ಬೇಯಿಸಿ ಈರುಳ್ಳಿಯನ್ನು ತಿನ್ನುವ ಬದಲು ಹಸಿಯಾಗಿ ತಿಂದರೆ ಏನಾಗುತ್ತದೆ ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಈರುಳ್ಳಿ ಅಂದರೆ ನಮಗೆ ತಕ್ಷಣವೇ ನೆನಪಿಗೆ ಬರುವುದು ಕಣ್ಣೀರು. ಈರುಳ್ಳಿಯನ್ನು ಕತ್ತರಿಸುವಾಗ ಪ್ರತಿಯೊಬ್ಬರಿಗೂ ಕಣ್ಣೀರು ಬರುತ್ತದೆ. ಆದರೆ ಈ ಈರುಳ್ಳಿ ಇಲ್ಲದೆ ಅಡುಗೆ ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಬೆಳಿಗ್ಗೆ ಇಂದ ಹಿಡಿದು ಸಂಜೆ ರಾತ್ರಿಯವರೆಗೆ ಅಡುಗೆ ಸ್ನಾಕ್ಸ್ ಎಲ್ಲವನ್ನು ತಯಾರು ಮಾಡಲು ಈ ಈರುಳ್ಳಿ ನಮಗೆ ಬೇಕೆ ಬೇಕಾಗುತ್ತದೆ. ಈರುಳ್ಳಿ ಹಲವು ಬಗೆಯ ಆಯಾಮಗಳಲ್ಲಿ ನಮಗೆ ಉಪಯೋಗಕ್ಕೆ ಬರುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿ ಹಸಿಯಾಗಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಪ್ರತಿನಿತ್ಯವೂ ಈರುಳ್ಳಿ ಮತ್ತು ಬೆಲ್ಲವನ್ನು ಸೇವನೆ ಮಾಡುತ್ತಾ ಬಂದರೆ ಹೃದ್ರೋಗದ ಸಮಸ್ಯೆಯಿಂದ ಪಾರಾಗಬಹುದು.

 

ಹಾಗಾದರೆ ಬನ್ನಿ ಪ್ರತಿನಿತ್ಯವೂ ಈರುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ಈರುಳ್ಳಿಯಲ್ಲಿ ಹಲವಾರು ಬಗೆಯ ಆಂಟಿ ಆಕ್ಸಿಡೆಂಟ್ ಗಳು ಇವೆ. ಇವು ಹಲವಾರು ಬಗೆಯ ಕಾಯಿಲೆಯನ್ನು ಹೊಡೆದೋಡಿಸುತ್ತದೆ. ಜೊತೆಗೆ ಆಂಟಿ ಇನ್ಫ್ಲಮೆಟರಿ ಗುಣಗಳು ಕೂಡ ಹೊಂದಿವೆ. ಅದಕ್ಕಾಗಿ ಈರುಳ್ಳಿ ಅನೇಕ ರೋಗಗಳಿಗೆ ದಿವ್ಯ ಔಷಧವಾಗಿ ಕೆಲಸವನ್ನು ಮಾಡುತ್ತದೆ. ನಮ್ಮ ರಕ್ತದಲ್ಲಿ ಆಗುವ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ವಾಸಿಟಿನ್ ಎಂಬ ಅಂಶ ಅಪಾರವಾದ ಪ್ರಮಾಣದಲ್ಲಿ ಒಳಗೊಂಡಿದೆ. ಮುಖ್ಯವಾಗಿ ರಕ್ತದೋತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೃದಯಕ್ಕೆ ತೊಂದರೆ ಆಗದಂತೆ ಹಾಗೂ ಹೃದಯ ಬಡಿತ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಈರುಳ್ಳಿ ನೋಡಿಕೊಳ್ಳುತ್ತದೆ. ಹೃದಯದ ಕಾರ್ಯ ಚಟುವಟಿಕೆಗೆ ತುಂಬಾನೇ ಸಹಾಯ ಮಾಡುತ್ತದೆ.
ಅಮೆರಿಕ ಅಧ್ಯಯನ ಪ್ರಕಾರ ಈರುಳ್ಳಿಯನ್ನು ಬೇಯಿಸಿ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಇರುವ ಶಕ್ತಿಯನ್ನು ಕಳೆದು ಕೊಳ್ಳುತ್ತದೆ.

 

ಇದರಿಂದ ನಿಮಗೆ ಯಾವುದೇ ಆರೋಗ್ಯದ ಪ್ರಯೋಜನಗಳು ದೇಹಕ್ಕೆ ಸಿಗುವುದಿಲ್ಲ. ಅದಕ್ಕಾಗಿ ಬೇಯಿಸಿ ಈರುಳ್ಳಿಯನ್ನು ತಿನ್ನುವ ಬದಲು ಹಸಿಯಾಗಿ ಈರುಳ್ಳಿ ತಿನ್ನಿ. ಹೀಗಾಗಿ ನಿಮ್ಮ ಆಹಾರದಲ್ಲಿ ಹಸಿಯಾದ ಈರುಳ್ಳಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿದ ತಿನ್ನುವುದು ತುಂಬಾನೇ ಒಳ್ಳೆಯದು. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಈರುಳ್ಳಿಯನ್ನು ಹಾಕಿ ಸೇವನೆ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಹಸಿ ಈರುಳ್ಳಿಯನ್ನು ತಿಂದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಎಂಬ ಹಠ ಬೇಡ ಮಿತ್ರರೇ ನಿಮಗೆ ಇಂತಹ ಅನಾರೋಗ್ಯದ ಸಮಸ್ಯೆಗಳು ಇದ್ದರೆ ಖಂಡಿತವಾಗಿ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಇನ್ನೂ ಈರುಳ್ಳಿಯಲ್ಲಿ ಸೋಡಿಯಂ, ಪೊಟ್ಯಾಶಿಯಮ್, ಫೋಲೇಟ್‌ಗಳು, ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಇನ್ನು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಕೇವಲ ಆಹಾರಕ್ಕೆ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿದೆ ಎಂದು ಗುರುತಿಸಲಾಗಿದೆ. ಇದು ತಲೆನೋವು, ಹೃದ್ರೋಗ, ಬಾಯಿ ಹುಣ್ಣುಗಳಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ಈರುಳ್ಳಿ ಕೇವಲ ಔಷಧಿಯಾಗಿ, ಆಹಾರಕ್ಕಾಗಿ ಮಾತ್ರವಲ್ಲ, ಬದಲಾಗಿ ಸೌಂದರ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈರುಳ್ಳಿಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಹೊಂದಿದೆ. ಅಲ್ಲದೆ, ಪಿಗ್ಮೆಂಟೇಶನ್‌ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *