ದಿನ ಭವಿಷ್ಯ ಸೆಪ್ಟೆಂಬರ್ 9-2022. ನಿಮ್ಮ ರಾಶಿ ಭವಿಷ್ಯ ತಿಳಿಯಿರಿ.

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭಕೃಥ್ ನಾಮ ಸಂವತ್ಸರ ದಕ್ಷಿನಾಯಿಣೆ ಭಾದ್ರಪದ ಮಾಸ ಶುಕ್ಲ ಪಕ್ಷ. ಇಂದು ಸೆಪ್ಟೆಂಬರ್ 9 ಶುಕ್ರವಾರ. ಇಂದು ಅನಂತ ಪದ್ಮನಾಭ ವ್ರತ. ಅನಂತನ ಪೂಜೆ ವ್ರತವನ್ನು ಯಾರು ಹಿಡಿದಿದ್ದೀರಿ ಅವರು ಕೆಂಪು ದಾರವನ್ನು ಹಾಕಿಕೊಂಡು ಕೆಂಪು ಕುಂಕುಮ ಧರಿಸಿ ದೇವರಿಗೆ ವಿಶೇಷವಾದ ವ್ರತ ಪೂಜೆ ಮಾಡುವ ದಿನ. ನೀವು ಪದ್ಮನಾಭ ವ್ರತ ಆಚರಿಸದೇ ಇದ್ದವರೂ ಸಹ ದೇವಸ್ಥಾನಗಳಿಗೆ ಹೋಗಿ ಅನಂತ ಪದ್ಮನಾಭ ಸ್ವಾಮಿಗೆ ಸಮರ್ಪಣೆ ಆಗಲಿ ಅಂತ ಇವತ್ತು ಅರ್ಚನೆಗಳನ್ನು ಮಾಡಿಸಬಹುದು. ಆದ್ರೆ ಮನೆಯಲ್ಲಿ ಸಹ ಸಂಕ್ಷಿಪ್ತವಾಗಿ ಪೂಜೆ ಮಾಡಿ ಕೆಂಪು ದಾರವನ್ನು ಕಟ್ಟಿಕೊಳ್ಳಿ. ಎಲ್ಲಾ ರಾಶಿಗಳ ಇಂದಿನ ಭವಿಷ್ಯವನ್ನು ತಿಳಿಯೋಣ. ಇಂದು ಧನಿಷ್ಟ ನಕ್ಷತ್ರ. ಇಂದಿನ ರಾಶಿ ಭವಿಷ್ಯನ ತಿಳಿದುಕೊಳ್ಳೋಣ. ಮೇಷ ರಾಶಿಗೆ ಇಂದು ಬಹಳ ಒಳ್ಳೆಯ ದಿನ, ಮನಸ್ಸಿಗೆ ನೆಮ್ಮದಿ ನಿಮ್ಮ ಮಿತ್ರರಿಂದ ಮತ್ತು ಗುಂಪುಗಳಿಂದ ಬರುತ್ತೆ. ಯಾರ್ಯಾರು ಬ್ಯುಸಿನೆಸ್ ಅಲ್ಲಿದ್ದಿರಿ ಅವರಿಗೆ ಸಾಕಷ್ಟು ಕಾಂಟಾಕ್ಟ್ ಸಿಗುತ್ತೆ. ಯಾರೇ ಎದುರಿಗೆ ಬಂದ್ರೂ ಮಾತನಾಡುವುದನ್ನು ಮರೀಬೇಡಿ. ಯಾರು ಎಲ್ಲಿಂದ ಧನಾಗಮನ ತರ್ಥಾರೆ ಎಂದು ಹೇಳಲು ಆಗೋದಿಲ್ಲ. ಹಾಗಾಗಿ ಎಲ್ಲರನ್ನೂ ಮಾತನಾಡಿಸಿ. ವೃಷಭ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು ಸಿಗುವಂತಹ ದಿನ. ಕಾರ್ಯಕ್ಷೇತ್ರದಲ್ಲಿ ಮುತುವರ್ಜಿಯಿಂದ ಚೊಕ್ಕವಾಗಿ ಕೆಲಸಗಳನ್ನು ಬೇಗ ಬೇಗ ಚಾಕಚಕ್ಯತೆಯಿಂದ ಮುಗಿಸಿಕೊಂದರೆ ಸಂಜೆ ಮೇಲೆ ನೀವು ಬಹಳ ಒಳ್ಳೆಯ ರೀತಿಯಲ್ಲಿ ಮೋಜನ್ನು ಮಾಡಬಹುದು.

 

ಮಿಥುನ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ದೊಡ್ಡವರಿಂದ ಆಶೀರ್ವಾದ ಸಿಗುತ್ತೆ. ನಿಮ್ಮ ಸಿಕ್ಸ್ತ್ ಸೆನ್ಸ್ ಇವತ್ತು ತುಂಬಾನೇ ಇರುತ್ತೆ ಹಾಗಾಗಿ ಅನೇಕ ರೀತಿಯ ಯಶಸ್ಸು ಬೇರೆಯವರಿಗೆ ತಿಳಿಯುವಂತೆ ನೀವು ಸಾಧಿಸುತ್ತೀರಿ. ಕರ್ಕಾಟಕ ರಾಶಿಯವರಿಗೆ ಇಂದು ಮನಸ್ಸಿಗೆ ಬಹಳ ನೆಮ್ಮದಿ ತರುವ ದಿನ. ಅನೇಕ ಕಾರ್ಯಗಳಲ್ಲಿ ಗುಪ್ತವಾಗಿ ನೀವು ಅನೇಕ ರೀತಿಯ ಆಲೋಚನೆ ಮಾಡ್ತಾ ಇರುತ್ತೀರಿ ಈ ಆಲೋಚನೆಗಳು ಮನಸ್ಸಿಗೆ ಶೋಭೆ ತಂದು ಕೊಡ್ತು ಅಂದ್ರೆ ಅದು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ತೊಂದರೆಯನ್ನು ಮೂಡಿಸಬಹುದು. ಸಿಂಹ ರಾಶಿಗೆ ಅತಿ ಹೆಚ್ಚಿನ ನೆಮ್ಮದಿ ತರುವ ದಿನ. ನಿಮ್ಮ ಪಾರ್ಟ್ನರ್ ಶಿಪ್ ವ್ಯವಹಾರಗಳಲ್ಲಿ ನೀವು ಇವತ್ತು ಚೆನ್ನಾಗಿ ಮುಂದುವರೆಯುತ್ತಿರಿ. ಬೇರೆಯವರನ್ನು ಮುಂದುವರೆಯಲು ಬಿಟ್ಟು ನೀವು ಹಿಂದಿನಿಂದ ಸಪೋರ್ಟ್ ಕೊಟ್ರೆ ಸಾಕು ಅವರು ಚೆನ್ನಾದ ರೀತಿಯಲ್ಲಿ ಹೋಗಿ ಯಶಸ್ಸನ್ನು ತಂದು ಸಮರ್ಪಿಸುತ್ತಾರೆ. ಕನ್ಯಾ ರಾಶಿಗೆ ಅತಿ ಹೆಚ್ಚಿನ ನೆಮ್ಮದಿ ತರುವ ಸಂದರ್ಭಗಳು ನಿಮ್ಮ ಸಾಮಾಜಿಕವಾಗಿ ಪ್ರಾಪ್ತಿ ಆಗುತ್ತೆ. ಎಲ್ಲರೊಡನೆ ಸರಿಯಾದ ರೀತಿಯಲ್ಲಿ ಮಾತಾಡಿ. ನಿಮ್ಮ ಶತ್ರುಗಳು ತಾವಾಗಿ ಹಿಂದೆ ಹೋಗುತ್ತಾರೆ. ನಿಮಗೆ ಜಯ ಪ್ರಾಪ್ತಿ ಆಗುತ್ತೆ. ತುಲಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ನಿಮ್ಮ ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಹಾಗೂ ದಾಂಪತ್ಯದಲ್ಲಿ ಯಶಸ್ಸು ಪಡಿತಿರಿ. ಮಕ್ಕಳಿಂದ ಬಹಳ ಒಳ್ಳೆಯ ಸುದ್ದಿ ಕೇಳ್ತೀರಾ. ನಿಮ್ಮ ಕ್ರಿಯಾಶೀಲತೆ ಇಡೀ ತಿಂಗಳಲ್ಲಿ ಹೆಚ್ಚಾಗಿರುತ್ತದೆ.ಹಾಗಾಗಿ ಬುದ್ಧಿ ತಿಕ್ಷ್ಣತೆಯಿಂದ ಅನೇಕ ಕಾರ್ಯ ಸಾಧನೆ ಆಗುತ್ತೆ.

 

ವೃಶ್ಚಿಕ ರಾಶಿಗೆ ಇಂದು ಮನಸ್ಸಿನಲ್ಲಿ ಸ್ವಲ್ಪ ಜವಾಬ್ದಾರಿ ಜಾಸ್ತಿ ಇರುವಂಥ ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ದಿನ ಆಗಿರುತ್ತೆ. ಸಣ್ಣ ಪುಟ್ಟ ಕೆಲಸಗಳನ್ನು ನೀವು ನೆಗ್ಲೆಕ್ಟ್ ಮಾಡಿದ್ರೆ ಅದು ದೊಡ್ಡದಾಗಿ ತಲೆನೋವಾಗಿ ಕುಳಿತುಕೊಳ್ಳುತ್ತ. ಆದ್ದರಿಂದ ಎಲ್ಲಾ ಕೆಲಸಗಳನ್ನೂ ಇವತ್ತು ಸಮಾಧಾನವಾಗಿ ಕೊಲಾಗಿ ಸಂತೋಷವಾಗಿ ವಿಮರ್ಶೆ ಮಾಡಿ ನಿರ್ವಹಣೆ ಮಾಡಬೇಕು. ಧನಸ್ಸು ರಾಶಿಗೆ ಇಂದು ಬಹಳ ಒಳ್ಳೆಯ ದಿನ. ನಿಮ್ಮ ಪರಾಕ್ರಮ ಇಡೀ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಅನೇಕ ರೀತಿ ಎಲ್ಲಾ ಕೆಲಸಗಳನ್ನೂ ಸಾಧಿಸುತ್ತೆನೆ ಎನ್ನೋ ಮನೋಭಾವ ಇರುತ್ತೆ ಅದೇ ರೀತಿ ಕೆಲಸ ಮಾಡಿ ಸಾಧಿಸ್ಕೊಳ್ಳಿ. ಮಕರ ರಾಶಿಗೆ ಇದು ಮನಸ್ಸಿಗೆ ನೆಮ್ಮದಿ ತರುವ ದಿನ ಮನೆಯವರೊಡನೆ ಒಡನಾಟ ಚೆನ್ನಾಗಿರುತ್ತೆ. ಸಂಸಾರ ಜೀವನದಲ್ಲಿ ಯಶಸ್ಸು ನೆಮ್ಮದಿ ಇರುತ್ತೆ. ಕುಂಭ ರಾಶಿಗೆ ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಬೇರೆಯವರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತಿರಿ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇರುವುದರಿಂದ ಬಹಳ ಒಳ್ಳೇದು ಆಗುತ್ತೆ. ಮೀನಾ ರಾಶಿಗೆ ಇಂದು ಮನಸ್ಸಿಗೆ ಕೆಲವು ವಿಷಯಗಳಲ್ಲಿ ಮುಕ್ಯವಾದ ನಿರ್ಧಾರ ಮಾಡುವ ಮನೋಭಾವನೆ ಇರೋದಿಲ್ಲ. ಏನೋ ಯಾಕೋ ಮನಸ್ಸು ಸರಿ ಇಲ್ಲ ಎನ್ನುವ ರೀತಿಯಲ್ಲಿ ಬೇಸರ ಇರಬಹುದು. ಎರಡು ದಿನ ಸುಮ್ಮನೆ ಇದ್ದುಬೀಡಿ ಎಲ್ಲಾ ಸರಿ ಹೋಗುತ್ತೆ. ನಂತರ ಎಲ್ಲಾ ವಿಷಯಗಳು ನಿರ್ಧಾರ ಮಾಡಲು ನಿಮಗೆ ಸರಿಯಾಗಿ ಗೋಚರ ಆಗುತ್ತೆ. ಶುಭದಿನ.

Leave a Reply

Your email address will not be published. Required fields are marked *