ನಮಸ್ತೇ ಪ್ರಿಯ ಮಿತ್ರರೇ, ನಮ್ಮ ಭಾರತ ದೇಶ ಕಲಾ ಸಂಸ್ಕೃತಿ ಉಡುಗೆ ತೊಡುಗೆ ಯಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಷ್ಟೊಂದು ಪ್ರಸಿದ್ಧತೆಯನ್ನು ಪಡೆದಿದೆ. ಅನೇಕ ಮನೆಗಳಲ್ಲಿ ಈಗಲೂ ಕೂಡ ಮಣ್ಣಿನ ಮಡಿಕೆಯನ್ನು ಉಪಯೋಗಿಸುತ್ತಾರೆ. ಅದರಲ್ಲಿ ಹಳ್ಳಿಗಳಲ್ಲಿ ಈ ರೀತಿ ನಾವು ಕಾಣಬಹುದು. ಬೇರೆ ಕಾಲದಲ್ಲಿ ಇಲ್ಲದೇ ಇದ್ದರೂ ಕೂಡ ಬೇಸಿಗೆ ಕಾಲದಲ್ಲಿ ಇವುಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಮಣ್ಣಿನ ಮಡಿಕೆಯನ್ನು ಖರೀದಿಸಲು ಹೋದರೆ ದುಬಾರಿಯಾಗಿ ಸಿಗುತ್ತವೆ ಆದರೆ ಇವು ಆರೋಗ್ಯಕ್ಕೆ ಬಹಳ ಲಾಭವನ್ನು ತಂದು ಕೊಡುತ್ತದೆ. ಮಣ್ಣಿನ ಮಡಿಕೆಯಲ್ಲಿ ಶೇಖರಣೆ ಮಾಡಿ ನೀರು ತಂಪು ಆಗಿರುವುದರ ಜೊತೆ ಜೊತೆಗೆ ಆರೋಗ್ಯಕ್ಕೆ ಅಮೃತ ಅಂತ ಹೇಳಬಹುದು. ಏಕೆಂದ್ರೆ ಮಣ್ಣಿನಲ್ಲಿ ಇರುವ ಎಲ್ಲ ಅಂಶಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ.
ಹೀಗಾಗಿ ಈ ಮಣ್ಣಿನ ಮಡಿಕೆಯಲ್ಲಿ ನೀರು ಕುಡಿದರೆ ಸಾಕು ಊಹಿಸಲಾಗದಷ್ಟು ನಮಗೆ ಪ್ರಯೋಜನಗಳು ಆಗುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅವುಗಳ ಪರಿಚಯವನ್ನು ಮಾಡಿ ಕೊಡುತ್ತೇವೆ. ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ಬಹಳ ಪ್ರಯೋಜನಗಳು ಆಗುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಜನರು ತಂಪಾದ ನೀರನ್ನು ಹಾಗೂ ಪಾನೀಯಗಳನ್ನು ಬಯಸುತ್ತಾರೆ. ಹೀಗಾಗಿ ಅವರು ಪ್ರಿಡ್ಜ್ ನಲ್ಲಿ ಇರುವ ನೀರನ್ನು ಹೆಚ್ಚಾಗಿ ಕುಡಿಯಲು ಇಷ್ಟ ಪಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಇದು ನೈಸರ್ಗಿಕವಾಗಿ ಕೂಡ ಹಿತಕರವಾಗಿರುವುದಿಲ್ಲ. ಆದರೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಣ್ಣು ಒಂದು ಪಿಹೆಚ್ ಕ್ಷಾರೀಯ ಅಂತ ಹೇಳಬಹುದು ಇದು ಇದರ ಗುಣವಾಗಿದ್ದು,
ಸಾಮಾನ್ಯವಾಗಿ ಅಮ್ಲೀಯ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ಪಿಹೆಚ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ದೇಹದಲ್ಲಿ ಪಿ ಹೆಚ್ ಮಾತ್ರ ಹೆಚ್ಚಾದರೆ ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ ಜೊತೆಗೆ ನಮ್ಮ ದೇಹವು ತಂಪಾಗಿ ಇಡುತ್ತದೆ. ಮತ್ತು ಜೀರ್ಣಶಕ್ತಿ ಅಥವಾ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಏಕೆಂದ್ರೆ ಚಯಾಪಚಯ ಕ್ರಿಯೆಯಲ್ಲಿ ಇದು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡಿ ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ಮತ್ತೊಂದು ಅದ್ಭುತವಾದ ಗುಣವನ್ನೂ ಹೇಳಬೇಕೆಂದರೆ ಮಣ್ಣು ಎಲ್ಲ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಹಾಗೂ ಶುದ್ಧೀಕರಿಸುತ್ತದೆ. ಇನ್ನೂ ಈ ಮಣ್ಣಿನ ಮಡಿಕೆ ನೀರನ್ನು ಎಷ್ಟು ದಿನಗಳವರೆಗೆ ಉಪಯೋಗಿಸಬಹುದು ಅಂದರೆ ಮೂರು ದಿನಗಳ ವರೆಗೆ ಬಳಸಬಹುದು ಆದ್ರೆ ಅದಕ್ಕಿಂತಲೂ ಮೀರಿ ಉಪಯೋಗಿಸಬಾರದು. ಅದಕ್ಕಾಗಿ ನೀವು ಹೊಸದಾದ ನೀರನ್ನು ತುಂಬಿ ಉಪಯೋಗಿಸಬೇಕು. ನೋಡಿದ್ರಲಾ ಮಿತ್ರರೇ ಆದ್ದರಿಂದ ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದನ್ನು ರೂಢಿಸಿ ಕೊಳ್ಳಿ. ಬಹಳ ಒಳ್ಳೆಯದಾಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.