ಈ ಕೇಶವನ ಸನ್ನಿಧಿಯಲ್ಲಿ ಸಿಗುತ್ತೆ ಸಕಲ ಸರ್ಪಡೋಷಗಳಿಗು ಮುಕ್ತಿ!!!

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ದೇವಾಲಯಗಳು ಅಂದ್ರೆ ಅವು ಕೇವಲ ಅವು ನಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುವ ತಾಣಗಳು ಅಲ್ಲ. ಅಲ್ಲಿ ನಮ್ಮ ಪುರಾತನ ಸಂಸ್ಕೃತಿ ಇದೆ. ವಾಸ್ತುಶಿಲ್ಪದ ಅಮೋಘ ಪರಿಕಲ್ಪನೆ ಇವೆ. ಒಂದೊಂದು ದೇಗುಲಕ್ಕೆ ಒಂದೊಂದು ಥರದ ವೈಶಿಷ್ಟ್ಯ ಇರುವಂತೆ ನಾಗ ಮಂಗಲದ ಈ ಸೌಮ್ಯ ಕೇಶವ ದೇಗುಲ ಕೂಡ ಅನೇಕ ವಿಧವಾದ ವಿಶೇಷತೆಗಳು ಇವೆ. ಈ ದೇಗುಲಕ್ಕೆ ಹೋದ್ರೆ ಕಠಿಣ ಸರ್ಪ ದೋಷಗಳು ಪರಿಹಾರ ಆಗುವುದು ಮಾತ್ರವಲ್ಲದೆ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುತ್ತಂತೆ. ಬನ್ನಿ ಹಾಗಾದರೆ ನಾಗಮಂಗಲದ ಸೌಮ್ಯ ಕೇಶವನ ದೇವಸ್ಥಾನಕ್ಕೆ ಹೋದಾಗ ಸಂಸ್ಥೆಗಳಿಂದ ಮುಕ್ತಿ ಹೊಂದಲು ಮಾಡಿಸಬಹುದಾದ ಪೂಜೆಗಳು ಯಾವುವು ಅಲ್ಲಿನ ವಿಶೇಷತೆಗಳು ಏನು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿತವಾದ ನಾಗಮಂಗಲದ ಸೌಮ್ಯ ಕೇಶವನ ದೇವಾಲಯವನ್ನು ಹೊಯ್ಸಳ ಹಾಗೂ ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ಹಂತ ಹಂತವಾಗಿ ನಿರ್ಮಿಸಿದ್ದು ಈ ದೇವಾಲಯವು ಗೋಪುರ ಗರ್ಭಗುಡಿ ಪ್ರದಕ್ಷಿಣ ಪಥ ಪಾತಾಳ ಅಂಕಣವನ್ನು ಹೊಂದಿದೆ. ಈ ದೇಗುಲದ ಶಿಖರ ರಾಜ್ಯದ ಅತಿ ಎತ್ತರದ ಶಿಖರ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದ್ದು ಈ ಆಲಯದ ಗೋಪುರವನ್ನು ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ.

 

ನಕ್ಷತ್ರ ಆಕಾರದ ಜಗತಿಯ ಮೇಲೆ ನಿರ್ಮಿತವಾದ ಈ ದೇಗುಲವು. ದೇವರಾಗಿ ಸೌಮ್ಯ ಕೇಶವ ಆರಾಧಿಸಲ್ಪಡೂತ್ತಿದ್ದಾನೆ. ಇಲ್ಲಿನ ಕೇಶವನ ವಿಗ್ರಹವು ಸೌಮ್ಯವಾದ ಮುಖವನ್ನು ಹೊಂದಿರುವುದರಿಂದ ಇಲ್ಲಿ ನೆಲೆಸಿರುವ ಪರಮಾತ್ಮನನ್ನು ಸೌಮ್ಯ ಕೇಶವ ಎಂದು ಹೇಳಲಾಗುತ್ತದೆ. ಬೇರೆಲ್ಲ ಕೇಶವನ ದೇಗುಲಗಳಲ್ಲಿ ಸ್ವಾಮಿಯು ಬಲ ಕೈಯಲ್ಲಿ ಚಕ್ರ ಎಡಗೈಯಲ್ಲಿ ಶಂಖ ಹಿಡಿದು ದರ್ಶನವನ್ನು ನೀಡಿದ್ರೆ, ಈ ಕ್ಷೇತ್ರದಲ್ಲಿ ಸ್ವಾಮಿಯು ಬಲಗೈಯಲ್ಲಿ ಶಂಖ ಎಡಗೈಯಲ್ಲಿ ಚಕ್ರ ಹಿಡಿದು ಶ್ರೀದೇವಿ ಭೂದೇವಿ ಸಮೇತನಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಈ ಸ್ವಾಮಿಯ ದರ್ಶನದಿಂದ ಗೃಹ ದೋಷಗಳು ನಿವಾರಣೆ ಆಗುತ್ತೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಕ್ಷೇತ್ರಕ್ಕೆ ಬಂದು ಅಂಗಾರಕ ಸಂಕಷ್ಟಿ ಗಣ ಹವನ ಗಣೇಶನಿಗೆ ಕಡಲೆಕಾಳು ಪೂಜೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತರೆ ಅವಿವಾಹಿತರಿಗೆ ಕಂಕಣಬಲ ಅನಾರೋಗ್ಯದಿಂದ ಬಳಲುವವರಿಗೆ ಉತ್ತಮ ಆರೋಗ್ಯ ದೊರಕುತ್ತದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಭುವನೇಶ್ವರಿ ಮಂಡಲ ಮೇಲ್ಭಾಗದಲ್ಲಿ 108 ಸರ್ಪವು ಶಂಖುವುಗೆ ಸುತ್ತು ಹಾಕಿರುವ ವಿಶೇಷವಾದ ಕೆತ್ತನೆ ಇದೆ. ಹಾಗಾಗಿ ಇಲ್ಲಿ ವಿಶೇಷವಾದ ಶಕ್ತಿಯೊಂದು ಇದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಬಂದು ನಾಗಮಂಡಲ ಪೂಜೆ ಮಾಡಿಸಿದರೆ ಸಕಲ ಸರ್ಪ ದೋಷಗಳು ನಿವಾರಣೆ ಆಗಿ ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿ ಆಗುತ್ತೆ ಎಂದು ಹೇಳಲಾಗುತ್ತಿದೆ.

 

ಇನ್ನೂ ಇಲ್ಲಿ ಸಾಲಿಗ್ರಾಮ ಶಿಲೆಯ ನಾಗದೇವರ ಮೂರ್ತಿ ಇದ್ದು ಈ ದೇವನಿಗೆ ಪೂಜೆಯನ್ನು ಮಾಡಿಸುತ್ತಿವಿ ಎಂದು ಹರಕೆ ಹೊತ್ತರೆ ಕಾಳ ಸರ್ಪ ದೋಷಗಳು ಪಿತೃ ದೋಷ ಕುಜ ದೋಷ ರಾಹು ದೋಷ ಶನಿ ದೋಷ ಹಾಗೂ ಸಕಲ ನಾಗ ದೋಷಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಕ್ಷೇತ್ರವನ್ನು ಸಕಲ ದೋಷ ನಿವಾರಣಾ ಕ್ಷೇತ್ರ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಸೌಮ್ಯ ಕೇಶವ ಗುಡಿಯ ಗರ್ಭ ಬಾಗದಲ್ಲಿ ಶ್ರೀದೇವಿ ಭೂದೇವಿ ಸಮೇತನಾಗಿ ನೆಲೆನಿಂತು ದರ್ಶನ ನೀಡುತ್ತಿದ್ದಾನೆ. ನರಸಿಂಹ ಸ್ವಾಮಿ ಲಕ್ಷ್ಮೀದೇವಿಯನ್ನು ತೊಡೆಯ ಮೇಲೆ ಕುಳ್ಳಿರಿಸಿ ಭಕ್ತರಿಗೆ ದಿವ್ಯ ರೂಪವನ್ನು ತೋರುತ್ತಿದ್ದಾರೆ. ಇನ್ನೂ ಸೌಮ್ಯ ಕೇಶವನ ಎಡ ಭಾಗದಲ್ಲಿ ವೇಣುಗೋಪಾಲ ಸ್ವಾಮಿ ಸತ್ಯಭಾಮೆ ಹಾಗೂ ರುಕ್ಮಿಣಿ ಜೊತೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾನೆ. ಅಲ್ಲದೆ ಈ ಕ್ಷೇತ್ರಕ್ಕೆ ಬಂದು ನಿಂಬೆ ಹಣ್ಣಿನ ಸಿಪ್ಪೆ ದೀಪವನ್ನು ಬೆಳಗಿದರೆ ಮನಸ್ಸಿನ ಕೋರಿಕೆ ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತಿದೆ. ದೇಗುಲವನ್ನು ನಿತ್ಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಮಧ್ಯಾನ 3 ರಿಂದ ರಾತ್ರಿ 8 ರ ವರೆಗೂ ದರ್ಶನ ಮಾಡಬಹುದು. ಈ ದೇಗುಲವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಕೇಶವನ ದರ್ಶನವನ್ನು ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *