ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವ ಗಾದೆ ಮಾತು ಜೀರಿಗೆಗೆ ಸರಿಯಾಗಿ ಹೋಲಿಕೆ ಆಗುತ್ತದೆ. ಎಲ್ಲ ಮಸಾಲೆ ಪದಾರ್ಥಗಳಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಅಡುಗೆ ಮಾಡಬೇಕಾದರೆ ಜೀರಿಗೆ ಬೇಕೆ ಬೇಕಾಗುತ್ತದೆ. ಜೀರಿಗೆ ಇಲ್ಲದೇ ಮಾಡಿದರೆ ಆ ಆಹಾರದ ಸ್ವಾದವೆ ಬೇರೆಯಾಗಿರುತ್ತದೆ. ಅದಕ್ಕಾಗಿ ನಿತ್ಯ ಜೀವನಕ್ಕೆ ಜೀರಿಗೆ ಬೇಕಾಗುತ್ತದೆ. ಕೇರಳ ರಾಜ್ಯಕ್ಕೆ ನೀವು ಭೇಟಿ ನೀಡಿದರೆ ಅಲ್ಲಿ ನೀರು ಬದಲಾಗಿ ಜೀರಿಗೆ ನೀರು ಕೊಡುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಆರೋಗ್ಯಕರ ಲಾಭಗಳು ಅಂತ ಹೇಳಿದರೆ ತಪ್ಪಾಗಲಾರದು. ಮೊದಲಿನ ಕಾಲದಲ್ಲಿ ನಮ್ಮ ಹಿರಿಯರು ಶೀತ ನೆಗಡಿ ಕೆಮ್ಮು ಗಂಟಲು ಎಲ್ಲ ಚಿಕ್ಕ ಪುಟ್ಟ ಕಾಯಿಲೆಗಳಿಗೆ ಈ ಜೀರಿಗೆ ನೀರು ಕುಡಿಯುತ್ತಿದ್ದರು. ಅದರಲ್ಲೂ ಡಯಾಬಿಟೀಸ್ ರೋಗಿಗಳಿಗೆ ಜೀರಿಗೆ ರಾಮಬಾಣ ಇದ್ದಂತೆ. ಅಷ್ಟೇ ಅಲ್ಲದೇ ದೇಹದ ತೂಕವನ್ನು ಇಳಿಸಿಕೊಳ್ಳುವುದರಿಂದ ಹಿಡಿದು ಜೀರ್ಣಕ್ರಿಯೆವರೆಗೂ ಸಹಾಯ ಮಾಡುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಜೀರಿಗೆಯ ಆರೋಗ್ಯಕರ ಗುಣಗಳನ್ನು ತಿಳಿಯೋಣ.
ನಾವು ಸೇವಿಸುವ ಆಹಾರ ಕೆಲವೊಂದು ಬಾರೀ ನಮಗೆ ಗೊತ್ತಿಲ್ಲದ ಹಾಗೆ ಭಾರೀ ಪ್ರಯೋಜನವನ್ನು ಒದಗಿಸುತ್ತದೆ. ಆದರೆ ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಜನರು ಫಾಸ್ಟ್ ಫುಡ್ ಗೆ ಹೊಂದಿಕೊಂಡಿದ್ದಾರೆ. ಅನಾರೋಗ್ಯ ತಂದು ಕೊಡುವ ಆಹಾರವನ್ನು ಸೇವನೆ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಸಕ್ಕರೆಯ ಕಾಯಿಲೆಗೆ ಮುಖ್ಯವಾಗಿ ಬರಮಾಡಿಕೊಂಡಂತೆ ಆಗುತ್ತದೆ. ಆದರೆ ನಿಮಗೆ ಗೊತ್ತೇ ದಿನನಿತ್ಯ ನಾವು ಒಂದಲ್ಲ ಒಂದು ರೂಪದಲ್ಲಿ ನಾವು ಜೀರಿಗೆ ಅಥವಾ ಜೀರಿಗೆ ನೀರು ಕುಡಿಯುವುದರಿಂದ ಇಂದ ಸಕ್ಕರೆಯ ಕಾಯಿಲೆ ಕೂಡ ಹತ್ತಿರ ಬರುವುದಿಲ್ಲ. ಮುಖ್ಯವಾಗಿ ಈ ಜೀರಿಗೆಯಲ್ಲಿ ಡಯಾಬಿಟೀಸ್ ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ.ಜೊತೆಗೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವಲ್ಲಿ ಸಹಕಾರಿಯಾಗಿದೆ ಈ ಜೀರಿಗೆ ಅಥವಾ ಜೀರಿಗೆ ನೀರು ಮತ್ತು ರಕ್ತದಲ್ಲಿ ಗ್ಲೂಕೊಸ್ ಮಟ್ಟವನ್ನು ಸರಿಯಾಗಿ ಸಮತೋಲನದಲ್ಲಿ ಇಡುವಂತೆ ನೋಡಿಕೊಳ್ಳುತ್ತದೆ ಇತ್ತೀಚಿನ ಯುವಜನತೆ ತಮ್ಮ ದೈನಂದಿಕ ಆಹಾರ ಪದ್ಧತಿಯಲ್ಲಿ ಹಲವಾರು ಬಗೆಯ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ.
ಹಾಗೂ ಈ ಕೆಲಸದ ಒತ್ತಡದಿಂದಾಗಿ ನಿತ್ಯವೂ ವ್ಯಾಯಾಮ ಸುಖವಾದ ನಿದ್ರೆ ಯೋಗ ಧ್ಯಾನ ಜಿಮ್ ಎಲ್ಲವನ್ನು ಮರೆತು ಬಿಡುತ್ತಿದ್ದಾರೆ ಮುಖ್ಯವಾಗಿ ನಮ್ಮ ವೈಯಕ್ತಿಕ ಜೀವನಕ್ಕೆ ಸಮಯವೇ ನೀಡದೇ ಇರುವಷ್ಟು ನಾವು ಬಡವರಾಗಿ ಬಿಟ್ಟಿದ್ದೇವೆ ಅಂತ ಹೇಳಿದರೆ ತಪ್ಪಾಗಲಾರದು. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ದೇಹದಲ್ಲಿ ಬೊಜ್ಜು ಕೊಬ್ಬು ಶೇಖರಣೆ ಆಗಿ ವಯಸ್ಸಿಗೂ ಮುನ್ನವೇ ಅಧಿಕ ರಕ್ತದೊತ್ತಡ ಸಕ್ಕರೆ ಕಾಯಿಲೆ ಜೀವ ಹಿಂಡುತ್ತಿವೆ ಅಧ್ಯಯನ ಹೇಳುವ ಪ್ರಕಾರ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುವುದರ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ಸಕ್ಕರೆ ಕಾಯಿಲೆ ಇದ್ದವರು ಆದಷ್ಟು ದೇಹದ ತೂಕದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಮಧುಮೇಹಿಗಳು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಖಂಡಿತವಾಗಿ ಈ ಮನೆಮದ್ದುಗಳನ್ನು ಬಳಕೆ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.ಶುಭದಿನ.