ದಾಸವಾಳ ಹೂವಿನ ದಳಗಳನ್ನು ಪುಡಿ ಮಾಡಿ ಕೂದಲಿಗೆ ಹಚ್ಚಿದರೆ ಸಾಕು ತಲೆ ಕೂದಲು ಉದುರುವುದಿಲ್ಲ?ಇಲ್ಲಿದೆ ನೋಡಿ ಮಾಹಿತಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ವೇದ ಮತ್ತು ಪುರಾಣಗಳಲ್ಲಿ ಸಂಜೀವಿನಿ ಸೇವನೆ ಮಾಡಿದರೆ ನಮಗೆ ಮುಪ್ಪು ಬರುವುದಿಲ್ಲ ಯವ್ವನ ಕಳಚಿ ಹೋಗುವುದಿಲ್ಲ ಕೊನೆಗೆ ಸಾವು ಕೂಡ ಬರುವುದಿಲ್ಲ ಅಂತ ಹೇಳಲಾಗಿದೆ.
ಈ ಸಂಜೀವಿನಿ ಸಸ್ಯ ಮೊದಲಿನ ಕಾಲದಲ್ಲಿ ದೊರೆಯುತ್ತಿತ್ತು. ಹೀಗಾಗಿ ಇದು ಈಗ ಸಿಗುತ್ತದೆ ಇಲ್ಲವೋ ಎಂಬ ಬರೀ ಕಲ್ಪನೆಯಲ್ಲಿ ಇದ್ದೇವೆ. ಅಂಥಹ ಸಂಜೀವಿನಿ ಇಲ್ಲದೇ ಇದ್ದರೂ ಕೂಡ ಅದರಂತೆ ಆರೋಗ್ಯಕರ ಗುಣಗಳನ್ನು ನೀಡುವ ಔಷಧಗಳನ್ನು ನಮ್ಮ ಪ್ರಕೃತಿ ನಮಗೆ ದೊರಕಿಸಿ ಕೊಟ್ಟಿದ್ದೆ. ಅಂಥಹ ಆಯುರ್ವೇದದ ಸಸ್ಯ ಶಾಸ್ತ್ರದಲ್ಲಿ ಯಾವುದು ಅಂತ ನಿಮಗೆ ಹೇಳುವುದಾದರೆ ಅದು ದಾಸವಾಳದ ಸಸ್ಯವಾಗಿದೆ.
ದಾಸವಾಳ ಹೂವು ಅನ್ನು ನಾವು ದೇವರಿಗೆ ಪೂಜೆ ಮಾಡಲು ಬಳಕೆ ಮಾಡುತ್ತೇವೆ. ಅಲ್ಲದೆ ಈ ಸಸ್ಯದ ಗಿಡವೂ ವಿವಿಧ ಬಣ್ಣದಲ್ಲಿ ದೊರೆಯುತ್ತದೆ ಜೊತೆಗೆ ಇದನ್ನು ಸುಲಭವಾಗಿ ನೀವು ಮನೆಯ ಕೈತೋಟ ದಲ್ಲಿ ಮಹಡಿ ಮೇಲೆ ಹಚ್ಚಿ ಬೆಳೆಸಬಹುದು.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ದಾಸವಾಳ ಹೂವಿನ ಗಿಡದ ಆರೋಗ್ಯಕರ ಲಾಭಗಳ ಕುರಿತು ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಬಿಪಿ ಶುಗರ್ ಇವೆರಡೂ ಕಾಯಿಲೆ ಇರುವವರು ಇದ್ದೇ ಇರುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದಾಸವಾಳ ಹೂವಿನ ಚಹಾ ಮಾಡಿ ಕುಡಿಯುವುದರಿಂದ ತುಂಬಾನೇ ಲಾಭವಾಗುತ್ತದೆ. ಅದುವೇ ದೇಹದಲ್ಲಿ ಸಂಗ್ರಹಣೆ ಆದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ ಇದರ ಜೊತೆಗೆ ಬಿಪಿ ಅನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮಗೆ ಶುಗರ್ ಲೆವೆಲ್ ಕಡಿಮೆ ಆಗುತ್ತಾ ಬರುತ್ತದೆ. ಮೇಲೆ ಹೇಳಿದಂತೆ ದಾಸವಾಳ ಹೂವಿನಲ್ಲಿ ವಿವಿಧ ವಿಧಗಳಿವೆ ಕೆಂಪು ಬಿಳಿ ಹಳದಿ ದಾಸವಾಳ ಹೂವುಗಳು ನೋಡಲು ಸಿಗುತ್ತವೆ.
ಇವೆಲ್ಲದರಲ್ಲಿ ಬಿಳಿ ದಾಸವಾಳ ಹೂವಿನ ಚಹಾ ಮಾಡುವುದು ಬಹಳ ಸೂಕ್ತ.ಇದರಲ್ಲಿ ಇರುವ ವಿಟಮಿನ್ ಗಳು ಖನಿಜಗಳು ನಮ್ಮ ಆರೋಗ್ಯವನ್ನು ದುಪ್ಪಟ್ಟು ಮಾಡುತ್ತದೆ.

 

ಇನ್ನೂ ದಾಸವಾಳ ಹೂವಿನ ಚಹಾ ಹೇಗೆ ಮಾಡುವುದು ಅಂತ ಹೇಳುವುದಾದರೆ, ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಹಾಕಿ ಕುದಿಸಿ ಅದರಲ್ಲಿ ದಾಸವಾಳ ಎಲೆಗಳನ್ನು ಹಾಕಿ. ಚೆನ್ನಾಗಿ ಕುದಿಸಿ ಸೋಸಿ ಕುಡಿಯಿರಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಚೈತನ್ಯದಿಂದ ಇರುತ್ತೀರಿ. ಇದನ್ನು ಹೆಚ್ಚಾಗಿ ಬೆಳೆಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಇನ್ನೂ ಯಾರಿಗೆ ಉರಿ ಮೂತ್ರದ ಸಮಸ್ಯೆ ಇರುತ್ತದೆಯೋ ಅಂಥವರು ಬಿಳಿ ದಾಸವಾಳ ಹೂವಿನ ರಸದಲ್ಲಿ ಕಲ್ಲು ಸಕ್ಕರೆ ಮತ್ತು ಹಾಲು ಹಾಕಿ ಕುಡಿದರೆ ಸಾಕು ಉರಿ ಮೂತ್ರದ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಯಾರಿಗೆ ರಕ್ತದ ಕೊರತೆ ಇರುತ್ತದೆಯೋ ಅಂಥವರು ಕೆಂಪು ದಾಸವಾಳ ಹೂವಿನ ಚೂರ್ಣವನ್ನು ಮಾಡಿಕೊಂಡು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿ ಕಬ್ಬಿನ ಅಂಶ ಹೆಚ್ಚುತ್ತದೆ ಹಾಗೂ ರಕ್ತಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ. ಅಷ್ಟೇ ಅಲ್ಲದೇ ದೇಹದಲ್ಲಿ ಸಂಗ್ರಹಣೆ ಆದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಅದಕ್ಕಾಗಿ ನೀವು ಈ ದಾಸವಾಳ ಹೂವಿನ ದಳವನ್ನು ಪುಡಿ ಮಾಡಿ ಸೇವನೆ ಮಾಡಿ. ಇನ್ನೂ ಯಾರಿಗೆ ಹೆಚ್ಚು ತಲೆಕೂದಲು ಉದುರುತ್ತದೆ ಅವರು ಈ ದಾಸವಾಳ ಹೂವಿನ ದಳಗಳನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ತಲೆ ಕೂದಲಿಗೆ ಹಚ್ಚಿದರೆ ಸಾಕು ತಲೆ ಕೂದಲು ಉದುರುವುದಿಲ್ಲ ಹೊಟ್ಟು ಕೂಡ ನಿವಾರಣೆ ಆಗುತ್ತದೆ.

Leave a Reply

Your email address will not be published. Required fields are marked *