ಇಂದಿನ ದಿನ ಭವಿಷ್ಯ, ಸೆಪ್ಟೆಂಬರ್ 8, 2022.

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭಕೃತ್ ನಾಮ ಸಂವತ್ಸರ ದಕ್ಷಿನಾಯಿನೆ ಭಾದ್ರಪದ ಮಾಸೆ ಶುಕ್ಲ ಪಕ್ಷ ಇಂದು ಸೆಪ್ಟೆಂಬರ್ 8 ನೇ ತಾರೀಕು. ಇಂದಿನ ಎಲ್ಲಾ ರಾಶಿಗಳ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೇಷ ರಾಶಿ ಗೆ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮ ಕಾರ್ಯಕ್ಷೇತ್ರದ ಯಶಸ್ಸಿನಿಂದ ಪ್ರಾಪ್ತಿ ಆಗುತ್ತೆ. ಬಹಳ ಸಂತೋಷವಾಗಿ ಆನನಂದವಾಗಿ ಶಾಂತಿದಾಯಕವಾಗಿ ಎಲ್ಲಾ ಕೆಲಸಗಳನ್ನೂ ನಿಭಾಯಿಸಿ ಜಯವನ್ನು ಸಾಧಿಸುತ್ತೀರಿ. ವೃಷಭ ರಾಶಿಯವರಿಗೆ ರ್ದೊಡ್ಡವದ ಆಶೀರ್ವಾದದಿಂದ ಈ ನೆಮ್ಮದಿ ಎರಡರಷ್ಟು ಮೂರರಷ್ಟು ಹೆಚ್ಚಾಗುತ್ತೆ. ಮಿಥುನ ರಾಶಿಯವರಿಗೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಕಡಿಮೆ ಏನೋ ಅನ್ನೋ ರೀತಿ ಭಾಸವಾಗುತ್ತದೆ. ಆದ್ರೂ ಕೂಡ ನಿಮ್ಮ ಭಾವನೆಗಳಿಂದ ನಿಮಗೆ ಸಮಾಧಾನ ಖಂಡಿತವಾಗಿ ಪ್ರಾಪ್ತಿ ಆಗುತ್ತೆ. ಕರ್ಕಾಟಕ ರಾಶಿಯವರಿಗೆ ಇವತ್ತು ಮನಸ್ಸಿಗೆ ನೆಮ್ಮದಿ ತುಂಬಾ ಸಿಗುತ್ತೆ ಆದ್ರೆ ಬೇರೆಯವರಿಗೆ ಸಹಕರಿಸಬೇಕು ಹಾಗೆ ಸದ್ಭಾವನೆ ಇಂದ ನೋಡಬೇಕು ಬೇರೆಯವರ ಮೂಲಕ ನಿಮಗೆ ಇವತ್ತು ನೆಮ್ಮದಿ ಪ್ರಾಪ್ತಿ ಆಗುತ್ತೆ. ಭಾವಕಥೆ ತುಂಬಾ ಚೆನ್ನಾಗಿ ಇರುತ್ತೆ ಆದರಿಂದ ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಹಾಗೂ ದಾಂಪತ್ಯದಲ್ಲಿ ನೆಮ್ಮದಿ.

 

ಸಿಂಹ ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ ನಿಮ್ಮ ಸಾಮಾಜಿಕ ವಾತಾವರಣದಲ್ಲಿ ಬಹಳ ಹುರುಪು ಇರುತ್ತೆ ಹಾಗೂ ಎಲ್ಲಾ ಕಡೆ ಜಯವನ್ನು ಸಾಧಿಸುತ್ತಾ ಇರುವುದರಿಂದ ಬೇರೆಯವರಿಂದ ನಿಮಗೆ ಹೆಚ್ಚು ತೊಂದರೆ ಆಗುವುದಿಲ್ಲ. ಕನ್ಯಾ ರಾಶಿಗೆ ಬಹಳ ಒಳ್ಳೆಯ ದಿನ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಹಾಗೂ ದಾಂಪತ್ಯದಲ್ಲಿ ಯಶಸ್ಸು ಹಾಗೂ ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ನಿಮ್ಮ ಕ್ರಿಯಾಶೀಲತೆ ಇಡೀ ತಿಂಗಳಲ್ಲಿ ಹೆಚ್ಚಾಗಿ ಇರುವುದರಿಂದ ಬಹಳ ಒಳ್ಳೆಯ ಕೆಲಸಗಳನ್ನು ಸಾಧಿಸುತ್ತೀರಿ ಮತ್ತು ಕಾರ್ಯಕ್ಷಮತೆ ತುಂಬಾ ಚೆನ್ನಾಗಿರುತ್ತೆ. ತುಲಾ ರಾಶಿಗೆ ಮನಸ್ಸಿಗೆ ನೆಮ್ಮದಿ ಮತ್ತು ನಿಮಗೆ ಹೆಚ್ಚು ಕೆಲಸ ಮಾಡುವುದರಿಂದ ಬರುತ್ತೆ. ಮತ್ತೆ ಇವತ್ತು ಸ್ವಲ್ಪ ಸ್ಟ್ರೆಸ್ ಫುಲ್ ಡೇ ಆಗಿರುತ್ತೆ. ಹಾಗಾಗಿ ಒತ್ತಡಗಳು ಹೆಚ್ಚಿರುವುದರಿಂದ ಮನೆ ಹಾಗೂ ಕುಟುಂಬವನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡಬೇಕಾಗಿ ಬರುತ್ತದೆ. ವೃಶ್ಚಿಕ ರಾಶಿಗೆ ಇವತ್ತು ಮನಸ್ಸಿಗೆ ನೆಮ್ಮದಿ ತುಂಬಾ ಇರುತ್ತೆ. ಮತ್ತೆ ಎಲ್ಲಾ ವಿಷಯಗಳಲ್ಲಿ ಜಯ ಪ್ರಾಪ್ತಿ ಆಗುತ್ತೆ. ನಿಮ್ಮ ಪರಾಕ್ರಮದಿಂದ ಅನೇಕ ಕೆಲಸಗಳನ್ನು ಸಾಧಿಸುತ್ತೀರಿ. ಅಕ್ಕ ತಂಗಿ ಅನ್ನ ತಮ್ಮಂದಿರಿಂದ ನೆಮ್ಮದಿ ಪ್ರಾಪ್ತಿ ಆಗುತ್ತೆ.

 

ಧನಸ್ಸು ರಾಶಿಗೆ ಇವತ್ತು ಮನೆಯಲ್ಲಿ ಇರಬೇಕಾದ ದಿನ. ಸಂಸಾರದ ನೆಮ್ಮದಿ ಮನೆಯವರಿಂದ ಇವತ್ತು ನಿಮಗೆ ಪ್ರಾಪ್ತಿ ಆಗೋದಿದೆ. ಇಡೀ ತಿಂಗಳು ಮನೆಯವರ ಜೊತೆ ಕಳೆಯಲು ಇದು ಒಳ್ಳೆಯ ಸಮಯ ಆಗಿರುವುದರಿಂದ ಮನೆಯಲ್ಲಿ ಇದ್ದುಬಿಡಿ. ಮಕರ ರಾಶಿಗೆ ಇಂದು ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ವಿಶೇಷವಾದ ಆನಂದ ಮತ್ತು ನೆಮ್ಮದಿ ಕೊಡುತ್ತಾ ಇರುತ್ತಾನೆ. ಇದರಿಂದ ನೀವು ಬೇರೆಯವರಿಗೆ ಸಹ ನೆಮ್ಮದಿ ತಂದು ಕೊಡಲು ಶಕ್ಯ ಆಗುತ್ತೆ. ಆದ್ದರಿಂದ ನಿಮ್ಮ ಶಾಂತಿಯನ್ನು ಇಂದು ಕಾಪಾಡಿಕೊಳ್ಳಿ. ಕುಂಭ ರಾಶಿಗೆ ಇವತ್ತು ಸ್ವಲ್ಪ ನೆಮ್ಮದಿ ಕಡಿಮೆ ಆಯಿತೇನೋ ಎಂದು ಭಾಸ ಆಗುವಂಥ ದಿನ. ಪ್ರಾಣಾಯಾಮ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವುದು ಒಳ್ಳೆಯ. ಮೀನ ರಾಶಿಗೆ ಇಂದು ಒಳ್ಳೆಯ ದಿನ ಅತಿ ಹೆಚ್ಚಿನ ನೆಮ್ಮದಿ ನಿಮ್ಮ ಮಿತ್ರರಿಂದ ಮತ್ತು ಗುಂಪುಗಳಿಂದ ಪ್ರಾಪ್ತಿ ಆಗುತ್ತೆ. ಮತ್ತು ಅನೇಕರಿಗೆ ಧನಾಗಮನ ಕೂಡ ಪ್ರಾಪ್ತಿ ಆಗುತ್ತೆ ಬಹಳ ಒಳ್ಳೆಯ ದಿನ. ಇಷ್ಟಾರ್ಥ ಸಿದ್ಧಿ ಆಗುತ್ತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *