ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಎಕ್ಕದ ಗಿಡ ದ ಔಷಧ ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ಎಷ್ಟೇ ಹಳೆಯದಾದ ಮಂಡಿ ನೋವು ನಿಮ್ಮನ್ನು ಬೆನ್ನು ಬಿಡದೆ ಕಾಡುತ್ತಿದ್ದರೆ ಅದಕ್ಕೆ ಈ ಎಕ್ಕದ ಗಿಡ ರಾಮಬಾಣ ಇದ್ದಂತೆ. ಮಂಡಿನೋವು ಅನ್ನುವುದು ಇತ್ತೀಚಿನ ದಿನಗಳಲ್ಲಿ ಮಂಡಿನೋವು ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಅದರಲ್ಲೂ ವಯಸ್ಕರಲ್ಲಿ ಈ ಸಮಸ್ಯೆಯನ್ನು ನಾವು ಅಧಿಕವಾಗಿ ಕಾಣಬಹುದು. ಆದರೆ ಈಗಿನ ಆಧುನಿಕ ಕಾಲದಲ್ಲಿ ಜನರೂ ಮೂವತ್ತು ವಯಸ್ಸು ದಾಟುವುದಿಲ್ಲ ಅವರಿಗೆ ಇಂತಹ ಸಮಸ್ಯೆಗಳು ಒಂದೊಂದಾಗಿ ಬರುತ್ತಾ ಶುರು ಆಗುತ್ತದೆ. ಎಂಥಹ ಎಣ್ಣೆಯನ್ನು ಹಚ್ಚಿದರು ಕೂಡ ವೈದ್ಯರ ಹತ್ತಿರ ತಪಾಸಣೆಗೆ ಹೋದರು ಕೂಡ ಕಡಿಮೆ ಆಗದೇ ಅಸಂತೃಪ್ತ ಭಾವನೆಯನ್ನು ಹೊಂದಿದ್ದರೆ ನಾವು ತಿಳಿಸುವ ಈ ಮನೆಮದ್ದು ಒಮ್ಮೆ ಪ್ರಯತ್ನ ಮಾಡಿ ನೋಡಿ ಖಂಡಿತವಾಗಿ ನಿಮಗೆ ಎಂಥಹ ಹಳೆಯದಾದ ಮಂಡಿನೋವು ಇದ್ದರೂ ಕೂಡ ಮಾಯವಾಗುತ್ತದೆ.
ನಿಮ್ಮ ಮನೆಯಲ್ಲಿ ಅಥವಾ ನಿಸರ್ಗದಲ್ಲಿ ಸಿಗುವ ಈ ಗಿಡವನ್ನು ತಂದು ಮನೆಮದ್ದು ತಯಾರಿಸಿ ನೋವು ಬಳಕೆ ಮಾಡಿದ್ದೇ ಆದಲ್ಲಿ ಖಂಡಿತವಾಗಿ ಮಂಡಿನೋವು ನಿವಾರಣೆ ಆಗುತ್ತದೆ. ಹಾಗಾದರೆ ಬನ್ನಿ ಅದು ಯಾವ ಮನೆಮದ್ದು ಹೇಗೆ ಸಿದ್ದ ಪಡಿಸಿ ಕೊಳ್ಳಬೇಕು ಅಂತ ತಿಳಿಯೋಣ. ಎಕ್ಕದ ಗಿಡ. ಹೌದು ಇದೊಂದು ಅದ್ಭುತವಾದ ಸದ್ಯವಾಗಿದೆ. ಇದನ್ನು ನೀವು ಮನೆಮದ್ದು ಆಗಿ ಬಳಕೆ ಮಾಡಿದರೆ ಸಾಕು ಮಂಡಿನೋವು ಮಾಯವಾಗುತ್ತದೆ. ನಾವು ತಿಳಿಸುವ ಈ ಎರಡು ವಿಧಾನಗಳಲ್ಲಿ ನೀವು ಇದನ್ನು ತಯಾರಿಸಿಕೊಂಡು ಬಳಕೆ ಮಾಡಿದರೆ ಖಂಡಿತವಾಗಿ ಮಂಡಿನೋವು ದೂರವಾಗುತ್ತದೆ. ಮೊದಲನೆಯ ವಿಧಾನ 4-5 ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಅವುಗಳನ್ನು ಬಟ್ಟೆಯ ಸಹಾಯದಿಂದ ಒಣಗಿಸಿಕೊಳ್ಳಿ. ತದ ನಂತರ ಒಂದು ಪಾತ್ರೆಯಲ್ಲಿ ಎಳ್ಳೆಣ್ಣೆಯನ್ನು ಕಾಯಿಸಿ ಕೊಳ್ಳಿ.
ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ನಾಲ್ಕೈದು ಎಕ್ಕದ ಎಲೆಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಎಲ್ಲಿಯವರೆಗೆ ಹುರಿಯಬೇಕು ಅಂದ್ರೆ ಎಕ್ಕದ ಎಲೆಗಳು ಎಲ್ಲ ಜೀವಸತ್ವಗಳು ಎಣ್ಣೆಯಲ್ಲಿ ಬಿಡುವಂತೆ ಫ್ರೈ ಮಾಡಿಕೊಳ್ಳಬೇಕು. ನಂತರ ತಣ್ಣಗಾದ ಮೇಲೆ ಅದನ್ನು ಸೋಸಿಕೊಳ್ಳಿ. ಈಗ ಈ ಮನೆಮದ್ದು ಸಿದ್ಧವಾಗಿದೆ. ಈ ಎಣ್ಣೆಯನ್ನು ನೀವು ಮಂಡಿನೋವು ಇದ್ದ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಈ ಒಂದು ಮನೆಮದ್ದು ಅನ್ನು ನೀವು ರಾತ್ರಿ ಮಲಗುವ ಮುನ್ನವೇ ಮಾಡಬೇಕು. ಆ ಸಮಯದಲ್ಲಿ ಮಾಡಿದರೆ ತುಂಬಾನೇ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಹೀಗೆ ಮಾಡುವುದರಿಂದ ಖಂಡಿತವಾಗಿ ಮಂಡಿನೋವು ಕಡಿಮೆ ಆಗುತ್ತಾ ಬರುತ್ತದೆ. ಇನ್ನೂ ಎರಡನೆಯದು, ಎಕ್ಕದ ಎಲೆಯನ್ನು ತೆಗೆದುಕೊಂಡು ಅದನ್ನು ಒಣಗಿಸಿ ಪುಡಿ ಮಾಡಿ ನೋವು ಇದ್ದ ಜಾಗಕ್ಕೆ ಹಚ್ಚಿ ಸುತ್ತಲೂ ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಹೀಗೆ ಮಾಡುತ್ತಾ ಬಂದರೆ ಎಷ್ಟೇ ಹಳೆಯದಾದ ಮಂಡಿನೋವು ಗುಣಮುಖ ಆಗುತ್ತದೆ. ಈ ಒಂದು ಮನೆಮದ್ದು ನಿಜಕ್ಕೂ 100% ಫಲಿತಾಂಶ ನೀಡುತ್ತದೆ. ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ ಹಾಗೆಯೇ ಇದರಿಂದ ನಿಮಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಬದಲಾಗಿ ಆರಾಮದಾಯಕವಾದ ರಿಸಲ್ಟ್ ದೊರೆಯುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ. ಶುಭದಿನ.