ಋಷ್ಯಶೃಂಗ ಮುನಿಗಳಿಗೆ ಕಾಳಿಕಾ ದೇವಿಯು ಪ್ರತ್ಯಕ್ಷಳಾಗಿ ಆಶೀರ್ವದಿಸಿದ ದಿವ್ಯ ಕ್ಷೇತ್ರವಿದು.!!!

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಸವದತ್ತಿ ಯಲ್ಲಮ್ಮನ ಯಾರು ತಾನೇ ಕೇಳಿಲ್ಲ ಹೇಳಿ. ಜೀವಮಾನದಲ್ಲಿ ಒಮ್ಮೆ ಸವದತ್ತಿಗೆ ಹೋಗಿ ಯಲ್ಲಮ್ಮನ ದರ್ಶನವನ್ನು ಪಡಿಬೇಕು ಅಂತ ಹಲವಾರು ಮಂದಿ ಆಸೆ ಪಟ್ಟಿರುತ್ತಾರೆ. ಆಸೆ ಪಟ್ಟಂತೆ ಸವದತ್ತಿ ಗೆ ಹೋಗಿ ಬರ್ತಾರೆ. ಆದ್ರೆ ಎಷ್ಟೋ ಮಂದಿಗೆ ಯಲ್ಲಮ್ಮನ ಗುಡ್ಡದ ಸಮೀಪದಲ್ಲಿ ಇರೋ ರಾಮ ಲಕ್ಷ್ಮಣರು ಭೇಟಿ ನೀಡಿದ ಈ ದೇಗುಲದ ಬಗ್ಗೆ ಗೊತ್ತೇ ಇರೋದಿಲ್ಲ. ಬನ್ನಿ ಹಾಗಾದರೆ ಸಾಕ್ಷಾತ್ ಶ್ರೀರಾಮಚಂದ್ರ ಪ್ರಭು ಕೂಡ ದರ್ಶನ ಪಡೆದ ಆ ದೇವಸ್ಥಾನ ಯಾವುದೂ ಅಲ್ಲಿನ ಕ್ಷೇತ್ರ ಮಹಾತ್ಮೆ ಏನು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಶಿರಸಂಗಿ ಎಂಬ ಊರಿನಲ್ಲಿ ಭಕ್ತ ಜನರನ್ನು ಉದ್ಧರಿಸಲು ಜಗನ್ಮಾತೆ ಕಾಳಿ ರೂಪದಲ್ಲಿ ನೆಲೆ ನಿಂತಿದ್ದು ಈ ಆಲಯವನ್ನು ಸುಮಾರು 12 ನೇ ಶತಮಾನದಲ್ಲಿ ಹೆಮ್ಮೆಯ ನಾಯಕನು ಕಟ್ಟಿಸಿದ ಎಂಬ ಐತಿಹ್ಯ ಇದೆ. ಕಾಳಿಕಾ ದೇವಿಯನ್ನು ವಿಶ್ವಕರ್ಮರ ಆರಾಧ್ಯ ದೇವತೆ ಎಂದು ಕರೆಯಲಾಗುತ್ತದೆ. ಋಷ್ಯಶೃಂಗರಿಗೆ ಕಾಳಿಕಾ ದೇವಿಯು ಈ ಸ್ಥಳದಲ್ಲಿ ಪ್ರತ್ಯಕ್ಷಳಾಗಿ ಆಶೀರ್ವಾದ ನೀಡಿದಳು ಎಂದು ಹೇಳಲಾಗುತ್ತದೆ. ದೇವಾಲಯದ ಗರ್ಭ ಗೃಹದಲ್ಲಿ ತಾಯಿ ಕಾಳಿಕಾ ಮಾತೆಯ ವಿಗ್ರಹವು 9 ಅಡಿ ಎತ್ತರವಾಗಿದ್ದು ಈ ವಿಗ್ರಹವನ್ನು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿದೆ. ದೇವಿಯು ಕೈಯಲ್ಲಿ ಖಡ್ಗ ತ್ರಿಶೂಲ ಡಮರು ಸರ್ಪ ಪಾನ ಪಾತ್ರೆಗಳನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಈ ದೇವಿಯ ಸನ್ನಿಧಾನಕ್ಕೆ ಬಂದು ಮನದ ಅಭಿಷ್ಟೆಗಳು ಎಲ್ಲವೂ ನೆರವೇರಲಿ ಎಂದು ತೆಂಗಿನ ಕಾಯಿ ಕಟ್ಟಿ ಹೋದ್ರೆ ನಮ್ಮ ಮನದಾಸೆಗಳು ಬೇಗ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತಿದೆ.

 

ಆಸೆ ಪೂರ್ಣವಾದ ಬಳಿಕ ತೆಂಗಿನ ಕಾಯಿಯನ್ನು ಬಿಚ್ಚಿಸಿ ಅದರ ನೀರಿನಿಂದ ದೇವಿಗೆ ಅಭಿಷೇಕ ಮಾಡ್ಬೇಕು ಎಂದು ಹೇಳಲಾಗುತ್ತದೆ. ಅತ್ಯಂತ ಕರುಣಾ ಪೂರಿತಳು ಆದ ಕಾಳಿಕಾ ದೇವಿಯು ಈ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ರೋಚಕ ಕಥೆ ಕೂಡ ಇದೆ. ಹಿಂದೆ ಈ ಸ್ಥಳದಲ್ಲಿ ಋಷ್ಯಶೃಂಗ ಮುನಿಗಳು ವಾಸ ಮಾಡುತ್ತಾ ತಪಸ್ಸು ಮಾಡುತ್ತಿರುವಾಗ ನಾಲಂದಾಸುರ ಬೆಟ್ಟಸುರ ಚಿಕ್ಕ ಕುಂಬಾಸರ ಕಿರಿ ಕುಂಬಾಸರ ಮತ್ತು ನರುಂದಾಸುರ ಎಂಬ ರಾಕ್ಷಸರು ಬಂದು ಮುನಿಗಳ ತಪಸ್ಸನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ ಇದರಿಂದ ಕುಪಿತಗೊಂಡ ಮುನಿಗಳು ತಾಯಿ ಕಾಳಿಕಾ ದೇವಿಯನ್ನು ಪ್ರಾರ್ಥಿಸುತ್ತಾರೆ. ಇವರ ಭಕ್ತಿಗೆ ಮೆಚ್ಚಿ ಕಾಳಿಕಾ ದೇವಿಯು ಪ್ರತ್ಯಕ್ಷಳಾಗಿ ಐದು ಜನ ರಾಕ್ಷಸರನ್ನು ಸಂಹರಿಸಿ ಅವರ ರಿಂದ ಮಾಲೆಗಳನ್ನು ಕೊರಳಿಗೆ ಧರಿಸಿ ಈ ಸ್ಥಳದಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಒಂದು ಬಾರಿ ಶ್ರೀರಾಮ ಲಕ್ಷ್ಮಣರು ಕೂಡ ಈ ಸ್ಥಳಕ್ಕೆ ಬಂದು ಕಾಳಿಕಾ ದೇವಿಯನ್ನು ದರ್ಶನ ಮಾಡಿ ಹೋಗಿದ್ದರು ಎಂದು ಇಲ್ಲಿನ ಸ್ಥಳ ಮಹಾತ್ಮೆಯಲ್ಲಿ ಹೇಳಲಾಗಿದೆ. ಸ್ನೇಹಿತರೆ ಈ ಕ್ಷೇತ್ರದಲ್ಲಿ ಯುಗಾದಿ ಸಮಯದಂದು ಕಾಳಿಕಾ ದೇವಿಯ ಪಲ್ಲಕ್ಕಿ ಉತ್ಸವ ನಡೆಯುತ್ತೆ ಈ ಸಮಯದಲ್ಲಿ ರೈತರು ದೇವಿಗೆ ಧಾನ್ಯಗಳನ್ನು ಸಮರ್ಪಿಸಿ ಬಹು ಕಾಲ ಧಾನ್ಯದ ಕೊರತೆ ಉಂಟಾಗದಂತೆ ಕಾಪಾಡು ಎಂದು ಬೇಡಿಕೊಳ್ಳುತ್ತಾರೆ.

 

ಎಲ್ಲರೂ ಸೇರುವ ಇಲ್ಲಿನ ಪಲ್ಲಕ್ಕಿ ಉತ್ಸವಧಲ್ಲಿ ಅನ್ನವನ್ನು ರುಂಡಾಕಾರದಲ್ಲಿ ಮಾಡಿ ಬಟ್ಟೆಯಲ್ಲಿ ಕಟ್ಟಿ ಮೇಲಕ್ಕೆ ಎಸೆಯಲಾಗುತ್ತೆ. ಅನ್ನದ ಉಂದೆ ಯಾರಿಗೆ ಸಿಗುತ್ತೋ ಅವರಿಗೆ ಯಾವತ್ತೂ ಅನ್ನ ಮತ್ತು ವಸ್ತ್ರದ ಕೊರತೆ ಉಂಟಾಗುವುದಿಲ್ಲ ಎಂದು ಇಲ್ಲಿಗೆ ಬರುವ ಭಕ್ತರ ಮನದ ಮಾತಾಗಿದೆ. ಇನ್ನೂ ದೇಗುಲದಿಂದ ತುಸು ದೂರದಲ್ಲಿರುವ ಜಾಗದಲ್ಲಿ ಭಿಮಾರತಿ ಹಾಗೂ ಖಡ್ಗ ತೀರ್ಥ ಎಂಬ ಹೊಂಡಗಳು ಇದ್ದು ಈ ಹೊಂಡಗಳ ಪಕ್ಕದಲ್ಲಿ ಇರುವ ಗುಡ್ಡದ ಮೇಲೆ ಕಾಳಿಕಾ ಮಾತೆಯ ಹೆಜ್ಜೆಯ ಗುರುತುಗಳನ್ನು ಇವೆ. ಇನ್ನೂ ನವರಾತ್ರಿ ಸಮಯದಲ್ಲಿ ಈ ದೇವಿಗೆ ಒಂಭತ್ತು ದಿನಗಳು ಒಂದೊಂದು ಬಗೆಯ ಅಲಂಕಾರ ಮಾಡುತ್ತಾರೆ. ಆ ಸಮಯದಲ್ಲಿ ಸರ್ವಾಭರಣ ಭೋಷಿತೆ ಆದ ಅಮ್ಮನನ್ನು ನೋಡುವುದೇ ಪೂರ್ವ ಜನ್ಮದ ಪುಣ್ಯ ಆಗಿದೆ. ಭಕ್ತರು ಬೇಡಿದ ವರಗಳನ್ನು ಕರುಣಿಸುವ ಈ ಜಗನ್ಮಾತೆಯನ್ನು ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10 ವರೆಗೆ ದರ್ಶನ ಮಾಡಬಹುದು. ಪುರಾಣ ಪ್ರಸಿದ್ಧ ಕಾಳಿಕಾ ದೇವಿಯ ಈ ದೇವಸ್ಥಾನ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಎನ್ನುವ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಜೀವನದಲ್ಲಿ ಭೇಟಿ ನೀಡಿ ತಾಯಿಯ ಕೃಪೆಗೆ ಪಾತ್ರರಾಗಿ. ಶುಭದಿನ.

Leave a Reply

Your email address will not be published. Required fields are marked *