ಬೇಸಿಗೆ ಕಾಲದಲ್ಲಿ ಕರ್ಭೂಜ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಉಂಟಾಗುತ್ತವೆ ಗೊತ್ತೇ? ಇಲ್ಲಿದೆ ನೋಡಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಸ್ನೇಹಿತರೆ, ಬೇಸಿಗೆ ಕಾಲದಲ್ಲಿ ನಮಗೆ ಹೆಚ್ಚಾಗಿ ತಂಪಾದ ಪಾನೀಯಗಳು ಹಣ್ಣುಗಳು ನೆನಪಿಗೆ ಬರುತ್ತವೆ. ಅದರಲ್ಲಿ ಕರ್ಭೂಜ ಹಣ್ಣು ಅಂತ ಹೇಳಬಹುದು. ಬೇಸಿಗೆ ಕಾಲದಲ್ಲಿ ಕೇವಲ ಶಾಖವನ್ನು ತಣಿಸುವುದರ ಜೊತೆಗೆ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ. ಬೇಸಿಗೆ ಕಾಲದಲ್ಲಿ ನಾವು ಸ್ವಲ್ಪ ಕೆಲಸವನ್ನು ಮಾಡಿದರು ನಡೆದರೂ ಕೂಡ ಬಾಯಾರಿಕೆ ಸುಸ್ತು ದಣಿವು ಆಗುತ್ತದೆ. ಆದರೆ ಈ ಕರ್ಭೂಜ ಹಣ್ಣು ತಿನ್ನುವುದರಿಂದ ಆಯಾಸವನ್ನು ನೀಗಿಸುವುದರ ಜೊತೆಗೆ ಆರೋಗ್ಯವನ್ನು ತುಂಬಾನೇ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕರ್ಭೂಜ ಹಣ್ಣನ್ನು ತಿನ್ನುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ ಬನ್ನಿ. ಮೊದಲಿಗೆ ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ನೀರಿನ ಅಗತ್ಯ ತುಂಬಾನೇ ಇದೆ. ಬೇಸಿಗೆ ಕಾಲದಲ್ಲಿ ದೇಹದಿಂದ ಬೆವರು ಹೋಗಿ ದೇಹವು ನಿರ್ಜಲೀಕರಣ ಆಗುತ್ತದೆ.

 

ಅದಕ್ಕಾಗಿ ನಮ್ಮ ದೇಹಕ್ಕೆ ನೀರು ಬಹಳ ಅಗತ್ಯವಾಗಿರುತ್ತದೆ. ಆದರೆ ಪ್ರತಿಬಾರಿ ಸತತವಾಗಿ ನೀರು ಕುಡಿಯಲು ಸಾಧ್ಯವೇ ಖಂಡಿತವಾಗಿ ಇಲ್ಲ ಗೆಳೆಯರೇ. ಅದಕ್ಕಾಗಿ ನಾವು ಹೆಚ್ಚಾಗಿ ನೀರಿನಾಂಶ ಇರುವ ಹಣ್ಣುಗಳನ್ನು ಪಾನೀಯಗಳನ್ನು ಬಳಸುವುದು ಉತ್ತಮ. ಹೀಗಾಗಿ ಕರ್ಭೂಜ ಹಣ್ಣು ತಿನ್ನುವುದರಿಂದ ಬಾಯಾರಿಕೆ ನೀಗಿಸುತ್ತದೆ. ಹಾಗೂ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಇದಕ್ಕೆ ಕಾರಣ, ಇದರಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳು ಉತ್ಪತ್ತಿ ಆಗುತ್ತವೆ. ಮತ್ತು ಇನ್ನಿತರ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಜೊತೆಗೆ ನಮ್ಮ ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಜೀರ್ಣ ಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಮತ್ತು ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆಯೋ ಅಂಥವರು ಈ ಕರ್ಭೂಜ ಹಣ್ಣು ಸೇವನೆ ಮಾಡಿ. ಇದರಲ್ಲಿ ಹೆಚ್ಚಿನ ಅಂಶ ನೀರು ಇರುವುದರಿಂದ ಇದು ದೇಹಕ್ಕೆ ಖನಿಜಗಳನ್ನು ಒದಗಿಸಿ ಮಲಬದ್ಧತೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

 

ಮತ್ತು ಅಸಿಡಿಟಿ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ. ದೇಹದಲ್ಲಿ ಇರುವ ಕೆಟ್ಟ ಕಲ್ಮಶಗಳನ್ನು ಹೊರಹಾಕುತ್ತದೆ ಮತ್ತು ಅಧಿಕ ನೀರಿನಾಂಶ ವನ್ನೂ ಕೂಡ ಹೊರಗೆ ಹಾಕುತ್ತದೆ. ಇದರಿಂದ ಮೂತ್ರಪಿಂಡ ಸರಿಯಾಗಿ ಕೆಲಸ ಮಾಡುತ್ತದೆ ಅಲ್ಲದೇ ಮೂತ್ರಪಿಂಡದ ಸಮಸ್ಯೆಗಳು ಬರುವುದಿಲ್ಲ. ಮತ್ತು ಕಿಡ್ನಿಗಳು ಕೂಡ ಯಾವುದೇ ಕಾರಣಕ್ಕೂ ಕೂಡ ಹಾಳಾಗುವುದಿಲ್ಲ. ನಮ್ಮ ದೇಹವು ಸರಿಯಾಗಿ ಬೆಳವಣಿಗೆ ಆಗಲು ಆಂಟಿ ಆಕ್ಸಿಡೆಂಟ್ ಗಳು ಬಹಳ ಮುಖ್ಯವಾಗಿ ಬೇಕಾಗುತ್ತವೆ. ದೇಹದ ಆರೋಗ್ಯ ಚರ್ಮದ ಹೊಳಪು ಕಣ್ಣಿನ ಆರೋಗ್ಯ ಮೂಳೆಗಳು ಬಲಗೊಳ್ಳುವುದು ಕೈಕಾಲುಗಳು ಬಲವಾಗುವುದು ಇತ್ಯಾದಿ ಸಮಸ್ಯೆಗಳ ನಿವಾರಣೆ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಸಿಕ್ಕಾಗ ಮಾತ್ರ ಸರಿ ಹೋಗುತ್ತದೆ. ಈ ಕರ್ಭೂಜ ದಲ್ಲಿ ವಿಟಮಿನ್ ಎ ಸಿ ಕೆ ಖನಿಜಗಳು ಲವಣಗಳು ನಾರಿನ ಅಂಶ ಹೆಚ್ಚಿವೆ. ಅದಕ್ಕಾಗಿ ಇಷ್ಟೆಲ್ಲ ಲಾಭಗಳನ್ನು ಪ್ರಯೋಜಗಳನ್ನು ಹೊಂದಿರುವ ಕರ್ಭೂಜ ಹಣ್ಣು ತಿನ್ನುವುದನ್ನು ಮರೆಯಬೇಡಿ. ಖಂಡಿತವಾಗಿ ಸೇವನೆ ಮಾಡಿ ಇಷ್ಟೆಲ್ಲ ಲಾಭಗಳನ್ನು ಪಡೆದುಕೊಂಡು ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *