ನಮಸ್ತೆ ಪ್ರಿಯ ಓದುಗರೇ, ಕೆಲವೊಮ್ಮೆ ನಮ್ಮ ಪಾದಗಳು ನಡೆಯಲು ಕೂಡ ಸಾಧ್ಯವಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ.ನಿಮಗೂ ಕೂಡ ನಿಮ್ಮ ಪಾದಗಳು ನೋಯುತ್ತ ಇದ್ರೆ ಇವತ್ತಿನ ಈ ಲೇಖನದಲ್ಲಿ ತಿಳಿಸುವ ಉಪಾಯ ಮಾಡಿದ್ರೆ ಖಂಡಿತ ನಿಮ್ಮ ಪಾದ ನೋವಿಗೆ ರಿಲೀಫ್ ಸಿಗುತ್ತೆ. ಬನ್ನಿ ಈ ಲೇಖನದಲ್ಲಿ ನಿಮ್ಮ ಪಾದಗಳ ನೋವಿಗೆ ಯಾವೆಲ್ಲ ರೀತಿಯ ವ್ಯಾಯಾಮ ಮಾಡಿದರೆ ನಿಮ್ಮ ಪಾದಗಳ ನೋವು ಕಡಿಮೆ ಆಗುತ್ತೆ ಎಂದು ತಿಳಿದುಕೊಂಡು ಬರೋಣ. ಸ್ನೇಹಿತರೆ ನಾವು ನಡೆಯುವಾಗ ನಾಮ ಧರಿಸಿರುವ ಪಾದರಕ್ಷೆಗಳು ಅಂದ್ರೆ ಸ್ಲಿಪ್ಪರ್ ಅಥವಾ ಶೂ ಇವು ನಮಗೆ ಸರಿಯಾದ ಸೈಜ್ ಇರಬೇಕು. ನೀವು ಧರಿಸಿರುವ ಪಾದರಕ್ಷೆಗಳು ಪ್ಲಾಸ್ಟಿಕ್ ಇಂದ ಮಾಡಿದ್ರೆ ಅಥವಾ ತುಂಬಾ ಗಟ್ಟಿಯಾಗಿ ಇದ್ರೆ ನಿಮ್ಮಪಾಡಗಳಲ್ಲಿ ಸರಿಯಾದ ಬ್ಲಡ್ ಸರ್ಕುಲೇಶನ್ ಆಗುವುದಿಲ್ಲ ಇದರಿಂದ ನಿಮ್ಮ ಪಾದಗಳು ನೋಯುವುದು ಉರಿಯುವುದು ಆಗುತ್ತೆ.
ಹಾಗಾಗಿ ಮುಂದಿನ ಸಾರಿ ನೀವು ಪಾದರಕ್ಷೆ ತೆಗೆದುಕೊಳ್ಳುವಾಗ ಸರಿಯಾಗಿ ನೋಡಿ ತೆಗೆದುಕೊಳ್ಳಿ. ಇನ್ನೂ ನಿಮ್ಮ ಪಾದಗಳಲ್ಲಿ ನೋವು ಇದ್ರೆ ಅದಕ್ಕೆ ಯಾವ ರೀತಿ ಅದಕ್ಕೆ ನಿವಾರಣೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ ಮನೆಯಲ್ಲಿ ಇರುವ ಬಾಲ್ ಅಲ್ಲಿ ನಿಮ್ಮ ಪಾದಗಳ ಕೆಳಮುಖವಾಗು ಇಟ್ಟುಕೊಂಡು ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ಅದೇ ರೀತಿ ಹಿಂದೆ ಮುಂದೆ ಮಾಡಬೇಕು. ಇದರಿಂದ ನಿಮ್ಮಪಾದಗಳಲ್ಲಿ ಬ್ಲಡ್ ಹರಿದು ನೋವು ನಿವಾರಣೆ ಆಗುತ್ತೆ. ಇದೆ ಬಾಲ್ ತೆಗೆದುಕೊಂಡು ನೆಲದ ಮೇಲೆ ಇಟ್ಟುಕೊಂಡು ಅದರ ಮೇಲೆ ಕಾಲಿಟ್ಟು ವೃತ್ತಾಕಾರವಾಗಿ ತಿರುಗಿಸುವುದರಿಂದ ನಿಮ್ಮ ಪಾದಗಳಿಗೆ ಒಂದು ಒಳ್ಳೆಯ ಮಸಾಜ್ ಸಿಗುತ್ತೆ. ಇನ್ನೂ ನಿಮ್ಮ ಮನೆಯಲ್ಲಿರುವ ಒಂದು ಹಳೇ ವಾಟರ್ ಬಾಟಲ್ ತೆಗೆದುಕೊಂಡು ಅದಕ್ಕೆ ತಣ್ಣೀರು ಅಥವಾ ಬಿಸಿ ನೀರು ಹಾಕಿ ನೆಲದ ಮೇಲೆ ಮಲಗಿಸಿ ನಿಮ್ಮ ಎರಡು ಪಾದಗಳನ್ನು ಇತ್ತು ಅದನ್ನು ಹಿಂದೆ ಮುಂದೆ ಮಾಡಬೇಕು ಇದರಿಂದ ಒಳ್ಳೆಯ ಮಸಾಜ್ ಜೊತೆಗೆ ರಿಲಾಕ್ಸ್ ಫೀಲ್ ಆಗುತ್ತೆ.
ನಿಮ್ಮ ಪಾದಗಳ ಬೆರಳುಗಳನ್ನು ಮೇಲೆ ಕೆಳಗೆ ಮಡಚಿ ಈ ರೀತಿಯಾಗಿ ಮಾಡಿದ್ರೆ ನಿಮ್ಮ ಪಾದಗಳಿಗೆ ರಿಲಾಕ್ಸ್ ಸಿಗುತ್ತೆ. ಮುಂದಿನ ಬೆರಳುಗಳ ಮೇಲೆ ಭಾರ ಬಿಟ್ಟು ಹಿಂದಿನ ಹಿಮ್ಮಡಿ ಎತ್ತುವುದು ಹಾಗೂ ಹಿಮ್ಮಡಿ ಮೇಲೆ ಭಾರ ಹಾಕಿ ಮುಂದಿನ ಬೆರಳುಗಳನ್ನು ಎತ್ತುವುದು ಮಾಡಿದ್ರೆ ನಿಮ್ಮ ಪಾದಗಳಿಗೆ ಒಳ್ಳೆಯ ವ್ಯಾಯಾಮ ಆಗುತ್ತೆ ಅದೇ ರೀತಿ ಒಂದು ಕಾಲನ್ನು ಎತ್ತಿ ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ಕಾಲನ್ನು ತಿರುಗಿಸಿ. ಎರಡು ಕಾಲನ್ನೂ ಇದೆ ರೀತಿಯಾಗಿ ಮಾಡಿ. ಇದರಿಂದ ನಿಮ್ಮ ಕಾಲುಗಳಿಗೆ ಒಳ್ಳೆಯ ವ್ಯಾಯಾಮ ಆಗುತ್ತೆ. ಇನ್ನೂ ನಿಮ್ಮ ಪಾದ ನೋವಿಗೆ ಇನ್ನೊಂದು ಮನೆಮದ್ದು ಅಂದ್ರೆ ಬಿಸಿ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ 5 – 10 ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಿಸಿ ನೀರಿನಲ್ಲಿ ಇಡಿ. ಇದರಿಂದ ನಿಮ್ಮ ಪಾದಗಳ ನೋವು ಕಡಿಮೆ ಆಗಲು ಸಹ್ಯಾಯ ಆಗುತ್ತೆ. ಹಾಗೆ ಮನೆಯಲ್ಲಿನ ಐಸ್ ಕ್ಯೂಬ್ ತೆಗೆದುಕೊಂಡು ನಿಮ್ಮ ಪಾದಗಳಿಗೆ ಮಸಾಜ್ ಮಾಡುವುದರಿಂದ ಕೂಡ ನಿಮ್ಮ ಪಾದಗಳ ನೋವು ಹಾಗೂ ಊತವನ್ನು ನಿವಾರಿಸಲು ಸಾಧ್ಯ ಆಗುತ್ತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.