ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ ಆಗಿರುವ ಕಲ್ಲುಗಳನ್ನು ಕರಗಿಸುತ್ತದೆ ಎಳೆನೀರು. ಅದು ಎಷ್ಟು ನಿಜ ಗೊತ್ತೇ??

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಶಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ ಹೃದಯ ಕಿಡ್ನಿ ಲಿವರ್ ಎಲ್ಲವೂ ಕೂಡ ಮುಖ್ಯವೇ. ದೇಹದ ಎಲ್ಲಾ ಭಾಗಗಳು ಮುಖ್ಯವಾಗಿರುತ್ತದೆ. ಅದರಲ್ಲಿ ಯಾವುದಾದರೂ ಒಂದು ಭಾಗವು ಹಾಳಾದರೆ ಇಡೀ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾತಿನಲ್ಲಿ ಸಂಶಯವಿಲ್ಲ ಗೆಳೆಯರೇ. ಹೀಗಾಗಿ ಅಂಥಹ ಪ್ರಮುಖವಾದ ಅಂಗಗಳಲ್ಲಿ ಕಿಡ್ನಿ ಅಥವಾ ಮೂತ್ರಪಿಂಡಗಳು ಮುಖ್ಯವಾದದ್ದು.ದೇಹದ ಪ್ರತಿಯೊಂದು ಅಂಗಗಳಿಗೆ ತನ್ನದೇ ಆದ ಕಾರ್ಯವನ್ನು ನಿರ್ವಹಿಸುತ್ತವೆ. ಹೀಗಾಗಿ ಕಿಡ್ನಿ ಅಥವಾ ಮೂತ್ರಪಿಂಡವೂ ನಮ್ಮ ದೇಹದಲ್ಲಿ ಶೇಖರಣೆ ಆದ ವಿಷಕಾರಿ ಅಂಶಗಳನ್ನು ಮಲ ಮೂತ್ರ ವಿಸರ್ಜನೆ ಮೂಲಕ ಹೊರಗೆ ತೆಗೆದು ಹಾಕುವ ಕೆಲಸವನ್ನು ಮಾಡುತ್ತದೆ. ಇಂತಹ ಕೆಲಸವನ್ನು ಮಾಡುವ ಕಿಡ್ನಿ ಗಳ ಬಗ್ಗೆ ಪ್ರಮುಖವಾಗಿ ಕಾಳಜಿಯನ್ನು ವಹಿಸಬೇಕಾದದ್ದು ಮತ್ತು ಅದಕ್ಕೆ ತಕ್ಕಂತೆ ಸೂಕ್ತವಾದ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಸೂಕ್ತ.ಹಾಗಾದರೆ ಕಿಡ್ನಿ ಆರೋಗ್ಯಕ್ಕೆ ಯಾವೆಲ್ಲ ಆಹಾರವನ್ನು ಸೇವನೆ ಮಾಡಬೇಕೆಂದು ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲಿಗೆ ಹೂಕೋಸು. ಹೌದು ನೋಡಲು ಹೂವಿನಂತೆ ಗಜ ಗಾತ್ರದಲ್ಲಿ ಇದ್ದು ಇದನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಗೋಬಿ ಮಂಚೂರಿ ಅಂದ್ರೆ ಸಾಕು ಹೂಕೋಸು ನೆನಪಿಗೆ ಬರುತ್ತದೆ. ಇದರಲ್ಲಿ ವಿಟಮಿನ್ ಸಿ ಕೆ ನಾರಿನ ಅಂಶ ಪೋಲಿಕ್ ಆಸಿಡ್ ಇರುವುದರಿಂದ ಕಿಡ್ನಿ ಆರೋಗ್ಯಕ್ಕೆ ಸೂಕ್ತವಾದ ಆಹಾರ ಅಂತ ಹೇಳಬಹುದು. ಈ ತರಕಾರಿ ಆಂತರಿಕವಾಗಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಇನ್ನೂ ಇವುಗಳ ಮಧ್ಯ ಕೇಸರಿ ಅಥವಾ ಕೆಂಪು ಬಣ್ಣದಲ್ಲಿ ಗೋಚರಿಸುವ ಕ್ಯಾರೆಟ್. ಎಲ್ಲರ ಫೇವರೆಟ್ ತರಕಾರಿ ಆಗಿದ್ದು ಇದು ಎಲ್ಲರನ್ನೂ ಆಕರ್ಷಣೆಯನ್ನು ಮಾಡುತ್ತದೆ. ರಕ್ತದಲ್ಲಿ ಕಂಡು ಬರುವ ಸೋಡಿಯಂ ಅಂಶವನ್ನು ನಿಯಂತ್ರಿಸಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಮಲ ಮೂತ್ರ ವಿಸರ್ಜನೆ ಮಾಡುವ ಮೂಲಕ ಹೊರಗೆ ತೆಗೆದು ಹಾಕುವ ಕೆಲಸವನ್ನು ಮಾಡುತ್ತದೆ. ಕಿಡ್ನಿ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ನಿತ್ಯವೂ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇನ್ನೂ ಮೂರನೆಯದು, ಇನ್ನೂ ಕಿಡ್ನಿ ಆರೋಗ್ಯಕ್ಕೆ ವಿಟಮಿನ್ ಡಿ ಅಂಶವುಳ್ಳ ಎಲ್ಲ ಆಹಾರವನ್ನು ಸೇವನೆ ಮಾಡಿ.

 

ವಿಟಮಿನ್ ಡಿ ಅಂಶವುಳ್ಳ ಆಹಾರವೂ ಕಿಡ್ನಿ ಆರೋಗ್ಯವನ್ನು ಒಟ್ಟಾರೆ ಕಾಪಾಡುತ್ತವೆ. ದೇಹದಲ್ಲಿ ಬೇಡವಾದ ತ್ಯಾಜ್ಯವನ್ನು ಹೊರಗೆ ಹಾಕಲು ವಿಟಮಿನ್ ಡಿ ಅಂಶವುಳ್ಳ ಆಹಾರವು ಸಹಾಯ ಮಾಡುತ್ತದೆ. ಅದಕ್ಕಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ ಮೊಟ್ಟೆ ಮೊಸರು ನಿಂಬೆ ಹಣ್ಣು ಕಿತ್ತಳೆ ಹಣ್ಣು. ಇನ್ನೂ ಎಳೆನೀರು ಕುಡಿಯುವುದರಿಂದ ದೇಹದಲ್ಲಿ ಶೇಖರಣೆ ಆದ ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶವನ್ನು ತೆಗೆದು ಹಾಕುತ್ತದೆ. ನಿಮಗೆ ಕಿಡ್ನಿ ಸ್ಟೋನ್ ಆಗಿ ಪದೇ ಪದೇ ನೋವು ಆಗುತ್ತಿದ್ದರೆ ಎಳೆನೀರು ಕುಡಿಯಿರಿ. ಇದರಿಂದ ಮೂತ್ರನಾಳ ಮೂತ್ರಕೋಶದಲ್ಲಿ ಆಗಿರುವ ಕಲ್ಲುಗಳನ್ನು ಕರಗಿಸುತ್ತದೆ. ಇದೊಂದು ನೈಸರ್ಗಿಕವಾದ ಮನೆಮದ್ದು ಅಂತ ಹೇಳಿದರೆ ತಪ್ಪಾಗಲಾರದು ಕಿಡ್ನಿ ವೈಫಲ್ಯ ಅಥವಾ ಸ್ಟೋನ್ ವಿಷಯದಲ್ಲಿ. ಮೂತ್ರ ವಿಸರ್ಜನೆ ಕಾರ್ಯವನ್ನು ಉತ್ತಮಗೊಳಿಸುತ್ತದೆ. ಇನ್ನೂ ಸೇಬು. ಇದರಲ್ಲಿ ಇರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿ ನಾರಿಂಶ ಮತ್ತು ಪ್ಯಾಕ್ಟಿನ್ ಎಂಬ ಅಂಶ ವಿಟಮಿನ್ಸ್ ಖನಿಜಗಳು ಇರುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಸೂಕ್ತವಾದ ಹಣ್ಣು ಅಂತ ಹೇಳಬಹುದು.
ಶುಭದಿನ.

Leave a Reply

Your email address will not be published. Required fields are marked *