ತುಳಸಿ ದಳಗಳನ್ನು ಟೀ ಮಾಡಿಕೊಂಡು ಕುಡಿದರೆ ಏನಾಗುತ್ತದೆ ಗೊತ್ತೇ?

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ತುಳಸಿ ಗಿಡ ಇಲ್ಲದೆ ಇರುವ ಹಿಂದೂಗಳ ಮನೆಯಿಲ್ಲ ಮಿತ್ರರೇ. ತುಳಸಿ ಗಿಡ ಮನೆಯಲ್ಲಿ ಇದ್ದರೆ ಸಾಕ್ಷಾತ್ ತಾಯಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಅರ್ಥ. ಜೊತೆಗೆ ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತದೆ ಅವರ ಮನೆಯಲ್ಲಿ ಹಣ ಸಂಪತ್ತು ಆರೋಗ್ಯಕ್ಕೆ ಸುಖ ಶಾಂತಿ ನೆಮ್ಮದಿ ಗೆ ಕೊರತೆ ಅನ್ನುವುದೇ ಇರುವುದಿಲ್ಲ. ಮುಖ್ಯವಾಗಿ ಅವರ ಮನೆಯಲ್ಲಿ ಕಾಯಿಲೆಗಳಿಗೆ ಜಾಗವೇ ಇರುವುದಿಲ್ಲ.
ಏಕೆಂದ್ರೆ ಇದರಲ್ಲಿ ಬಹಳಷ್ಟು ಆರೋಗ್ಯಕರ ಗುಣಗಳು ಇವೆ. ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಮಾತ್ರವಲ್ಲದೆ ಅನೇಕ ಭಯಾನಕ ಕಾಯಿಲೆಗಳನ್ನು ಗುಣಪಡಿಸಲು ಶಕ್ತಿಯನ್ನು ಹೊಂದಿದೆ ಈ ತುಳಸಿ ಗಿಡ ಅಷ್ಟೇ ಅಲ್ಲದೇ, ಇದನ್ನು ಚಿಕ್ಕ ಕಂದಮ್ಮ ನಿಂದ ಹಿಡಿದು ಅಜ್ಜಂದಿರ ವರೆಗೆ ಉಪಯೋಗಿಸಬಹುದು. ಸಾವಿರಾರು ವರ್ಷಗಳ ಇತಿಹಾಸವಿದೆ ಹಾಗೂ ಇದನ್ನು ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ದಳಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಆಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ತುಳಸಿ ಗಿಡ ಅನೇಕ ಬಗೆಯ ಆರೋಗ್ಯಕರ ಗುಣಲಕ್ಷಣಗಳನ್ನು ಹೊಂದಿದೆ ಎಂದು. ಹೌದು ಇದರಲ್ಲಿ ಇರುವ ಪೋಷಕಾಂಶಗಳು ಯಾವುವು ಅಂತ ಹೇಳುವುದಾದರೆ, ವಿಟಮಿನ್ ಎ ಕೆ ಕ್ಯಾಲ್ಸಿಯಂ ಐರನ್ ಮ್ಯಾಗ್ನಿಶಿಯಂ ಕೆರೋಟಿನ್ ಅಂಶಗಳು ಹೇರಳವಾಗಿವೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ದಳಗಳನ್ನು ತಿನ್ನುವಿದರಿಂದ ದೇಹದಲ್ಲಿ ರೋಗ ನಿರೋಧಕ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ. ಇದ್ದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ಅನೇಕ ಸೋಂಕು ಗಳಿಂದ ನಮ್ಮನ್ನು ಕಾಪಾಡುತ್ತದೆ ಮತ್ತು ಸಕ್ಕರೆ ಕಾಯಿಲೆ ಇದ್ದವರಿಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

 

ಇನ್ನೂ ಮುಖ್ಯವಾದ ವಿಷಯ ಎಂದರೆ ತುಳಸಿ ದಳಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಮತ್ತು ದೇಹದಲ್ಲಿ ಪಿಹೆಚ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಆಮ್ಲೀಯತೆ ಅನ್ನು ಹೆಚ್ಚಿಸುತ್ತದೆ. ಇನ್ನೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಬಾಯಿಯಿಂದ ಬರುವ ದುರ್ವಾಸನೆಯನ್ನು ಮತ್ತು ಇನ್ನಿತರ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲದೇ ಜೀರ್ಣ ಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಇನ್ನೂ ತುಳಸಿ ದಳಗಳನ್ನು ತಂದು ತೊಳೆದು ಅದನ್ನು ನೀರಿನಲ್ಲಿ ಹಾಕಿ ಕುದಿಸಬೇಕು ಅಥವಾ ಹಾಗೆ ಜಗಿದು ತಿನ್ನಬೇಕು. ಬಳಿಕ ಎರಡು ಲೋಟ ನೀರು ಕುಡಿಯಿರಿ. ಆಮೇಲೆ ಇದನ್ನು ತಿಂದ ನಂತರ ಮೂವತ್ತು ನಿಮಿಷಗಳ ಕಾಲ ಏನನ್ನೂ ಸೇವನೆ ಮಾಡಬೇಡಿ. ಇದನ್ನು ಟೀ ಅಂದರೆ ಕುದಿಸಿ ಟೀ ಮಾಡಿಕೊಂಡು ಕೂಡ ಕುಡಿಯಬಹುದು.
ಶುಭದಿನ.

Leave a Reply

Your email address will not be published. Required fields are marked *