ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ತಲೆ ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಈ ಕೆಲವು ಸಲಹೆಗಳನ್ನು ನೀವು ಖಂಡಿತವಾಗಿ ನೆನಪಿನಲ್ಲಿ ಇಟ್ಟುಕೊಂಡು ಪಾಲನೆ ಮಾಡುವುದು ಬಹಳ ಮುಖ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಡುವ ಸರ್ವೇ ಸಾಮಾನ್ಯ ಸಮಸ್ಯೆ ಅಂದರೆ ಅದು ಕೂದಲು ಉದುರುವ ಸಮಸ್ಯೆ ಅಂತ ಹೇಳಬಹುದು. ಹೆಣ್ಣಿಗೆ ಕೇಶರಾಶಿಯೇ ಆಭರಣ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಕೂದಲು ಹೆಚ್ಚಾಗಿ ಉದುರುತ್ತಿವೆ ಈಗಿನ ಕಾಲದ ಮಕ್ಕಳಲ್ಲಿ ಅಥವಾ ಎಲ್ಲರಲ್ಲಿ. ಇದಕ್ಕೆ ಕಾರಣಗಳನ್ನು ನಾವು ಹೇಳುವುದಾದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿರಬಹುದು ಸರಿಯಾಗಿ ನಿದ್ದೆಯನ್ನು ಮಾಡದೇ ಇರುವುದು ಮತ್ತು ಕೆಲಸದ ಒತ್ತಡ ಮತ್ತು ಮುಖ್ಯವಾಗಿ ಹಾರ್ಮೋನ್ ಗಳ ಅಸಮತೋಲನ ಮತ್ತು ಕೂದಲಿಗೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡದೇ ಇರುವುದು ಅಂದರೆ ತಲೆ ಕೂದಲಿಗೆ ಎಣ್ಣೆಯನ್ನು ಹಚ್ಚದೆ ಇರುವುದು.
ಹೀಗೆ ಇವೆಲ್ಲವೂ ಒಂದು ಬಗೆಯ ಕಾರಣಗಳು ಆಗಿವೆ. ಅದರಲ್ಲಿ ಮುಖ್ಯವಾಗಿ ನಿಮಗೆ ಇಂದಿನ ಲೇಖನದಲ್ಲಿ ನಾವು ನಿಮಗೆ ತಲೆ ಕೂದಲಿಗೆ ಎಣ್ಣೆಯನ್ನೂ ಹಚ್ಚಿದ ಬಳಿಕ ಯಾವ ರೀತಿಯಾಗಿ ನಾವು ಜಾಗ್ರತೆಯನ್ನು ವಹಿಸಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ತಲೆ ಕೂದಲಿಗೆ ಎಣ್ಣೆಯನ್ನೂ ಹಚ್ಚಿದ ಬಳಿಕ ಹೆಚ್ಚಾಗಿ ಕೂದಲು ಉದುರುತ್ತವೆ ಅನ್ನುವ ಮಾತುಗಳನ್ನು ನೀವು ಕೇಳಿರುತ್ತೀರಿ ಹಾಗೆಯೇ ಈ ಅನುಭವ ನಿಮಗೂ ಕೂಡ ಆಗಿರುತ್ತದೆ. ಹಾಗೂ ನಿಮ್ಮಲ್ಲಿ ಈ ಪ್ರಶ್ನೆ ಕೂಡ ಮೂಡಿರಬಹುದು. ಕೆಲವು ಜನರು ತಲೆಗೆ ಎಣ್ಣೆಯನ್ನೂ ಹಚ್ಚಿದ ಮೇಲೆ ಕೂದಲು ಹೆಚ್ಚಾಗಿ ಉದುರುತ್ತವೆ ಎಂದು ಎಣ್ಣೆಯನ್ನು ಹಚ್ಚುವುದನ್ನು ಬಿಟ್ಟು ಬಿಡುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ನಿಮಗೆ ಗೊತ್ತೇ? ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಸೊಂಪಾಗಿ ದಟ್ಟವಾಗಿ ಸುಂದರವಾಗಿ ಬೆಳೆಯುತ್ತವೆ.
ಎಣ್ಣೆ ಹಚ್ಚಿದ ಬಳಿಕ ಯಾಕೆ ಕೂದಲು ಹೆಚ್ಚಾಗಿ ಉದುರುತ್ತವೆ ಅಂದರೆ ತಲೆಯ ನೆತ್ತಿಯ ಭಾಗದಲ್ಲಿ ಇರುವ ಎಲ್ಲ ರಂಧ್ರಗಳು ತೆರೆದುಕೊಳ್ಳುತ್ತವೆ. ಹೀಗಾಗಿ ಕೂದಲು ಅಧಿಕವಾಗಿ ಉದುರುವ ಸಾಧ್ಯತೆ ಇರುತ್ತದೆ.
ಇದರಿಂದ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಮತ್ತು ಕೂದಲಿನ ಮೋಇಷ್ಚರ್ ಕೂಡ ಹಾಳಾಗುತ್ತದೆ. ಇದೆ ಕಾರಣಕ್ಕೆ ಕೂದಲು ಡ್ರೈ ಆಗಿ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತವೆ. ಹಾಗಂತ ಕೂದಲಿಗೆ ಎಣ್ಣೆಯನ್ನು ಹಚ್ಚುವುದನ್ನು ಬಿಡಬಾರದು. ಜೊತೆಗೆ ಎಣ್ಣೆಯನ್ನು ಹಚ್ಚಿದ ತಕ್ಷಣವೇ ತಲೆಸ್ನಾನ ಮಾಡಬಾರದು. ಇನ್ನೊಂದು ಮುಖ್ಯವಾದ ಸಲಹೆ ಏನೆಂದರೆ ಕೂದಲಿಗೆ ಎಣ್ಣೆಯನ್ನು ಹಚ್ಚಿದ ಬಳಿಕ ಕೂದಲನ್ನು ಬಾಚಿಕೊಳ್ಳಬಾರದು. ಏಕೆಂದ್ರೆ ಕೂದಲು ದುರ್ಬಲ ಆಗಿರುತ್ತವೆ. ಈ ರೀತಿ ಮಾಡುವುದರಿಂದ ಕೂದಲು ಉದುರುವುದು ಹಾಗೂ ಸ್ಪ್ಲಿಟ್ ಆಗುವ ಸಾಧ್ಯತೆ ಇರುತ್ತದೆ. ತಲೆ ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಆಗುವ ಮತ್ತೊಂದು ಲಾಭವೆಂದರೆ ತಲೆಗೆ ಆರಾಮ ಮತ್ತು ವಿಶ್ರಾಂತಿ ಸಿಗುತ್ತದೆ ಅದರ ಜೊತೆಗೆ ತಲೆಗೆ ಎಣ್ಣೆಯನ್ನು ಹಚ್ಚಿ ಹತ್ತು ನಿಮಿಷ ಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ರಾತ್ರಿ ಸುಖವಾದ ನಿದ್ರೆ ಕೂಡ ಬರುತ್ತದೆ ಒಂದು ಗಂಟೆ ಮಸಾಜ್ ಮಾಡುವುದರಿಂದ ತಲೆ ಕೂದಲು ಉದುರುತ್ತವೆ. ಶುಭದಿನ.