ಸೆಪ್ಟೆಂಬರ್ 17, 2022 ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ?

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ನಮ್ಮ ಬುದ್ಧಿ ಅನೇಕ ಪದರಗಳ ಕಲ್ಮಶಗಳಿಂದ ಆವೃತ ಆಗಿರುತ್ತೆ. ಇಂದು ಶುಭಕ್ರುತ್ ನಾಮ ಸಂವತ್ಸರ ದಾಕ್ಷಿನಾಯಿನೆ, ವರ್ಷ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ ಇಂದು ಸೆಪ್ಟೆಂಬರ್ 17 ನೇನೆ ತಾರೀಕು ಸಪ್ತಮಿ ರೋಹಿಣಿ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಇಂದು ರೋಹಿಣಿ ನಕ್ಷತ್ರ. ಮೇಷ ರಾಶಿಗೆ ಬಹಳ ಒಳ್ಳೆಯ ದಿನ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮ ಸಂಸಾರದವರಿಗೆ ಬಹಳ ಒಳ್ಳೆಯ ರೀತಿಯಲ್ಲಿ ಭಾವನೆಗಳನ್ನು ಹಂಚಿಕೊಂಡು ಸ್ಪಂದಿಸುವ ದಿನ ಇದಾಗಿರುತ್ತೆ. ವೃಷಭ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ ಮನಸ್ಸಿನಲ್ಲಿ ಬಹಳ ಸಾರ್ಥಕತೆ ಕಾಣುತ್ತೆ. ಮತ್ತು ನೆಮ್ಮದಿ ಎಷ್ಟೊಂದು ಇರುತ್ತೆ ಅಂದ್ರೆ ನಿಮ್ಮ ಜೀವನದಲ್ಲಿ ಇಂತಹ ದಿನವನ್ನು ನೋಡುತ್ತೇನೆ ಎಂದು ನೀವು ಅಂದುಕೊಳ್ಳುವಷ್ಟ ನೆಮ್ಮದಿ ಕಾಣುತ್ತೀರಿ. ಮಿಥುನ ರಾಶಿಯವರಿಗೆ ಇಂದು ಒಳ್ಳೆಯ ದಿನ. ಬಹಳ ಭಾವುಕತೆ ತುಂಬಿದ ದಿನ. ಬೇರೆಯವರು ನಿಮ್ಮ ಭಾವನೆಗಳಿವೆ ಪ್ರತಿಕ್ರಿಯೆಗೆ ಕೊಡದೆ ಹೋಗಬಹುದು. ಎರಡು ದಿನಗಳ ಕಾಲ ಸ್ವಲ್ಪ ಸುಮ್ಮನಿರುವುದು ಒಳ್ಳೆಯದು ನಿಮ್ಮ ಭಾವುಕತೆಯನ್ನು ಬೇರೆಯವರ ಮೇಲೆ ಇವತ್ತ್ಚು ಹೇರದೆ ಇದ್ರೆ ಒಳ್ಳೆಯದು.

 

ಕರ್ಕಾಟಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿನಲ್ಲಿ ಅತಿ ಹೆಚ್ಚಿನ ನೆಮ್ಮದಿ ಗುಂಪುಗಳಲ್ಲಿ ನೀವು ಕಾಣದಷ್ಟು ಭಾವನೆಯನ್ನು ಇವತ್ತು ಕಾಣುತ್ತೀರಿ. ನೀವು ಏನೋ ಅಂದುಕೊಂಡಿದ್ದು ಆದ್ರೆ ಅದು ಇರೋದೇ ಬೇರೆ ಅಂತ ನಿಮಗೆ ಇಂದು ಅರ್ಥವಾಗುತ್ತೆ. ಸಿಂಹ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಭಾವುಕವಾಗಿ ಎಲ್ಲರ ಜೊತೆ ನೀವು ಮಿಡಿಯೋದರಿಂದ ಇವತ್ತು ನಿಮ್ಮ ಭಾವನೆಗಳಲ್ಲಿ ಯಶಸ್ಸು ಸಾಧಿಸುವ ದಿನ ಇಡಾಗಿರುತ್ತೆ. ಕನ್ಯಾ ರಾಶಿಗೆ ಬಹಳ ಒಳ್ಳೆಯ ದಿನ, ಭಾಗ್ಯೋದಯ ಆಗುತ್ತೆ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ತಂದೆ ತಾಯಿಯರು ಅಥವಾ ತಾಯಿ ಸ್ಥಾನದಲ್ಲಿ ಇರುವಂತವರಿಂದ ನೀವು ಹೆಚ್ಚಿನ ಆಶೀರ್ವಾದ ಪಡಿತರ. ತುಲಾ ರಾಶಿಗೆ ಇವತ್ತು ಭಾವನೆ ಜಾಸ್ತಿ ಇರುವಂಥ ದಿನ. ಅನೇಕ ವಿಷಯಗಳಲ್ಲಿ ತುಂಬಾ ಭಾವುಕರಾಗಿ ನೀವು ವ್ಯವಹಾರಗಳನ್ನು ನೀವು ಮಾಡಿಬಿಡಬಹುದು. ಇದರಿಂದ ಬೇರೆಯವರಿಗೆ ತುಂಬಾ ನೋವಾಗದಂತೆ ನಿಮಗೆ ನೋವು ಆಗದಂತೆ ನೋಡಿಕೊಳ್ಳಿ. ವೃಶ್ಚಿಕ ರಾಶಿಗೆ ಬಹಳ ಒಳ್ಳೆಯ ದಿನ. ಇವತ್ತು ಬೇರೆಯವರಿಂದ ಅಂದ್ರೆ ನಿಮ್ಮ ಪಾರ್ಟ್ನರ್ ಇಂದ ಅತಿ ಹೆಚ್ಚಿನ ಭಾವನೆಗಳನ್ನು ನೀವು ನೋಡ್ತೀರಿ.

 

ನನ್ನ ಜೀವನದಲ್ಲಿ ಇಂತಹ ದಿನ ಇರುತ್ತಾ ಎಂದು ಎಣಿಸಿರಲಿಲ್ಲ ಅಂತ ಅಂದುಕೊಳ್ಳುವ ದಿನ ಇದಾಗೀರುತ್ತೆ. ಧನಸ್ಸು ರಾಶಿಗೆ ನಿಮ್ಮ ಸುತ್ತಮುತ್ತಲಿನ ಪರಿಸರದಿಂದ ತುಂಬಾ ನೋವಾಗುವಂತೆ ಭಾಸ ಆಗುತ್ತೆ. ನೀವು ಅಂದುಕೊಂಡಿದ್ದು ಒಂದು ಆದ್ರೆ ಅದು ಇರೋದೇ ಒಂದು ರೀತಿ ಆಗಬಹುದು. ಶತ್ರುಗಳು ಮಿತ್ರಾಗುತ್ತರೆ. ಆದ್ರೆ ಮಿತೃಗಳು ಶತ್ರುಗಳ ಆಗದಂತೆ ನೋಡಿಕೊಳ್ಳಿ. ಮಕರ ರಾಶಿಯವರಿಗೆ ಬಹಳ ಸಮರ್ಪಕವಾದ ದಿನ. ಕಲಾವಿದರಿಗೆ ನಿಮ್ಮ ಭಾವುಕತೆ ಮತ್ತು ನಿಮ್ಮ ಕ್ರಿಯಾಶೀಲತೆ ಮುಗಿಲಿಗೆ ಮುಟ್ಟುವ ದಿವಸ. ಆದ್ದರಿಂದ ಇವತ್ತು ಎಷ್ಟಾಗುತ್ತೋ ಅಷ್ಟು ಹೆಚ್ಚಿನ ಕೆಲಸಗಳನ್ನು ಸಾಧಿಸಿಕೊಳ್ಳಿ. ಕುಂಭ ರಾಶಿಗೆ ಅಮ್ಮ ಸ್ವಲ್ಪ ನಿಮ್ಮ ಮೇಲೆ ಜಾಸ್ತಿ ಬೇಜಾರು ಮಾಡಿಕೊಂಡಿರಬಹುದು. ಅದನ್ನು ಕೊಟ್ಟುಬಿಡಿ ಇದರಿಂದ ನೆಮ್ಮದಿ ಕಾಣುತ್ತೀರಿ. ಮೀನಾ ರಾಶಿಯವರಿಗೆ ನಿಮ್ಮ ಮಿತ್ರರು ಹಾಗೂ ಸಹೋದರರ ಬಗ್ಗೆ ಹೆಚ್ಚಿನ ಗಮನ ಕೊಟ್ಟರೆ ಒಳ್ಳೆಯದಾಗುತ್ತೆ. ನಿಮ್ಮ ಭಾವನೆಯನ್ನು ನೀವು ತೋರಿಸಿಕೊಂದಷ್ಟು ಹೆಚ್ಚು ಮನಸ್ಸಿಗೆ ನೆಮ್ಮದಿ ಕಾಣುತ್ತೀರಿ. ಪುನಃ ನಾವು ನಾಳೆ ನಿಮ್ಮ ಭವಿಷ್ವದೊಂದಿಗೆ ಸಿಗೋಣ. ಶುಭದಿನ.

Leave a Reply

Your email address will not be published. Required fields are marked *