ದಿನ ಭವಿಷ್ಯ ಸೆಪ್ಟೆಂಬರ್ 14, 2022.

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭಕೃಥ್ ನಾಮ ಸಂವತ್ಸರ ದಕ್ಷಿನಾಯಿಣೆ ಭಾದ್ರಪದ ಮಾಸ ಶುಕ್ಲ ಪಕ್ಷ. ಇಂದು ಸೆಪ್ಟೆಂಬರ್ 14 ನೇ ತಾರೀಕು. ಅಶ್ವಿನಿ ನಕ್ಷತ್ರ. ಇಂದಿನ ರಾಶಿ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿದುಕೊಳ್ಳೋಣ. ಇಂದು ಅಶ್ವಿನಿ ನಕ್ಷತ್ರ. ಎಲ್ಲಾ ರಾಶಿಗಳ ದಿನ ಭವಿಷ್ಯ ಇಂತಿದೆ. ಮೇಷ ರಾಶಿಗೆ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮಲ್ಲೇ ನೀವು ಕಂಡುಕೊಳ್ಳುತ್ತಿರಿ ಆದ್ದರಿಂದ ಇವತ್ತು ಬಹಳ ಸಂತೋಷ ನೆಮ್ಮದಿಯನ್ನು ನಿಮ್ಮೊಳಗೆ ನೀವು ಅನುಭವಿಸುವುದರಿಂದ ಬೇರೆಯವರ ಅಗತ್ಯ ನಿಮಗೆ ಬೀಳುವುದಿಲ್ಲ. ವೃಷಭ ರಾಶಿಯವರಿಗೆ ಇಂದು ವ್ಯಾಪಾರಗಳನ್ನು ನಿಭಾಯಿಸಬೇಕು ಮನಸ್ಸಿಗೆ ಸ್ವಲ್ಪ ಖೇದ ಇರುತ್ತೆ. ಮತ್ತು ಮಿತ್ರತ್ವ ಗಳಲ್ಲಿ ಒಡಕು ಬಂದ ಭಯ ಕಾಡ್ತಾ ಇರುತ್ತೆ. ನಾಳೆ ಎಲ್ಲವೂ ಸರಿ ಹೋಗುತ್ತೆ. ಮಿಥುನ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಗುಂಪುಗಳಿಂದ ನಿಮಗೆ ಇಷ್ಟಾರ್ಥ ಸಿದ್ಧಿ. ಮಿತ್ರರಿಂದ ಅತಿ ಹೆಚ್ಚಿನ ಸಂತೋಷ. ಧನಾಗಮ ಆಗುತ್ತೆ.

 

ಕರ್ಕಾಟಕ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡಿತೀರಿ. ಆದ್ದರಿಂದ ನೀವು ನಿಗದಿತ ಅವಧಿಯೊಳಗೆ ನಿಮ್ಮ ಜವಾಬ್ದಾರಿ ಮುಗಿಸಲೇಬೇಕು. ಸಿಂಹ ರಾಶಿಯವರಿಗೆ ದೊಡ್ಡವರ ಆಶೀರ್ವಾದ ಪ್ರಾಪ್ತಿ ಆಗುತ್ತೆ ದೇವರ ಧ್ಯಾನದಿಂದ ವಿಶೇಷವಾದ ನೆಮ್ಮದಿ ಪಡಿತಿರೀ. ಕನ್ಯಾ ರಾಶಿಗೆ ಇಂದು ಸ್ವಲ್ಪ ಆಧ್ಯಾತ್ಮದ ಕಡೆ ಹೆಚ್ಚಿನ ಗಮನ ಇರುತ್ತೆ. ಆದ್ದರಿಂದ ಅತಿ ಹೆಚ್ಚಿನ ಸಾಧನೆಯನ್ನು ಆಧ್ಯಾತ್ಮದಲ್ಲಿ ಮಾಡಿಕೊಳ್ಳಬಹುದು. ತುಲಾ ರಾಶಿಗೆ ನಿಮ್ಮ ಪಾರ್ಟ್ನರ್ ಶಿಪ್ ಗಳಲ್ಲಿ ಮತ್ತು ನಿಮಗೆ ಬೇಕಾದಂಥ ಜನರಿಂದ ನಿಮಗೆ ಸಂತೋಷ ಪ್ರಾಪ್ತಿ ಆಗುತ್ತೆ. ವೃಶ್ಚಿಕ ರಾಶಿಗೆ ಇಂದು ಸಾಮಾಜಿಕ ವ್ಯವಹಾರಗಳಲ್ಲಿ ಅದೃಷ್ಟ ಪಡೆದುಕೊಳ್ಳುತ್ತೀರಿ ಮಿತ್ರರಿಗೆ ಸರಿಯಾಗಿ ಗೌರವಿಸಿ ಮತ್ತು ಶತ್ರುಗಳಿಂದ ದೂರವಿರಿ.

 

ಧನುಸ್ಸು ರಾಶಿಗೆ ಇಂದು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ಯಶಸ್ಸು ಮಕ್ಕಳಿಂದ ನೆಮ್ಮದಿ ಕೀರ್ತಿ ನಿಮ್ಮ ಕ್ರಿಯಾಶೀಲತೆ ತುಂಬಾ ಚೆನ್ನಾಗಿ ಇರುತ್ತೆ. ಮಕರ ರಾಶಿಗೆ ಮುಖ್ಯವಾದ ವ್ಯವಹಾರಗಳಲ್ಲಿ ಆಸ್ತಿ ಪಾಸ್ತಿ ವಿಚಾರಗಳಲ್ಲಿ ಮತ್ತು ಅಮ್ಮನ ಬಗ್ಗೆ ಕಾಳಜಿ ವಿಷಯದಲ್ಲಿ ಕೋರ್ಟ್ ಕಚೇರಿಗಳಲ್ಲಿ ಬಹಳ ಜಾಗರೂಕತೆಯಿಂದ ವ್ಯವಹಾರಗಳನ್ನು ಮಾಡಿ. ಕುಂಭ ರಾಶಿಗೆ ನಿಮ್ಮ ಪರಾಕ್ರಮ ಅತಿ ಹೆಚ್ಚಾಗಿರುತ್ತದೆ. ಸಹೋದರ ಸಹೋದರಿ ಇಂದ ಅತಿ ಹೆಚ್ಚಿನ ನೆಮ್ಮದಿ. ಮೀಡಿಯಾ ಕಮ್ಯುನಿಕೇಶನ್ ಇಂಟರ್ನೆಟ್ ನಲ್ಲಿ ಯಾರ್ಯಾರು ಇದ್ದಿರಿ ಅವರಿಗೆ ಕೆಲಸದಲ್ಲಿ ಅತಿ ಹೆಚ್ಚಿನ ಯಶಸ್ಸು. ಮೀನಾ ರಾಶಿಗೆ ಸಂಸಾರದಲ್ಲಿ ನೆಮ್ಮದಿ ಆದ್ದರಿಂದ ಮನೆಯವರ ಬಗ್ಗೆ ಹೆಚ್ಚಿನ ಗಮನ ಕೊಡುವ ದಿವಸ. ಶುಭದಿನ.

Leave a Reply

Your email address will not be published. Required fields are marked *