ಪದೇ ಪದೇ ಬರುವ ಸೀನುಗಳಿಗೆ ಇಲ್ಲಿದೆ ಸೂಪರ್ ಮನೆಮದ್ದುಗಳು!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಶೀತ ನೆಗಡಿ ಆದಾಗ ಸಾಮಾನ್ಯವಾಗಿ ನಮಗೆ ಸೀನು ಬರುವುದು ಸಹಜ. ಆದರೆ ಕೆಲವರಿಗೆ ಸತತವಾಗಿ ಸೀನು ಬರುತ್ತಲೇ ಇರುತ್ತದೆ ಏನು ಮಾಡಿದರೂ ಕೂಡ ನಿಲ್ಲುವುದಿಲ್ಲ. ಹೀಗೆ ಹಲವಾರು ಬಾರೀ ಸೀನು ಬಂದರೆ ಮುಜುಗರ ಆಗುತ್ತದೆ. ಮತ್ತು ಮುಖ್ಯವಾಗಿ ಹೇಳಬೇಕೆಂದರೆ ಸೀನುಗಳನ್ನು ತಡೆಯಲು ಆಗುವುದಿಲ್ಲ. ತಡೆದರೆ ಬಹಳ ಸಮಸ್ಯೆಗಳು ಶುರು ಆಗುತ್ತದೆ ಅನ್ನುವುದು ಖಚಿತಗೊಂಡಿದೆ. ಹಾಗಾದರೆ ಇದಕ್ಕೆ ಪರಿಹಾರ ಮಾತ್ರೆಗಳನ್ನು ಸೇವಿಸುವುದು ಅಥವಾ ಬೇರೇನೂ ಮಾರ್ಗವೇ ಇಲ್ಲ ಅಂತ ಹೇಳುವುದಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಸುಲಭವಾಗಿ ಪದೇ ಪದೇ ಬರುವ ಸೀನುಗಳಿಗೆ ಒಂದು ಪೂರ್ಣ ವಿರಾಮ ಇಡುವ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ. ಸೀನುಗಳು ಸಾಮಾನ್ಯವಾಗಿ ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಅಂದರೆ ನೆಗಡಿ ಶೀತ ಜ್ವರ ಬಂದಾಗ ಸೀನುಗಳು ಬರುತ್ತವೆ ಹಾಗೂ ಇನ್ನಿತರ ವಾಸನೆ ಹೊಗೆ ಇಂದ ಸೀನುಗಳು ಬರುತ್ತವೆ.

 

ಸೀನುಗಳನ್ನು ಸಿಲ್ಲಿಸಲು ನೀಲಿಗಿರಿ ಎಣ್ಣೆ ಬಹಳ ಉಪಯುಕ್ತ. ಹಾಗಾದ್ರೆ ಇದನ್ನು ಹೇಗೆ ಉಪಯೋಗಿಸಬೇಕು ಅಂದರೆ ಕುದಿಯುವ ನೀರಿಗೆ ನೀಲಗಿರಿ ಎಣ್ಣೆ ಹಾಕಿ ಅದರ ಹಬೆಯನ್ನು
ತೆಗೆದುಕೊಳ್ಳುವುದರಿಂದ ಖಂಡಿತವಾಗಿ ಸೀನು ನಿಲ್ಲುತ್ತದೆ. ನಮಗೆ ಉಂಟಾಗುವ ಅನೇಕ ಬಗೆಯ ಅಲರ್ಜಿ ಗಳನ್ನು ದೂರ ಮಾಡುವಲ್ಲಿ ಜೇನುತುಪ್ಪ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಅಲರ್ಜಿ ಪ್ರಕ್ರಿಯೆಯಲ್ಲಿ ಜೇನುತುಪ್ಪ ಬಹಳ ಸಹಾಯಕಾರಿ. ಶೀತ ನೆಗಡಿ ಇಂದ ಬರುವ ಸಿನುಗಳಿಗೆ ಜೇನುತುಪ್ಪ ರಾಮಬಾಣ. ಒಂದು ಚಮಚ ಜೇನುತುಪ್ಪ ಸೇವನೆ ಮಾಡುವುದರಿಂದ ದೇಹದಲ್ಲಿ ಆಗುವ ಅಲರ್ಜಿಯನ್ನೂ ದೂರ ಮಾಡುತ್ತದೆ. ಉರಿ ಊತ ಕೆರೆತ ತುರಿಕೆ ಇಂದ ಮುಕ್ತಿ ಸಿಗುವುದು ಖಚಿತ ಮುಖ್ಯವಾಗಿ ಸೀನುಗಳಿಗೇ ತ್ವರಿತವಾಗಿ ಆರಾಮ ಸಿಗುತ್ತದೆ. ಹೇಳಲಾಗುತ್ತದೆ ಅರಿಶಿಣ ಹಾಲು ಕುಡಿಯುವುದರಿಂದ ಶೀತ ನೆಗಡಿ ನಿವಾರಣೆಯಾಗುತ್ತದೆ ಎಂದು. ಹೌದು ಇದು ನಿಜವಾದ ಮಾತು ಇದರ ಜೊತೆಗೆ ಸೀನು ಕೂಡ ಕಡಿಮೆ ಆಗುತ್ತದೆ. ಮತ್ತು ಇನ್ನಿತರ ಅಲರ್ಜಿ ಸಮಸ್ಯೆ ಕೂಡ ಮಂಗಮಾಯ ಆಗುತ್ತದೆ. ಇನ್ನೂ ಒಂದು ಒಳ್ಳೆಯ ಮನೆಮದ್ದು ಬಗ್ಗೆ ಹೇಳುವುದಾದರೆ ಮನೆಯಲ್ಲಿ ಸಿಗುವ ಶುಂಠಿ ಮತ್ತು ಬೆಲ್ಲ ಸೀನು ಸಮಸ್ಯೆ ದಿವ್ಯ ಔಷಧ ಅಂತ ಹೇಳಬಹುದು.

 

ಶುಂಠಿ ಅನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದು ಅದರಲ್ಲಿ ಬೆಲ್ಲವನ್ನು ಹಾಕಿ ಸೇವನೆ ಮಾಡುವುದರಿಂದ ಸೀನುಗಳಿಗೆ ಪರಿಹಾರ ಮಾಡಿಕೊಳ್ಳಬಹುದು. ಇನ್ನೂ ಕೊನೆಯದಾಗಿ ವಿಟಮಿನ್ ಸಿ ಅಂಶ ಇರುವ ಆಹಾರ ಹಣ್ಣುಗಳನ್ನು ಸೇವನೆ ಮಾಡಿ. ಅದರಲ್ಲೂ ಸಿಟ್ರಿಕ್ ಅಂಶ ಇರುವ ಕಿತ್ತಳೆ ಹಣ್ಣು ಅನಾನಸ್ ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಸೇವನೆ ಮಾಡಿ. ಇದರಲ್ಲಿ ಇರುವ ಉತ್ತಮವಾದ ಪೋಷಕಾಂಶಗಳೂ ಮತ್ತು ಉತ್ಕರ್ಷಣ ಶಕ್ತಿ ಕೂಡ ನಮ್ಮ ದೇಹಕ್ಕೆ ಸಿಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ನೆಗಡಿ ಇಂದ ಉಂಟಾಗುವ ಅಲರ್ಜಿ ಅನ್ನು ಇಂತಹ ಹಣ್ಣುಗಳು ದೂರ ಮಾಡುತ್ತದೆ. ಇನ್ನೂ ಏನೇ ಮಾಡಿದರು ಎಷ್ಟೇ ಪ್ರಯತ್ನ ಮಾಡಿದರು ಕೂಡ ಸೀನು ಕಡಿಮೆ ಆಗುತ್ತಿಲ್ಲ ಅಂದರೆ ನೀವು ಇದ್ದ ಸ್ಥಳ ಸ್ವಚ್ಚವಾಗಿ ಇಲ್ಲ ಎಂದು ಅರ್ಥ ಧೂಳು ಹೊಗೆ ಇಂದ ಕೂಡ ಸೀನು ಬರುತ್ತದೆ ಆದ್ದರಿಂದ ಮನೆಯನ್ನು ಸ್ವಚ್ಛ ಮಾಡಿಕೊಂಡು ಇರುವುದು ಸೂಕ್ತ ಅದರಲ್ಲೂ ನೀವು ಮಲಗುವ ಬೆಡ್ ಕ್ಲೀನ್ ಆಗಿ ಇರುವಂತೆ ನೋಡಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *