ಬೆಳಿಗ್ಗೆ ಎದ್ದು ತಕ್ಷಣ ಏನಾದರೂ ಸೇವನೆ ಮಾಡುವ ಮುನ್ನ ಎರಡು ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡಿದರೆ ಸಾಕು ಏನಾಗುತ್ತದೆ ಅಂತ ಗೊತ್ತೇ?

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ದಪ್ಪಗಾಗಲೂ ಜನರು ಏನೇನೋ ಹರಸಾಹಸ ಮಾಡುತ್ತಾರೆಯೋ ಅಷ್ಟೇ ಸಣ್ಣಗೆ ಆಗಲು ಕೂಡ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಸಣ್ಣಗಾಗುವುದು 100% ನಿಜ ಮಿತ್ರರೇ. ಅದು ಹೇಗೆ ಅಂತೀರಾ. ಮುಂದೆ ಓದಿ ತಿಳಿದುಕೊಳ್ಳಿ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಲಾಭಗಳು ಉಂಟಾಗುತ್ತವೆ. ಅವುಗಳು ಯಾವುದು ಅಂತ ಒಂದೊಂದಾಗಿ ತಿಳಿಯೋಣ. ಭಾರತೀಯ ಅಡುಗೆ ಮನೆಯಲ್ಲಿ ಬಳಸಬಹುದಾದ ಅದ್ಭುತವಾದ ವಸ್ತು ಅಂದರೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದು ತಕ್ಷಣ ಏನಾದರೂ ಸೇವನೆ ಮಾಡುವ ಮುನ್ನ ಎರಡು ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡಿದರೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತದೆ ಈ ಬೆಳ್ಳುಳ್ಳಿ. ಹಾಗೂ ಇದು ಬಹಳ ಗಾಢವಾದ ವಾಸನೆಯನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಆಂಟಿ ಬಯೋಟಿಕ್ ಆಂಟಿ ಆಕ್ಸಿಡೆಂಟ್ ಗುಣಗಳು ಸೂಕ್ಷ್ಮಾಣು ಜೀವಿಗಳನ್ನು ನಾಶ ಪಡಿಸುವ ಆಂಟಿ ಮೈಕ್ರೋವಿಲ್ ಗುಣಗಳನ್ನು ಹೊಂದಿವೆ. ಮತ್ತು ಬ್ಯಾಕ್ಟೀರಿಯಾ ನಂಜು ನಿರೋಧಕ ಗುಣಗಳನ್ನು ಹೊಂದಿದೆ.

 

ಇನ್ನೂ ಮುಖ್ಯವಾಗಿ ನಮ್ಮ ದೇಶದಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿ ರೋಗದಿಂದ ಲಕ್ಷಗಟ್ಟಲೆ ಜನರು ಸಾಯುತ್ತಿದ್ದಾರೆ. ಹೀಗಾಗಿ ಕ್ಯಾನ್ಸರ್ ರೋಗಿಗಳು ಮಾತ್ರವಲ್ಲದೆ ಮುಂದೆ ಕ್ಯಾನ್ಸರ್ ಬಾರದಂತೆ ಮತ್ತು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ಮಾಡಲು ಈ ಬೆಳ್ಳುಳ್ಳಿ ಬಹಳ ಸಹಾಯ ಮಾಡುತ್ತದೆ ಆದ ಕಾರಣದಿಂದ ನೀವು ಬೆಳ್ಳುಳ್ಳಿಯ ಎಸಳುಗಳನ್ನು ನಿತ್ಯವೂ ಒಂದೆರಡು ಸೇವನೆ ಮಾಡುತ್ತಾ ಬರುವುದು ಒಳ್ಳೆಯದು. ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಿಂದ ಬಹಳ ಹಿತಕರ. ಹೃದ್ರೋಗದ ಸಮಸ್ಯೆ ಹೃದಯಾಘಾತ ದ ಸಮಸ್ಯೆ ಕ್ಯಾನ್ಸರ್ ಮತ್ತು ಇನ್ನಿತರ ಸೋಂಕು ಗಳಿಂದ ನಮ್ಮನ್ನು ಕಾಪಾಡುತ್ತದೆ. ಇನ್ನೂ ಮೇಲೆ ಹೇಳಿದ ಹಾಗೆ ಬೆಳಿಗ್ಗೆ ಎದ್ದು ತಕ್ಷಣ ಏನಾದರೂ ಸೇವನೆ ಮಾಡುವ ಮುನ್ನ ಎರಡು ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡಿದರೆ ಮೂರು ಪ್ರಮುಖವಾದ ಪ್ರಯೋಜನಗಳು ಆಗುತ್ತವೆ. ಅವುಗಳು ಯಾವುದು ಅಂದರೆ, ಮೊದಲನೆಯದು ಮಧುಮೇಹ ನಿಯಂತ್ರಣ. ವಿಶ್ವದಾದ್ಯಂತ ಮಧುಮೇಹ ಕಾಯಿಲೆ ಹರಡುತ್ತಿದೆ. ಕಾರಣ ಆಹಾರ ಪದ್ಧತಿಯಲ್ಲಿ ಬದಲಾವಣೆ ಜೀವನದಲ್ಲಿ ಶೈಲಿಯಲ್ಲಿ ಬದಲಾವಣೆ ಕೆಲಸದ ಒತ್ತಡದಿಂದಾಗಿ ಹೀಗೆ ಅನೇಕ ಕಾರಣಗಳಿವೆ.

 

ನಾವು ಸೇವನೆ ಮಾಡುವ ಆಹಾರ ನಮ್ಮ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದಕ್ಕೆ ಸುಲಭವಾದ ಪರಿಹಾರ ಅಂದರೆ ಬೆಳ್ಳುಳ್ಳಿ. ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟವನ್ನು 5% ಹಾಗೂ 5% ಗ್ಲೂಕೋಸ್ ಮಟ್ಟವನ್ನು ತಗ್ಗಿಸುತ್ತದೆ ಅಂತ ಸಂಶೋಧನೆಗಳು ತಿಳಿಸಿವೆ. ಹೀಗಾಗಿ ಟೈಪ್ 2 ಡಯಾಬಿಟೀಸ್ ಅನ್ನು ನೀವು ಎರಡು ತಿಂಗಳಿನಲ್ಲಿ ಹೊಡೆದೋಡಿಸಬಹುದು. ಎರಡನೆಯದು ಬಲಶಾಲಿ ಮೆದುಳು ಸ್ಮಾರ್ಟ್ ಬ್ರೈನ್. ಆಮ್ಲಜನಕ ದ ಮೂಲಕ ವಿಷಕಾರಿ ಅಂಶಗಳು ಮೆದುಳಿಗೆ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮೆದುಳನ್ನು ಸ್ವಚ್ಛವಾಗಿ ಮಾಡಲು ನಿತ್ಯವೂ ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡಿ.
ನಂತರ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಹೌದು ನಿತ್ಯವೂ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ದೇಹದ ಯಾವ ಭಾಗದಲ್ಲಿ ಕೊಬ್ಬು ಶೇಖರಣೆ ಆಗಿದೆ ಎಂದು ಪತ್ತೆ ಮಾಡಿ ಅದನ್ನು ಕರಗಿಸಲು ಬೆಳ್ಳುಳ್ಳಿ ಎಸಳು ಸಹಾಯ ಮಾಡುತ್ತದೆ. ಮತ್ತು ಸರಿಯಾದ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಿಂದ ಆರೋಗ್ಯವೂ ಚೆನ್ನಾಗಿದ್ದು ಕೆಟ್ಟ ಪದಾರ್ಥಗಳು ಜೀವಾಣುಗಳು ಬರದಂತೆ ತಡೆಯಬಹುದು ಈ ಬೆಳ್ಳುಳ್ಳಿ ಸೇವನೆ ಇಂದ. ಒಮ್ಮೆ ಟ್ರೈ ಮಾಡಿ ಶುಭದಿನ.

Leave a Reply

Your email address will not be published. Required fields are marked *