ಬೇಸಿಗೆಯಲ್ಲಿ ಇಂತಹ ಪಾನೀಯಗಳನ್ನು ಸೇವನೆ ಮಾಡಿದರೆ ಸಾಕು ಸಕ್ಕರೆ ಕಾಯಿಲೆ ಬರುವುದಿಲ್ಲ. ಜೊತೆಗೆ ದೇಹವು ನಿರ್ಜಲೀಕರಣ ಆಗುವುದಿಲ್ಲ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ಕಾಯಿಲೆ ಪ್ರತಿಯೊಬ್ಬರ ಮನೆಯಲ್ಲೂ ಅಡಗಿಕೊಂಡಿದೆ. ಅಷ್ಟೇ ಅಲ್ಲದೇ ಮಧುಮೇಹಿ ರೋಗಿಗಳು ತಮ್ಮ ಆಹಾರದ ಮೇಲೆ ಎಷ್ಟೊಂದು ಗಮನವನ್ನು ಹರಿಸುತ್ತಾರೆಯೋ ಅಷ್ಟು ಒಳ್ಳೆಯದು. ಹಾಗೂ ಶುಗರ್ ಹೊಂದಿರುವ ರೋಗಿಗಳು ಕೆಲವು ಆಹಾರವನ್ನು ಅಚ್ಚು ಕಟ್ಟಾಗಿ ನಿಯಮಿತವಾಗಿ ಸೇವನೆ ಮಾಡಿದರೆ ಇನ್ನೂ ಕೆಲವು ಆಹಾರವನ್ನು ಸಂಪೂರ್ಣವಾಗಿ ಮರೆತು ಬಿಡಬೇಕಾಗುತ್ತದೆ. ಎಣ್ಣೆ ಪದಾರ್ಥಗಳಿಂದ ದೂರವಿರಬೇಕು. ಮತ್ತು ವೈದ್ಯರು ಹೇಳಿರುವ ಆಹಾರ ಪದ್ಧತಿಯನ್ನು ಹಾಗೂ ಮಾತ್ರೆಯನ್ನು ತಿನ್ನುತ್ತಾ ಜೀವನವನ್ನು ಕಳೆಯಬೇಕಾದ ಪರಿಸ್ಥಿತಿ ಬರುತ್ತದೆ. ಅದಕ್ಕಾಗಿ ವ್ಯಾಯಾಮ ಯೋಗ ಮತ್ತು ಊಟವಾದ ಮೇಲೆ ಕನಿಷ್ಠ ಅರ್ಧ ಗಂಟೆ ನಡೆಯುವ ಅಭ್ಯಾಸವನ್ನು ರೂಢಿ ಮಾಡಿಕೊಂಡರೆ ಸಕ್ಕರೆ ಕಾಯಿಲೆ ಬರುವುದು ಕಡಿಮೆ ಆಗುತ್ತದೆ.
ಈ ಬೇಸಿಗೆ ಕಾಲದಲ್ಲಿ ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನೀರು ಹೆಚ್ಚಾಗಿ ಕುಡಿಯಬೇಕು. ಜೊತೆಗೆ ನೀರಿನಾಂಶ ಇರುವ ಹಣ್ಣುಗಳನ್ನು ಆಹಾರವನ್ನು ಸೇವನೆ ಮಾಡಬೇಕು.

 

ಇಂದಿನ ಲೇಖನದಲ್ಲಿ ನಾವು ನಿಮಗೆ ಮಧುಮೇಹಿ ಗಳು ಯಾವೆಲ್ಲ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಇವುಗಳನ್ನು ನೀವು ಸೇವನೆ ಮಾಡಿದರೆ ಸಾಕು ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೊದಲನೆಯದು ದಾಳಿಂಬೆ ಜ್ಯೂಸ್. ಇದು ಬೆಲೆಯಲ್ಲಿ ದುಬಾರಿ ಆದರೂ ಕೂಡ ಆರೋಗ್ಯದ ದೃಷ್ಟಿಯಿಂದ ಬಹಳ ಹಿತಕರ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಇದಕ್ಕೆ ಕಾರಣ ಇದರಲ್ಲಿ ಇರುವ ವಿಟಮಿನ್ಸ್ ಖನಿಜಗಳು ನಾರಿನಾಂಶ ಹೇರಳವಾಗಿ ದೊರೆಯುತ್ತದೆ. ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಬಹಳಷ್ಟು ಲಾಭಗಳು ಉಂಟಾಗುತ್ತವೆ. ಇದರಲ್ಲಿ ಸಕ್ಕರೆಯನ್ನು ಹಾಕದೇ ಹಾಗೆ ಕುಡಿಯಬೇಕು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ದಾಳಿಂಬೆ ಜ್ಯೂಸ್ ಅದ್ಭುತವಾದ ಪಾನೀಯವಾಗಿದೆ ಅಂತ ಹೇಳಬಹುದು. ಹೀಗಾಗಿ ದಾಳಿಂಬೆ ಜ್ಯೂಸ್ ನಿಯಮಿತವಾಗಿ ಕುಡಿಯುತ್ತಾ ಬಂದರೆ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಎರಡನೆಯದು, ಬೆಳಿಗ್ಗೆ ಎದ್ದು ತಕ್ಷಣ ಎರಡು ಲೋಟ ನೀರು ಕುಡಿಯಬೇಕು.

 

ಅದರಲ್ಲೂ ಮಧುಮೇಹಿ ಗಳು ಎಷ್ಟು ನೀರನ್ನು ಕುಡಿಯುತ್ತಾರೆ ಅಷ್ಟು ಒಳ್ಳೆಯದಾಗುತ್ತದೆ. ಮತ್ತೆ ಮುಖ್ಯವಾಗಿ ದೇಹವು ನಿರ್ಜಲೀಕರಣ ಆಗುವುದು ತಪ್ಪುತ್ತದೆ. ಅಥವಾ ನೀರಿನಲ್ಲಿ ಸ್ವಲ್ಪ ನಿಂಬೆ ರಸ ಪುದೀನಾ ಹಾಕಿಕೊಂಡು ಕುಡಿದರೆ ಇನ್ನೂ ಅದ್ಭುತ. ಇನ್ನೂ ತಜ್ಞರ ಪ್ರಕಾರ ಸಿಟ್ರಿಕ್ ಅಂಶವನ್ನು ಹೊಂದಿರುವ ಹಾಗೂ ಸಿಹಿ ಹುಳಿ ಮಿಶ್ರಣವನ್ನು ಹೊಂದಿರುವ ಕಿತ್ತಳೆ ಹಣ್ಣು ಹಲವಾರು ಅನಾರೋಗ್ಯದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವ ಕಾರಣ ಹಾಗೂ ನೈಸರ್ಗಿಕವಾಗಿ ಸಕ್ಕರೆ ಅಂಶ ಇರುವುದರಿಂದ ಇದು ಮಧುಮೇಹಿಗಳಿಗೆ ರಾಮಬಾಣ ಇದ್ದಂತೆ. ಇದರ ಜ್ಯೂಸ್ ಮಾಡಿಕೊಂಡು ಹಾಗೆಯೇ ಸಕ್ಕರೆಯನ್ನು ಹಾಕದೆ ಕುಡಿಯಿರಿ. ಇನ್ನೂ ಟೊಮ್ಯಾಟೋ ಹಣ್ಣಿನ ಜ್ಯೂಸ್ ಕೂಡ ಮಧುಮೇಹಿಗಳು ಕುಡಿಯಬಹುದು. ಹೌದು ಈ ಟೊಮ್ಯಾಟೋ ಹಣ್ಣು ಕೇವಲ ಸಾಂಬಾರ್ ಮಾಡಲು ಮಾತ್ರವಲ್ಲದೆ ಇದರ ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಜೊತೆಗೆ ರಕ್ತಹೀನತೆ ಸಮಸ್ಯೆಯಿಂದ ಪಾರು ಮಾಡಲು ಸಹಾಯ ಮಾಡುತ್ತದೆ. ಮತ್ತು ರಕ್ತ ಹೆಪ್ಪುಗಟ್ಟುವಿಕೆ ಯನ್ನೂ ತಡೆಯುತ್ತದೆ.ಇನ್ನೂ ಕೊನೆಯದಾಗಿ ಹಾಗಲ ಕಾಯಿ ಜ್ಯೂಸ್. ಇದು ರುಚಿಯಲ್ಲಿ ಕಹಿ ಆಗಿರುವ ಒಂದೇ ಒಂದು ಕಾರಣದಿಂದ ಇದನ್ನು ನೋಡಿದರೆ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ ಇದು ಡಯಾಬಿಟೀಸ್ ರೋಗಿಗಳಿಗೆ ಒಂದು ದಿವ್ಯ ಔಷಧ ಅಂತ ಹೇಳಬಹುದು. ಹೀಗಾಗಿ ನೀವು ಪ್ರತಿ ನಿತ್ಯವೂ ಎರಡು ಬಾರಿ ಹಾಗಲ ಕಾಯಿ ಜ್ಯೂಸ್ ಕುಡಿಯುವುದು ಬಹಳ ಸೂಕ್ತ.

Leave a Reply

Your email address will not be published. Required fields are marked *