿಚಾರ ಹೇಳುವುದಾದರೆ ಈ ಜ್ಯೂಸ್ ಕುಡಿದ ನಂತರ ಹಾಲು ಮೊಸರು ಜೇನುತುಪ್ಪವನ್ನು ಸೇವನೆ ಮಾಡಬೇಡಿ.
ಶುಭದಿನ.

Leave a Reply

Your email address will not be published. Required fields are marked *