ಇಂತಹ ಅನಾರೋಗ್ಯದ ಸಮಸ್ಯೆಗಳು ನಿಮ್ಮಲ್ಲಿ ಇದ್ದರೆ ಅಪ್ಪಿ ತಪ್ಪಿಯೂ ಬದನೆ ಕಾಯಿಯನ್ನು ತಿನ್ನಬೇಡಿ. ಇಲ್ಲವಾದರೆ ಸಮಸ್ಯೆಗಳ ಸುರಿಮಳೆ ಆಗುತ್ತದೆ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬದನೆ ಕಾಯಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬದನೆ ಕಾಯಿ ಕೆಲವರಿಗೆ ಇಷ್ಟವಾದರೆ ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ. ಬದನೆ ಕಾಯಿ ಪಲ್ಯ ಸಾಂಬಾರ್ ಮಾಡಿದರೆ ಅದರ ರುಚಿಗೆ ಫಿದಾ ಆಗದೇ ಇರುವವರಿಲ್ಲ. ಏಕೆಂದ್ರೆ ಇದರಲ್ಲಿ ಇರುವ ಅದ್ಭುತವಾದ ಗುಣಗಳೇ ಅಂತಹದ್ದು. ಇದರಲ್ಲಿ ಅನೇಕ ವಿಧವಾದ ಪೋಷಕಾಂಶಗಳು ಖನಿಜಗಳು ಲವಣಗಳು ನಾರಿನ ಅಂಶ ಹೇರಳವಾಗಿವೆ. ಬದನೆ ಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ನಿಮಗೆ ಗೊತ್ತೇ ಕೆಲವು ಅನಾರೋಗ್ಯದ ಸಮಸ್ಯೆಗಳು ಇದ್ದಾಗ ನಾವು ಬದನೆ ಕಾಯಿಯನ್ನು ತ್ಯಜಿಸಬೇಕಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವೆಲ್ಲ ಅನಾರೋಗ್ಯದ ಸಮಸ್ಯೆಗಳು ಇದ್ದವರು ಈ ಬದನೆಕಾಯಿ ಅನ್ನು ತಿನ್ನಬಾರದು ಅಂತ ನಾವು ತಿಳಿಸಿ ಕೊಡುತ್ತೇವೆ ಬನ್ನಿ.

 

ಸಾಮಾನ್ಯವಾಗಿ ನೀವು ಗಮನಿಸಿರಬಹುದು ಅಥವಾ ನಿಮಗೆ ಈ ಬಗೆ ಅನುಭವ ಕೂಡ ಆಗಿರಬಹುದು. ಅದುವೇ ಆಯುರ್ವೇದದಲ್ಲಿ ನೀವು ಮಾತ್ರೆಗಳನ್ನು ಅಥವಾ ಚಿಕಿತ್ಸೆ ಪಡೆಯುತ್ತಿದ್ದಾರೆ ವೈದ್ಯರು ನಿಮಗೆ ಪತ್ತೆ ಮಾಡಲು ಹೇಳಿದಾಗ ಅದರಲ್ಲಿ ಬದನೆ ಕಾಯಿ ಕೂಡ ಸೇವನೆ ಮಾಡಬೇಡಿ ಅಂತ ಅಚ್ಚು ಕಟ್ಟಾಗಿ ಕ್ಲಿಯರ್ ಆಗಿ ಹೇಳಿರುತ್ತಾರೆ. ಇದಕ್ಕೆ ಕಾರಣವಿದೆ ಗೆಳೆಯರೇ. ಹೀಗಾಗಿ ಬದನೆ ಕಾಯಿ ಎಲ್ಲರಿಗೂ ಸೂಕ್ತವಿದೆ ಅಂತ ಹೇಳಲು ಸಾಧ್ಯವಿಲ್ಲ ಗೆಳೆಯರೇ. ಅಪ್ಪಿ ತಪ್ಪಿ ನೀವು ಕೆಲವೊಂದು ಬಾರಿ ಬದನೆ ಕಾಯಿ ಸೇವನೆ ಮಾಡಿದರೆ ತೊಂದರೆ ಆಗುವುದಿಲ್ಲ. ಆದರೆ ನಿಮಗೆ ಅನಾರೋಗ್ಯದ ಸಮಸ್ಯೆಗಳು ಇದ್ದರೆ ಅದರಲ್ಲಿ ಚರ್ಮದ ಅಥವಾ ಚರ್ಮ ವ್ಯಾಧಿ ಸಮಸ್ಯೆಗಳು ಇದ್ದರೆ ಬದನೆ ಕಾಯಿ ಸೇವನೆ ಮಾಡಬೇಡಿ. ಇದರಿಂದ ಚರ್ಮದಲ್ಲಿ ತುರಿಕೆ ಶುರು ಆಗುತ್ತದೆ. ಹೀಗಾಗಿ ಚರ್ಮದಲ್ಲಿ ತುರಿಕೆ ಗಾಯ ಕೆಂಪು ಕೆಂಪು ಆಗುವುದು ಸೋರಿಯಾಸಿಸ್ ಕಾಯಿಲೆ ಇದ್ದವರು ಖಂಡಿತವಾಗಿ ಬದನೆ ಕಾಯಿ ತಿನ್ನುವುದನ್ನು ಬಿಟ್ಟು ಬಿಡಿ.

 

ಇನ್ನೂ ಮುಖ್ಯವಾಗಿ ಗರ್ಭಿಣಿಯರು ಬದನೆ ಕಾಯಿ ಸೇವನೆ ಮಾಡಬೇಡಿ. ಏಕೆಂದರೆ ಇದರಲ್ಲಿ ಮೂತ್ರ ವರ್ಧಕ ಗುಣಗಳು ಇರುವುದರಿಂದ ಮಹಿಳೆಯರಲ್ಲಿ ಋತುಸ್ರಾವ ವನ್ನು ಹೆಚ್ಚಿಸುವ ಗುಣವನ್ನೂ ಹೊಂದಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಬದನೆ ಕಾಯಿಯನ್ನು ತಿನ್ನಬೇಡಿ. ಮತ್ತು ಹೊಟ್ಟೆಯ ಕರುಳಿನ ಭಾಗದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಅದಕ್ಕಾಗಿ ಗರ್ಭಿಣಿ ಮಹಿಳೆಯರು ಬದನೆಕಾಯಿ ತ್ಯಜಿಸಿ. ಇನ್ನೂ ನೀವು ಮಾನಸಿಕ ಕಾಯಿಲೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಖಿನ್ನತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಬದನೆ ಕಾಯಿಯಿಂದ ದೂರ ಇರುವುದು ಬಹಳ ಒಳ್ಳೆಯದು. ಬದನೆ ಕಾಯಿ ಮಾತ್ರೆಗಳ ಅಭಾವ ಮತ್ತು ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ನೀವು ಖಿನ್ನತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಬದನೆ ಕಾಯಿ ಸೇವನೆ ಮಾಡಲು ಮುಂದಾಗಬೇಡಿ. ಇನ್ನೂ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳು ಇದ್ದರೆ ಕೂಡ ಬದನೆ ಕಾಯಿಯನ್ನು ತಿನ್ನಬೇಡಿ. ಇಲ್ಲವಾದರೆ ವಾಂತಿ ವಾಕರಿಕೆ ತಲೆನೋವು ಸಮಸ್ಯೆಗಳು ಶುರು ಆಗುತ್ತದೆ. ಅಷ್ಟೇ ಅಲ್ಲದೇ ಬದನೆ ಕಾಯಿ ತಿನ್ನುವುದರಿಂದ ಮೈ ಕೆರೆತ ಶುರು ಆಗುತ್ತದೆ ಗಂಟಲಿನಲ್ಲಿ ಕಿರಿಕಿರಿ ಆಗುತ್ತದೆ ಗಂಟಲು ಊದಿಕೊಳ್ಳಲು ಬದನೆ ಕಾಯಿ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳು ನೀವು ಅನುಭವಿಸುತ್ತಿದ್ದರೆ ಖಂಡಿತವಾಗಿ ಬದನೆ ಕಾಯಿ ಸೇವನೆ ಮಾಡದೇ ಇರುವುದು ಬಹಳ ಒಳ್ಳೆಯದು. ಶುಭದಿನ.

Leave a Reply

Your email address will not be published. Required fields are marked *